Saturday, September 23, 2023
Homeಅಂತಾರಾಷ್ಟ್ರೀಯ2030ರ ವೇಳೆಗೆ ರಸ್ತೆಗಿಳಿಯಲಿವೆ ಯಂತೆ ಮೂರನೇ ಎರಡರಷ್ಟು EV ವಾಹನಗಳು

2030ರ ವೇಳೆಗೆ ರಸ್ತೆಗಿಳಿಯಲಿವೆ ಯಂತೆ ಮೂರನೇ ಎರಡರಷ್ಟು EV ವಾಹನಗಳು

- Advertisement -

ಲಂಡನ್,ಸೆ.15- ಮುಂಬರುವ 2030ರ ವೇಳೆಗೆ ಜಾಗತಿಕ ಕಾರು ಮಾರಾಟದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಸಂಖ್ಯೆ ಮೂರನೇ ಎರಡರಷ್ಟು ಪಾಲು ಹೊಂದಲಿವೆ ಎಂದು ಅಂದಾಜಿಸಲಾಗಿದೆ. ಬ್ಯಾಟರಿ ಬೆಲೆಗಳ ಕುಸಿತದಿಂದ ಉತ್ತೇಜಿತವಾಗಿರುವ ಉದ್ಯಮಿಗಳು ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಆರಂಭಿಸಿರುವುದರಿಂದ 2030 ರ ವೇಳೆಗೆ ಜಾಗತಿಕ ಕಾರು ಮಾರಾಟದಲ್ಲಿ ಮೂರನೇ ಎರಡರಷ್ಟು ಪಾಲು ಹೊಂದಬಹುದು ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ.

ರಾಕಿ ಮೌಂಟೇನ್ ಇನ್‍ಸ್ಟಿಟ್ಯೂಟ್ ವರದಿಯು ಈ ದಶಕದಲ್ಲಿ ಬ್ಯಾಟರಿ ವೆಚ್ಚಗಳು ಅರ್ಧದಷ್ಟು ಕಡಿಮೆಯಾಗಬಹುದು ಎಂದು ಊಹಿಸಿದೆ.ಬ್ಯಾಟರಿಗಳು ದುಬಾರಿಯಾಗಿದೆ ಮತ್ತು ಇವಿ ವಾಹನಗಳ ಬೆಲೆಯ ಶೇ.40ರಷ್ಟು ಪಾಲನ್ನು ಹೊಂದಿದೆ, ಈ ವೆಚ್ಚವು ಇಲ್ಲಿಯವರೆಗೆ ಅವುಗಳನ್ನು ಅನೇಕ ಗ್ರಾಹಕರಿಗೆ ಭರಿಸಲಾಗದಂತೆ ಮಾಡಿತ್ತು.

- Advertisement -

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-09-2023)

ಆದರೆ ಕಾರು ತಯಾರಕರು ಹೆಚ್ಚು ಪರಿಣಾಮಕಾರಿಯಾದ ಇವಿಗಳನ್ನು ತಯಾರಿಸಲು ಹೊಸ ಬ್ಯಾಟರಿ ರಸಾಯನಶಾಸ, ವಸ್ತುಗಳು ಮತ್ತು ಸಾಫ್ಟ್ ವೇರ್ ಗಳಲ್ಲಿ ಹೂಡಿಕೆ ಮಾಡುವುದರಿಂದ ಆ ಬೆಲೆಗಳು ಸ್ಥಿರವಾಗಿ ಕಡಿಮೆಯಾಗುತ್ತಿವೆ ಎಂದು ಆರ್‍ಎಂಐ ಹಿರಿಯ ಪ್ರಾಂಶುಪಾಲ ಕಿಂಗ್ಸ್‍ಮಿಲ್ ಬಾಂಡ್ ರಾಯಿಟರ್ಸ್‍ಗೆ ತಿಳಿಸಿದರು.

ವಿಶ್ಲೇಷಣೆಯ ಪ್ರಕಾರ, ಯುರೋಪ್ ಮತ್ತು ಚೀನಾದಲ್ಲಿ ಎಲೆಕ್ಟ್ರಿಕ್ ಮಾದರಿಗಳ ತ್ವರಿತ ಬೆಳವಣಿಗೆಯು 2030 ರ ವೇಳೆಗೆ ಇವಿ ವಾಹಗಳ ಮಾರಾಟವು ಕನಿಷ್ಠ ಆರು ಪಟ್ಟು ಹೆಚ್ಚಾಗಲಿದೆಯಂತೆ.

ಯುರೋಪಿಯನ್ ಯೂನಿಯನ್‍ನಲ್ಲಿನ ಇವಿ ಮಾರಾಟವು ಜುಲೈನಲ್ಲಿ ಶೇ.61ರಷ್ಟು ಜಿಗಿದಿದ್ದು, 2022 ರಲ್ಲಿ ಅದೇ ತಿಂಗಳಿಗೆ ಹೋಲಿಸಿದರೆ ಎಲ್ಲಾ ಕಾರು ಮಾರಾಟಗಳಲ್ಲಿ 13.6% ರಷ್ಟಿದೆ. ಯುರೋಪಿಯನ್ ಒಕ್ಕೂಟವು 2035 ರಿಂದ ಹೊಸ ಪಳೆಯುಳಿಕೆ-ಇಂಧನ ಮಾದರಿಗಳ ಮಾರಾಟವನ್ನು ನಿಷೇ„ಸುವ ಗುರಿಯನ್ನು ಹೊಂದಿದೆ.

#pricesfall, #globalcarsales, #EVs, #2030,

- Advertisement -
RELATED ARTICLES
- Advertisment -

Most Popular