ವಾಷಿಂಗ್ಟನ್, ಆ.7- ನ್ಯೂಜೆರ್ಸಿಯಲ್ಲಿ ನಡೆದ ವರ್ಣರಂಜಿತ ಸ್ಪರ್ಧೆಯಲ್ಲಿ ವರ್ಜೀನಿಯಾದ ಭಾರತ ಮೂಲದ ಆರ್ಯ ವಾಲ್ವೇಕರ್ ಅವರು ಮಿಸ್ ಇಂಡಿಯಾ ಯುಎಸ್‍ಎ-2022 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಎಲ್ಲರನ್ನು ಸೆಳೆಯುವ 18ರ ಹರೆಯದ ರೂಪವತಿ ಆರ್ಯ ಬೆಳ್ಳಿತೆರೆಯಲ್ಲಿ ಮತ್ತು ಚಲನಚಿತ್ರಗಳು ಮತ್ತು ಟಿವಿಯಲ್ಲಿ ಕಾಣಿಸಿಕೊಳ್ಳುವುದು ನನ್ನ ಬಾಲ್ಯದ ಕನಸು ಎಂದು ಹೇಳಿದರು.
ಸ್ಪರ್ಧೆಯ ಪ್ರಶ್ನೆಯಲ್ಲಿ ಹೊಸ ಸ್ಥಳಗಳನ್ನು ಅನ್ವೇಷಿಸುವುದು, ಅಡುಗೆ ಮಾಡುವುದು ಮತ್ತು ಸಂವಾದ ನನಗೆ ಇಷ್ಟ ಎಂದು ಹೇಳಿ ಎಲ್ಲರನ್ನು ಚಕಿತಗೊಳಿಸಿದರು. ವರ್ಜೀನಿಯಾ ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ವರ್ಷದ ಪ್ರೀ-ಮೆಡಿಕಲ್ ವಿದ್ಯಾರ್ಥಿನಿ ಸೌಮ್ಯಾ ಶರ್ಮಾ ಮೊದಲ ರನ್ನರ್ ಅಪ್ ಮತ್ತು ನ್ಯೂಜೆರ್ಸಿಯ ಸಂಜನಾ ಚೆಕುರಿ ಎರಡನೇ ರನ್ನರ್ ಅಪ್ ಎಂದು ಘೋಷಿಸಲಾಯಿತು.
ಇದು ಭಾರತದ ಹೊರಗೆ ದೀರ್ಘಕಾಲ ನಡೆಯುತ್ತಿರುವ ಭಾರತೀಯ ಸ್ಪರ್ಧೆಯಾಗಿದೆ. ಈ ವರ್ಷದ ಸ್ಪರ್ಧೆ 40ನೇ ವಾರ್ಷಿಕೋತ್ಸವವಾಗಿದ್ದು, ಇದನ್ನು ನ್ಯೂಯಾರ್ಕ್ ಮೂಲದ ಭಾರತೀಯ-ಅಮೆರಿಕನ್ನರಾದ ನೀಲಂ ಸರನ್ ಅವರು ವಲ್ರ್ಡ್‍ವೈಡ್ ಪೇಜೆಂಟ್ಸ ಬ್ಯಾನರ್ ಅಡಿಯಲ್ಲಿ ಪ್ರಾರಂಭಿಸಿದರು.
ಕಾರ್ಯಕ್ರಮ ಯಶಸ್ವಿಯಾಗಿ ನಡೆದಿರುವುದಕ್ಕೆ ವಿಶ್ವದಾದ್ಯಂತ ನೆಲೆಸಿರುವ ಭಾರತೀಯರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ. ವಾಷಿಂಗ್ಟನ್ ರಾಜ್ಯದ ಅಕ್ಷಿ ಜೈನ್ ಕಿರೀಟವನ್ನು ಪಡೆದರು. ಭಾರತ ಯುಎಸ್‍ಎ ಮತ್ತು ನ್ಯೂಯಾರ್ಕ್‍ನ ತನ್ವಿ ಗ್ರೋವರ್ ಮಿಸ್ ಟೀನ್ ಇಂಡಿಯಾ ಯುಎಸ್‍ಎ ಕಿರೀಟವನ್ನು ಪಡೆದರು.
30 ರಾಜ್ಯಗಳನ್ನು ಪ್ರತಿನಿಧಿಸುವ 74 ಸ್ರ್ಪಧಿಗಳು ಮೂರು ವಿಭಿನ್ನ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಎಲ್ಲಾ ಮೂರು ವಿಭಾಗಗಳ ವಿಜೇತರು ಅದೇ ಗುಂಪಿನಿಂದ ಆಯೋಜಿಸಲಾದ ವಲ್ರ್ಡ್‍ವೈಡ್ ಪೇಜೆಂಟ್‍ಗಳಲ್ಲಿ ಭಾಗವಹಿಸಲು ಮುಂದಿನ ವರ್ಷದ ಆರಂಭದಲ್ಲಿ ಮುಂಬೈಗೆ ಉಚಿತ ಟಿಕೆಟ್‍ಗಳನ್ನು ಪಡೆಯುತ್ತಾರೆ.
ಕಾರ್ಯಕ್ರಮದಲ್ಲಿ ಗಾಯಕಿ ಶಿಬಾನಿ ಕಶ್ಯಪ್, ಮಿಸ್ ಇಂಡಿಯಾ ವಲ್ರ್ಡ್ ಖುಷಿ ಪಟೇಲ ಮತ್ತು ಸ್ವಾತಿ ವಿಮಲ ಭಾಗವಹಿಸಿದ್ದರು.