ಬರೇಲಿ,ಮಾ.17-ಅಕ್ರಮ ಸಂಬಂಧ ಮತ್ತು ಬ್ಲಾಕ್‍ಮೇಲ್ ಪ್ರಕರಣದಲ್ಲಿ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಯೋಧನೊಬ್ಬನನ್ನು ಉತ್ತರ ಪ್ರದೇಶದ ಬರೇಲಿ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 13 ರಂದು ಸೇನಾ ಯೋಧ ಮನೋಜ್ ಸೇನಾಪತಿ ಅವರ ಪತ್ನಿ ಸುದೇಷ್ಣಾ ಅವರ ಹತ್ಯೆಯಾಗಿತ್ತು. ಪೊಲೀಸರು ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ತನಿಖೆಯ ಸಮಯದಲ್ಲಿ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿ, ಅದರ ಆಧಾರದ ಮೇಲೆ ನೆರೆ ಮನೆಯಲ್ಲಿ ವಾಸವಿದ್ದ ಮತ್ತೊಬ್ಬ ಯೋಧ ನಿತೀಶ್ ಪಾಂಡೆಯನ್ನು ಬಂಧಿಸಿದರು.
ನಿತೀಶ್ ಪತ್ನಿಯೊಂದಿಗೆ ಮನೋಜ್ ಅಕ್ರಮ ಸಂಬಂಧ ಹೊಂದಿದ್ದರು. ಆಕೆಯ ಅಶ್ಲೀಲ ಚಿತ್ರ ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್‍ಮೇಲ್ ಮಾಡುತ್ತಿದ್ದರು ಎಂದು ಅವರನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ನಗರ) ರಾಹುಲ್ ಭಾಟಿ ತಿಳಿಸಿದ್ದಾರೆ.
ಅಲೂಗಡ್ಡೆ ಕೋಲ್ಡ್ ಸ್ಟೋರೇಜ್ ಮೇಲ್ಛಾವಣಿ ಕುಸಿದು 8 ಮಂದಿ ಸಾವು
ಮಾರ್ಚ್ 13 ರಂದು ನೆರೆಯಲ್ಲೇ ವಾಸವಿದ್ದ ಮನೋಜ್ ಮನೆಗೆ ನಿತೀಶ್ ಹೋಗಿದ್ದಾರೆ. ಅಲ್ಲಿ ಮನೋಜ್‍ನ ಪತ್ನಿ ಸುದೇಷ್ನಾಳನ್ನು ಭೇಟಿಯಾಗಿ, ನಿನ್ನ ಪತಿಗೆ ಕರೆ ಮಾಡಿ ನನ್ನ ಪತ್ನಿಯ ಸಹವಾಸಕ್ಕೆ ಬರುವುದು ಬೇಡ ಮತ್ತು ಆಕೆಯ ನಗ್ನ ಚಿತ್ರಗಳು ಹಾಗೂ ವಿಡಿಯೋಗಳನ್ನು ಡಿಲಿಟ್ ಮಾಡುವಂತೆ ಹೇಳಲು ಒತ್ತಾಯಿಸಿದ್ದಾರೆ. ಈ ವಿಚಾರ ನಿತೀಶ್ ಮತ್ತು ಸುದೇಷ್ಣಾರ ನಡುವೆ ಕಾವೇರಿದ ಚರ್ಚೆಗೆ ಕಾರಣವಾಗಿದೆ.
ಮಾತು ಹಿಡಿತ ತಪ್ಪಿ ಜಗಳವಾಗಿದೆ. ಮೊದಲೇ ಪೂರ್ವಯೋಜಿತನಾಗಿದ್ದ ನಿತೀಶ್ ಜಗಳದ ವೇಳೆ ತನ್ನ ಬ್ಯಾಗ್‍ನಿಂದ ಆಯುಧ ತೆಗೆದು ಸುದೇಷ್ಣಾಳ ಕುತ್ತಿಗೆ ಮತ್ತು ದೇಹದ ಇತರ ಭಾಗಗಳ ಚುಚ್ಚಿ ಕೊಲೆ ಮಾಡಿದ್ದಾರೆ. ನಂತರ ತನ್ನ ಕೈ ಮತ್ತು ಚಾಕುವನ್ನು ತೊಳೆದು ಬ್ಯಾಗ್‍ನಲ್ಲಿಟ್ಟು ಅದನ್ನು ಬಿಸಾಕಿದ್ದಾರೆ.
ರಾಹುಲ್‍ಗಾಂಧಿ ಪದಚ್ಯುತಿಗೆ ಬಿಜೆಪಿ ಅಗ್ರಹ
ಪ್ರಕರಣದ ಹಿನ್ನೆಲೆ ತನಿಖೆ ನಡೆಸಿ, ಸಿಸಿಟಿವಿ ಪರಿಶೀಲಿಸಿದ ಪೊಲೀಸರು ನಿತೀಶ್ ಪಾಂಡೆಯನ್ನು ಆರೋಪಿ ಎಂದು ಗುರುತಿಸಿದ್ದಾರೆ. ಮಿಲಿಟರಿ ಪೊಲೀಸರ ಸಹಾಯದಿಂದ ನಿನ್ನೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ರಾಹುಲ್‍ಭಾಟಿ ತಿಳಿಸಿದ್ದಾರೆ. ಗಂಡನ ಅಕ್ರಮ ಸಂಬಂಧಕ್ಕೆ ಸುದೇಷ್ಣಾ ಭೀಕರವಾಗಿ ಹತ್ಯೆಯಾಗಿದ್ದಾರೆ.
Army, jawan, arrested, killing, colleague, wife, UP,