ಚೀನಾ ಗಡಿಯಲ್ಲಿ ಯುದ್ಧ ಟ್ಯಾಂಕರ್ ಗಳನ್ನು ನಿಯೋಜಿಸಿದ ಭಾರತ

Social Share

ನವದೆಹಲಿ,ಆ.27- ಚೀನಾ-ಭಾರತ ಗಡಿಭಾಗದಲ್ಲಿ ಭವಿಷ್ಯದ ಸವಾಲುಗಳನ್ನು ಎದುರಿಸಲು ಭಾರತ ಹಗುರವಾದ ಟ್ಯಾಂಕರ್‍ಗಳು, ಶಸ್ತ್ರಸಜ್ಜಿತ ಡ್ರೋಣ್‍ಗಳ ಸಮೂಹವನ್ನು ನಿಯೋಜಿಸಿದೆ. ಚೀನಾದಿಂದ ಭವಿಷ್ಯದಲ್ಲಿ ಬಲವಂತವಾಗಿ ಎದುರಾಗಬಹುದಾದ ಪರಿಸ್ಥಿತಿಯನ್ನು ನಿಭಾಯಿಸಲು ಭಾರತ, ಪ್ರಾಜೆಕ್ಟ್ ಜೋರ್‍ವಾರ್ ಶುರು ಮಾಡಿದೆ.

ಸುಮಾರು 350ಕ್ಕೂ ಹೆಚ್ಚಿನ ದೇಶಿ ನಿರ್ಮಿತ ಹಗುರವಾದ ಟ್ಯಾಂಕರ್‍ಗಳನ್ನು ಗಡಿಭಾಗದಲ್ಲಿ ಸಜ್ಜುಗೊಳಿಸಲಾಗಿದೆ. ಇವು ಅತಿವೇಗವಾಗಿ ಚಲಿಸುವುದಲ್ಲದೆ ಸುಲಭವಾಗಿ ಮತ್ತು ಸಂಚಲನಾತ್ಮಕವಾಗಿ ಪರ್ವತಶ್ರೇಣಿಗಳಲ್ಲಿ ಕಾರ್ಯ ನಿರ್ವಹಿಸಬಲ್ಲವಾಗಿವೆ.

ವಾಯುಮಾರ್ಗದಲ್ಲಿ ನಿಗಾವಹಿಸಲು ನವೋದ್ಯಮ ಸಂಸ್ಥೆಯೊಂದರ ಮೂಲಕ ಸಜ್ಜುಗೊಳಿಸಲಾದ ಶಸ್ತ್ರ ಸಜ್ಜಿತ ಡ್ರೋಣ್‍ಗಳನ್ನು ನಿಯೋಜಿಸಲಾಗಿದೆ. ಸ್ವಾಯತ್ತ ನಿಗಾವಣೆ ಮತ್ತು ಶಸ್ತ್ರಗಳನ್ನೊಳಗೊಂಡ ಎಎಸ್‍ಎಡಿ-ಎಸ್ ಡ್ರೋಣ್‍ಗಳು ಸಮರ್ಪಕ ಪರಿಯಲ್ಲಿ ಕ್ಷೇತ್ರಗಳ ನೆಲೆಯನ್ನು ನಾಶಪಡಿಸಬಲ್ಲವಾಗಿವೆ.

ಆಳವಾದ ಮತ್ತು ಅತಿ ಎತ್ತರದ ಪ್ರದೇಶದಲ್ಲೂ ಕಾರ್ಯ ನಿರ್ವಹಿಸಬಲ್ಲ ತಾಂತ್ರಿಕ ಶಕ್ತಿಯನ್ನು ಮೇಕ್ ಇನ್ ಇಂಡಿಯಾದಲ್ಲಿ ನಿರ್ಮಿಸಲಾದ ಈ ಡ್ರೋಣ್‍ಗಳು ಹೊಂದಿವೆ. ಕಳೆದ 25 ತಿಂಗಳ ಹಿಂದೆ ಈಶಾನ್ಯದ ಲಡಾಕ್‍ನಲ್ಲಿ ಭಾರತ ಮತ್ತು ಚೀನಾದ ನಡುವೆ ಸೃಷ್ಟಿಯಾದ ಉದ್ವಿಗ್ನತೆಯ ಪರಿಣಾಮ ಪಾಠ ಕಲಿತ ಭಾರತ, ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ. ದೂರದ ಅಂತರದವರೆಗೂ ಗುರಿ ತಲುಪ ಬಲ್ಲ ಕ್ಷಿಪಣಿಗಳ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಹೊಸದಾಗಿ ನಿಯೋಜಿಸಲಾದ ಯುದ್ಧ ಟ್ಯಾಂಕರ್‍ಗಳು 25 ಟನ್‍ಗಿಂತಲೂ ಒಳಗಿನ ತೂಕ ಹೊಂದಿದೆ. ಆದರೆ ಅತಿ ಹೆಚ್ಚು ಶಕ್ತಿಶಾಲಿಯಾಗಿದ್ದು, ಸಾಕಷ್ಟು ಸಿಡಿತಲೆಗಳ ತೂಕವನ್ನು ಹೊತ್ತೊಯ್ಯಬಲ್ಲವಾಗಿವೆ ಎಂದು ಸೇನೆ ತಿಳಿಸಿದೆ.

ಈ ಮೊದಲು ಭಾರತ ರಷ್ಯಾ ನಿರ್ಮಿತ ಟಿ-90ಎಸ್, ಟಿ-72 ಯುದ್ಧ ಟ್ಯಾಂಕರ್‍ಗಳನ್ನು ಬಳಸುತ್ತಿತ್ತು.ಅವು 40ರಿಂದ 50 ಟನ್ ತೂಕ ಹೊಂದಿದ್ದವು. ದೇಶೀ ನಿರ್ಮಿತ ಟ್ಯಾಂಕರ್‍ಗಳು ಹೆಚ್ಚು ಸಾಮಥ್ರ್ಯದೊಂದಿಗೆ ವ್ಯಾಪಕ ಕ್ಷಮತೆಯನ್ನು ಹೊಂದಿವೆ ಎಂದು ಹೇಳಲಾಗಿದೆ.

Articles You Might Like

Share This Article