ಇಬ್ಬರು ಸರಗಳ್ಳರ ಬಂಧನ

Social Share

ಬೆಂಗಳೂರು,ಜು.19-ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಗುಲ್ಬರ್ಗ ಮೂಲದ ಇಬ್ಬರನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿ 29 ಗ್ರಾಂ ತೂಕದ 1.25 ಲಕ್ಷ ರೂ. ಬೆಲೆ ಬಾಳುವ ಸರವನ್ನು ವಶಪಡಿಸಿಕೊಂಡಿದ್ದಾರೆ.

ಸುರೇಶ್(26) ಮತ್ತು ಸಂಗಮೇಶ ಮ್ಯಾಗೇರಿ(22) ಬಂಧಿತ ಆರೋಪಿಗಳು. ಜು.12ರಂದು ರಾತ್ರಿ 9 ಗಂಟೆ ಸುಮಾರಿನಲ್ಲಿ ಶೀಲ ಎಂಬುವರು ಡಿ ಗ್ರೂಪ್ ಲೇಔಟ್‍ನ ಪೂರ್ಣಚಂದ್ರ ಲೇಔಟ್ 22ನೇ ಕ್ರಾಸ್‍ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ್ ಸೈಕಲ್‍ನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ತಕ್ಷಣ ಶೀಲಾ ಅವರು ಸರವನ್ನು ಬಿಗಿಯಾಗಿ ಹಿಡಿದುಕೊಂಡಾಗ ಸರಗಳ್ಳರು ಜೋರಾಗಿ ಎಳೆದುಕೊಂಡು ಕೈಗೆ ಸಿಕ್ಕಿದ 29 ಗ್ರಾಂ ತೂಕದ ತುಂಡಾದ ಸರದೊಂದಿಗೆ ಪರಾರಿಯಾಗಿದ್ದರು.

ಈ ಬಗ್ಗೆ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಇಬ್ಬರನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಇನ್‍ಸ್ಪೆಕ್ಟರ್ ಲೋಹಿತ್ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article