ಹೇಗ್,ಮಾ.18-ಉಕ್ರೇನಿಯನ್ ಮಕ್ಕಳನ್ನು ಕಾನೂನುಬಾಹಿರವಾಗಿ ಗಡಿಪಾರು ಮಾಡಿದ ಯುದ್ಧ ಅಪರಾಧದ ಆರೋಪದ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಬಂಧನ ವಾರಂಟ್ ಪ್ರಕಟಿಸಿದೆ.
ಇದೇ ಆರೋಪದ ಮೇಲೆ ಮಕ್ಕಳ ಹಕ್ಕುಗಳ ರಷ್ಯಾದ ಅಧ್ಯಕ್ಷೀಯ ಕಮಿಷನರ್ ಮರಿಯಾ ಲ್ವೊವಾ-ಬೆಲೋವಾ ವಿರುದ್ಧವೂ ವಾರೆಂಟ್ ಹೊರಡಿಸಿರುವುದಾಗಿ ಹೇಗ್ ಮೂಲದ ಕೋರ್ಟ್ ಹೇಳಿದೆ. ಕೋರ್ಟ್ ಆದೇಶವನ್ನು ಉಕ್ರೇನ್ ಸ್ವಾಗತಿಸಿದೆ. ಇದೊಂದು ಐತಿಹಾಸಿಕ ನಿರ್ಧಾರ ಎಂದು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಪ್ರಶಂಸಿದ್ದಾರೆ.
ಚೀನಾದ ನಾಯಕ ಕ್ಸಿ ಜಿನ್‍ಪಿಂಗ್‍ನಿಂದ ಮಾಸ್ಕೋ ಭೇಟಿ ಮತ್ತು ಕೈವ್‍ನ ಪಡೆಗಳಿಗೆ ಹೆಚ್ಚಿನ ಫೈಟರ್ ಜೆಟ್‍ಗಳು ಸೇರಿದಂತೆ ಉಕ್ರೇನ್‍ನ ಮೇಲಿನ ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇರುವ ಸಂದರ್ಭದಲ್ಲೇ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಉರಿಗೌಡ-ನಂಜೇಗೌಡ ಸಿನಿಮಾ ಮಾಡಲು ಮುಂದಾದ ಸಚಿವ ಮುನಿರತ್ನ : ಹೆಚ್ಡಿಕೆ ಕೆಂಡ
ರಷ್ಯಾ ಆಕ್ರಮಣದಿಂದ 16,000 ಕ್ಕೂ ಹೆಚ್ಚು ಉಕ್ರೇನಿಯನ್ ಮಕ್ಕಳನ್ನು ರಷ್ಯಾಕ್ಕೆ ಗಡೀಪಾರು ಮಾಡಲಾಗಿದೆ, ಅನೇಕರನ್ನು ಸಂಸ್ಥೆಗಳು ಮತ್ತು ಸಾಕು ಮನೆಗಳಲ್ಲಿ ಇರಿಸಲಾಗಿರುವುದರಿಂದ ಈ ಆದೇಶ ಹೊರಡಿಸಲಾಗಿದೆ.
ವಿಧಾನಸಭೆ ಚುನಾವಣೆ : ಇಲ್ಲಿದೆ ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ
ಅಂತಾರಾಷ್ಟ್ರೀಯ ನ್ಯಾಯಾಲಯದ 120 ಸದಸ್ಯ ರಾಷ್ಟ್ರಗಳಿಗೆ ರಷ್ಯಾ ಅಧ್ಯಕ್ಷ ಪುಟಿನ್ ಕಾಲಿಟ್ಟರೆ ಅವರನ್ನು ಬಂಧಿಸಲಾಗುವುದು ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಂಖಾನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
#ArrestWarrant, #VladimirPutin, #UkraineWarCrime, #Allegations,