ನವದೆಹಲಿ, ಜ.9- ಸದ್ಯದ ಮಟ್ಟಿಗೆ ದೆಹಲಿಯಲ್ಲಿ ಲಾಕ್‍ಡವನ್ ವಿಸುವ ಯಾವುದೇ ಚಿಂತನೆ ಇಲ್ಲ. ಜನರು ಮಾಸ್ಕ್ ಧರಿಸುವುದನ್ನು ಮುಂದುವರಿಸುವ ತನಕ ಲಾಕ್‍ಡೌನ್ ಯೋಚನೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ರ್ಅವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿಯಲ್ಲಿ 24 ಗಂಟೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 22,000 ದಾಟುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.ಕನಿಷ್ಠ ನಿರ್ಬಂಧಗಳನ್ನಷ್ಟೇ ಹೇರಲು ನಾವು ಪ್ರಯತ್ನಿಸುತ್ತೇವೆ. ಇದರಿಂದ ಜನರ ಜೀವನಾಧಾರಕ್ಕೆ ತೊಂದರೆಯಾಗುವುದಿಲ್ಲ ಎಂದಿರುವ ಅವರು ಮಾಸ್ಕ್‍ಗಳನ್ನು ಧರಿಸುವಂತೆ ಮತ್ತು ಗಾಬರಿಯಾಗದಂತೆ ಜನತೆಗೆ ಮನವಿ ಮಾಡಿದ್ದಾರೆ.
