Thursday, December 5, 2024
Homeಬೆಂಗಳೂರುಐದು ಮಂದಿ ಆರೋಪಿಗಳ ಸೆರೆ : 47 ಲಕ್ಷ ಮೌಲ್ಯದ 55 ಲ್ಯಾಪ್‍ಟಾಪ್, 28 ಮೊಬೈಲ್,...

ಐದು ಮಂದಿ ಆರೋಪಿಗಳ ಸೆರೆ : 47 ಲಕ್ಷ ಮೌಲ್ಯದ 55 ಲ್ಯಾಪ್‍ಟಾಪ್, 28 ಮೊಬೈಲ್, 9 ದ್ವಿಚಕ್ರವಾಹನ ಜಪ್ತಿ

Arrest of five accused: 55 laptops, 28 mobiles, 9 motorcycles worth 47 lakhs seized

ಬೆಂಗಳೂರು,ಅ.8-ನಗರ ಪೋಲೀಸರು ಐದು ಮಂದಿ ಆರೋಪಿಗಳನ್ನು ಬಂ„ಸಿ 47 ಲಕ್ಷ ರೂ. ಮೌಲ್ಯದ 55 ಲ್ಯಾಪ್‍ಟಾಪ್‍ಗಳು, 9 ದ್ವಿಚಕ್ರ ವಾಹನಗಳು ಹಾಗೂ 28 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಕುಮಾರಸ್ವಾಮಿ ಲೇಔಟ್:
ಕಿಟಕಿ ಮೂಲಕ ಕೈ ತೂರಿಸಿ ಕೀ ತೆಗೆದುಕೊಂಡು ಮನೆ ಬೀಗ ತೆಗೆದು ಒಳನುಗ್ಗಿ 4 ಲ್ಯಾಪ್‍ಟಾಪ್, ಟೈಟಾನ್ ವಾಚ್ ಕಳ್ಳತನ ಮಾಡಿದ್ದ ಮೂವರನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಎಸ್.ಲೇಔಟ್ 1ನೇ ಹಂತದ ನಿವಾಸಿಯೊಬ್ಬರು ಲ್ಯಾಪ್‍ಟಾಪ್‍ನಲ್ಲಿ ಕೆಲಸ ಮಾಡಿ ನಂತರ ಮುಂಬಾಗಿಲನ್ನು ಲಾಕ್ ಮಾಡಿ ಕೀಯನ್ನು ಕಿಟಕಿ ಬಳಿ ಇಟ್ಟು ನಿದ್ರೆಗೆ ಜಾರಿದ್ದಾಗ ಕಳ್ಳರು ಕಿಟಕಿ ಮೂಲಕ ಕೈ ತೂರಿಸಿ ಕೀ ತೆಗೆದುಕೊಂಡು ಲಾಪ್‍ಟಾಪ್‍ಗಳು ಹಾಗೂ ವಾಚನ್ನು ಕಳವು ಮಾಡಿಕೊಂಡು ಹೋಗಿದ್ದ ಬಗ್ಗೆ ದೂರು ನೀಡಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೋಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿ ಕದಿರೇನಹಳ್ಳಿ ಬ್ರಿಡ್ಜ್ ಬಳಿ ದ್ವಿಚಕ್ರ ವಾಹನ ಸಮೇತ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಮಾಲನ್ನು ವಶಪಡಿಸಿಕೊಂಡು ಮತ್ತೊಬ್ಬ ಸಹಚರನ ಬಗ್ಗೆ ಮಾಹಿತಿ ಕಲೆ ಹಾಕಿ ಗೊರಗುಂಟೆಪಾಳ್ಯದ ಲಾರಿ ನಿಲ್ದಾಣದ ಹತ್ತಿರ ದ್ವಿಚಕ್ರ ವಾಹನದ ಸಮೇತ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಕಳ್ಳತನ ಮಾಡಿದ್ದ ಲಾಪ್‍ಟಾಪ್‍ಗಳನ್ನು ಪರಿಚಯಸ್ಥರಿಗೆ ನೀಡಿರುವುದಾಗಿ ತಿಳಿಸಿದ ಮೇರೆಗೆ ಅವರಿಂದ ಲಾಪ್‍ಟಾಪ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳವು ಮಾಡಿದ್ದ ಎರಡು ದ್ವಿಚಕ್ರ ವಾಹನಗಳನ್ನು ಚನ್ನರಾಯಪಟ್ಟಣ-ಶ್ರವಣಬೆಳಗೊಳ ರಸ್ತೆ ಖಾಲಿ ಜಾಗದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಕಳವು ಮಾಡಿದ 19 ಲ್ಯಾಪ್‍ಟಾಪ್‍ಗಳನ್ನು ಆತನ ಸ್ನೇಹಿತನು ಠಾಣೆಗೆ ಒಪ್ಪಿಸಿದ್ದಾನೆ. ಅಲ್ಲದೆ ಕಳವು ಮಾಡಿದ ಮೊಬೈಲ್‍ಗಳನ್ನು ಮಾರಾಟ ಮಾಡಿದ ಅಂಗಡಿಯಿಂದ 15 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ 34 ಲ್ಯಾಪ್‍ಟಾಪ್‍ಗಳು, 28 ಮೊಬೈಲ್ ಮತ್ತು 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರದಲ್ಲಿ ಮೊಬೈಲ್ ಇ-ಲಾಸ್ಟ್‍ನಲ್ಲಿ ಒಟ್ಟು 11 ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಮಾಲೀಕರಿಗೆ ನ್ಯಾಯಾಲಯದ ಅನುಮತಿ ಪಡೆದು ನೀಡಲಾಗುವುದು. ಅದೇ ರೀತಿ ಮೊಬೈಲ್ ಐಎಂಇಐನಲ್ಲಿ ಪತ್ತೆಯಾಗಬೇಕಾದ ಒಟ್ಟು 17 ಮೊಬೈಲ್ ಪತ್ತೆ ಕಾರ್ಯ ಮುಂದುವರೆದಿದೆ. ಇನ್‍ಸ್ಪೆಕ್ಟರ್ ಜಗದೀಶ್ ಮತ್ತು ಸಿಬ್ಬಂದಿ ತಂಡ ಪ್ರಕರಣವನ್ನು ಬೇ„ಸುವಲ್ಲಿ ಯಶಸ್ವಿಯಾಗಿದೆ.

ಕಾರಿನ ಗಾಜು ಒಡೆದು ಕಳ್ಳತನ:
ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನ ಕಿಟಕಿ ಗಾಜು ಒಡೆದು ಲಾಪ್‍ಟಾಪ್ ಕಳ್ಳತನ ಮಾಡಿದ್ದ ಆರೋಪಿಯೊಬ್ಬನನ್ನು ಜಯನಗರ ಠಾಣೆ ಪೆÇಲೀಸರು ಬಂಧಿಸಿ 12 ಲಕ್ಷ ಮೌಲ್ಯದ 17 ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಜಯನಗರ 5ನೇ ಹಂತದಲ್ಲಿರುವ ಕಾಫಿ ಡೇ ಅಂಗಡಿ ಮುಂದೆ ಕಾರನ್ನು ನಿಲ್ಲಿಸಿದ್ದು ಕೆಲ ಸಮಯದ ಬಳಿಕ ಬಂದು ನೋಡಿದಾಗ ಕಾರಿನ ಕಿಟಕಿ ಗಾಜು ಒಡೆದು ಲಾಪ್‍ಟಾಪ್ ಕಳ್ಳತನ ಮಾಡಿರುವುದು ಕಂಡುಬಂದಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಖಚಿತ ಮಾಹಿತಿ ಕಲೆ ಹಾಕಿ ತಮಿಳುನಾಡಿನ ಸೇಲಂನಲ್ಲಿರುವ ದಡಗಪಟ್ಟಿ ಸರ್ಕಲ್ ಬಳಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕಾರಿನ ಗಾಜು ಒಡೆದು ಲ್ಯಾಪ್‍ಟಾಪ್ ಕಳವು ಮಾಡಿರುವುದಾಗಿ ತಿಳಿಸಿದ್ದಾನೆ.

ಆರೋಪಿಯನ್ನು ಸುದೀರ್ಘ ವಿಚಾರಣೆಗೊಳಪಡಿಸಿದಾಗ ನಗರದ ಕೆಲವು ಕಡೆಗಳಲ್ಲಿ ಅದೇ ರೀತಿ ಕಾರಿನ ಗಾಜು ಒಡೆದು ಲಾಪ್‍ಟಾಪ್‍ಗಳನ್ನು ಕಳವು ಮಾಡಿ ಮಾರಾಟ ಮಾಡುವ ಸಲುವಾಗಿ ತಮಿಳುನಾಡಿನ ಸೇಲಂನಲ್ಲಿರುವ ತನ್ನ ವಾಸದ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ ಮೇರೆಗೆ ಆತನ ಮನೆಯಿಂದ 17 ಲಾಪ್‍ಟಾಪ್‍ಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಆರೋಪಿಯ ಬಂಧನದಿಂದ ಜಯನಗರ ಪೊಲೀಸ್ ಠಾಣೆಯ 5 ಲ್ಯಾಪ್‍ಟಾಪ್ ಪ್ರಕರಣಗಳಲ್ಲಿ 6 ಲ್ಯಾಪ್‍ಟಾಪ್ ಪತ್ತೆಯಾಗಿದ್ದು, 11 ಲ್ಯಾಪ್‍ಟಾಪ್‍ಗಳ ಪತ್ತೆ ಕಾರ್ಯ ಮುಂದುವರೆದಿದೆ. ಇನ್‍ಸ್ಪೆಕ್ಟರ್ ದೀಪಕ್ ಮತ್ತು ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.

ಅಂತರರಾಜ್ಯ ಕಳ್ಳನ ಬಂಧನ:
ನಗರದಲ್ಲಿ ದ್ವಿಚಕ್ರ ವಾಹನ, ಲ್ಯಾಪ್‍ಟಾಪ್ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳನೊಬ್ಬನನ್ನು ಎಚ್‍ಎಸ್‍ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿ 12 ಲಕ್ಷ ರೂ. ಮೌಲ್ಯದ 5 ದ್ವಿಚಕ್ರ ವಾಹನಗಳು ಹಾಗೂ 4 ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಪಿಜಿಯೊಂದರ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳುವಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೋಲೀಸರು ವಿವಿಧ ಮಾಹಿತಿಯನ್ನು ಕಲೆ ಹಾಕಿ ಮಂಗಮ್ಮನಪಾಳ್ಯದ ಮುಖ್ಯರಸ್ತೆಯಲ್ಲಿ ಆರೋಪಿ ಯೊಬ್ಬನನ್ನು 3 ಲ್ಯಾಪ್‍ಟಾಪ್ ಹಾಗೂ 1 ಟ್ಯಾಬ್ ಜೊತೆಗೆ ದ್ವಿಚ್ರಕ ವಾಹನ ಸಮೇತ ಬಂಧಿಸಿದ್ದಾರೆ.

ಆರೋಪಿಯನ್ನು ವಿಚಾರಣೆ ಗೊಳಪಡಿಸಿದಾಗ ಕಳವು ಮಾಡಿದ ದ್ವಿಚಕ್ರ ವಾಹನಗಳನ್ನು ಅಗರದ ಕೆರೆ ಬಳಿಯ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ ಮೇರೆಗೆ ಅಲ್ಲಿಗೆ ತೆರಳಿ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ಬಂಧನದಿಂದ ಎಚ್‍ಎಸ್‍ಆರ್ ಲೇಔಟ್‍ನ ಮೂರು ಪ್ರಕರಣಗಳು, ಜೆಪಿನಗರ, ಜಯನಗರ, ಸುದ್ದುಗುಂಟೆಪಾಳ್ಯ, ವಿವೇಕನಗರ ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣಗಳು ಸೇರಿದಂತೆ ಒಟ್ಟು 7 ಪ್ರಕರಣಗಳು ಪತ್ತೆಯಾಗಿವೆ. ಇನ್‍ಸ್ಪೆಕ್ಟರ್ ಹರೀಶ್‍ಕುಮಾರ್ ಮತ್ತು ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News