ಅಶೋಕ್ ಸೂಟ ಅವರಿಂದ ಹ್ಯಾಪಿಯೆಸ್ಟ್ ಹೆಲ್ತ್ ಆರಂಭ

Social Share

ಬೆಂಗಳೂರು, 15 ಜುಲೈ 2022: ಖ್ಯಾತ ಉದ್ಯಮಿ ಮತ್ತು Happiest Minds ನ ಕಾರ್ಯಕಾರಿ ಅಧ್ಯಕ್ಷ ಅಶೋಕ್ ಸೂಟ ಅವರು ಇಂದು ತಮ್ಮ ಮತ್ತೊಂದು ಔದ್ಯಮಿಕ ಸಂಸ್ಥೆಯಾದ Happiest Health ಅನ್ನು ಘೋಷಣೆ ಮಾಡಿದ್ದಾರೆ. ಆರೋಗ್ಯ ಮತ್ತು ಕ್ಷೇಮಕ್ಕೆ ಸಂಬಂಧಿಸಿದಂತೆ ಆಳವಾದ, ವಿಶ್ವಾಸಾರ್ಹವಾದ ಮತ್ತು ನಂಬಲರ್ಹ ಜ್ಞಾನವನ್ನು ಒದಗಿಸುವ ಗುರಿಯನ್ನು ಹೊಂದಿರುವ ಜಾಗತಿಕ ಆರೋಗ್ಯ ಮತ್ತು ಕ್ಷೇಮ ಜ್ಞಾನದ ಒಂದು ಉದ್ಯಮವಾಗಿದೆ.

ತನ್ನ ಅಧಿಕೃತ ವೆಬ್ ಸೈಟ್ Happiest Health ಅನ್ನು ಈಗಾಗಲೇ ಆರಂಭಿಸಿದೆ. ಆರೋಗ್ಯ ಮತ್ತು ಯೋಗಕ್ಷೇಮ ಕ್ಷೇತ್ರದಲ್ಲಿ ಇದು ಅಶೋಕ್ ಸೂಟ ಅವರ ಎರಡನೇ ಬದ್ಧತೆಯಾಗಿದೆ. ಕಳೆದ ವರ್ಷ SKAN ಎಂಬ ವಯೋಸಹಜ ಮತ್ತು ನರ ವೈಜ್ಞಾನಿಕ ಅಸ್ವಸ್ಥತೆಗಳ ಬಗ್ಗೆ ಸಂಶೋಧನೆ ನಡೆಸುವ ಲಾಭರಹಿತ ವೈದ್ಯಕೀಯ ಸಂಶೋಧನಾ ಸಂಸ್ಥೆಯನ್ನು ಆರಂಭಿಸಿದ್ದರು.

ಹ್ಯಾಪಿಯೆಸ್ಟ್ ಹೆಲ್ತ್ ಜಾಗತಿಕವಾಗಿ ಆರೋಗ್ಯ ಮತ್ತು ಸ್ವಾಸ್ಥ್ಯದ ಮೇಲಿನ ಎರಡು ವಿಶ್ವಾಸಾರ್ಹ ಮತ್ತು ನಂಬಲರ್ಹವಾದ ಜ್ಞಾನದ ಮೂಲಗಳಲ್ಲಿ ಗುರುತಿಸಲ್ಪಡುವ ಗುರಿಯನ್ನು ಹೊಂದಿದೆ. ಆದರೆ, ಸಮಗ್ರ ಔಷಧ ಹಾಗೂ ಸೌಮ್ಯವಾದ ಕಿಂಡರ್ ಚಿಕಿತ್ಸೆಗಳಿಗೆ ಚಿಂತನೆಯ ನಾಯಕತ್ವಕ್ಕೆ ಚಾಲನೆ ನೀಡುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಹ್ಯಾಪಿಯೆಸ್ಟ್ ಹೆಲ್ತ್ ನ ಅಧ್ಯಕ್ಷ ಅಶೋಕ್ ಸೂಟ ಅವರು, “ಹ್ಯಾಪಿಯೆಸ್ಟ್ ಹೆಲ್ತ್ ಜಾಗತಿಕವಾಗಿ ಆರೋಗ್ಯ ರಕ್ಷಣೆಯ ಜ್ಞಾನವು ಕೇವಲ ಪುನರಾವರ್ತಿತ ವಾಸ್ತವಿಕ ಮಾಹಿತಿಯಾಗಿದೆ ಎಂಬ ಅರಿವಿಗೆ ಬದ್ಧವಾಗಿದೆ. ಅದು ಸಾಮಾನ್ಯ ವ್ಯಕ್ತಿಯ ಕಾಳಜಿಗಳಿಗೆ ಅಗತ್ಯವಾಗಿ ಉತ್ತರಿಸುವುದಿಲ್ಲ ಅಥವಾ ಸಂಕೀರ್ಣ ಆರೋಗ್ಯ ಹಾಗೂ ಕ್ಷೇಮ ಸಮಸ್ಯೆಗಳ ಬಗ್ಗೆ ಆಳವಾದ, ಸುಸಂಬದ್ಧವಾದ ತಿಳುವಳಿಕೆಯನ್ನು ನೀಡುತ್ತದೆ. ನಾವು ಆರೋಗ್ಯ ಮತ್ತು ಕ್ಷೇಮ ಜ್ಞಾನದ ಜಾಗತಿಕ ನಾಯಕರಾಗಲು ಬಯಸುತ್ತೇವೆ ಮತ್ತು ನಮ್ಮನ್ನು ಸಂತೋಷ ಹಾಗೂ ಕ್ಷೇಮ ಸಲಹೆಗಾರರನ್ನಾಗಿ ಇಟ್ಟುಕೊಳ್ಳಲು ಬಯಸುತ್ತೇವೆ. ನಾವು ಹ್ಯಾಪಿಯೆಸ್ಟ್ ಹೆಲ್ತ್ ಮೂಲಕ ಸಮಗ್ರವಾದ ಔಷಧದ ಪ್ರಾಮುಖ್ಯತೆಯನ್ನು ನಿರ್ಮಾಣ ಮಾಡಲು ಬಯಸುತ್ತೇವೆ. ಅದೇ ರೀತಿ ಆರಂಭಿಕ ರೋಗ ನಿರ್ಣಯ ಮತ್ತು ಸಾಕ್ಷ್ಯಾಧಾರಿತವಾದ ಚಿಕಿತ್ಸೆಗಳ ಕುರಿತು ತಜ್ಞರ ಮೂಲಕ ಅಮೂಲ್ಯವಾದ ಸಲಹೆ ಸೂಚನೆಗಳನ್ನು ಒದಗಿಸುತ್ತೇವೆ ಮತ್ತು ಸಹಾನುಭೂತಿ ಮತ್ತು ಉತ್ಸಾಹದಿಂದ ಸೇವೆಗಳನ್ನು ನೀಡಲು ಬದ್ಧರಾಗಿದ್ದೇವೆ’’ ಎಂದರು.

`ಉತ್ತಮ ಜ್ಞಾನ. ಉತ್ತಮ ಆರೋಗ್ಯ’ ಎಂಬ ಉದ್ದೇಶದೊಂದಿಗೆ ಹ್ಯಾಪಿಯೆಸ್ಟ್ ಹೆಲ್ತ್ ಡಿಜಿಟಲ್ ಪ್ಲಾಟ್ ಫಾರ್ಮ್ ಗಳಾದ್ಯಂತ ಕಸ್ಟಮೈಸ್ ಮಾಡಿದ ಸಂವಾದಾತ್ಮಕ ಕ್ಷೇಮ ಮತ್ತು ಆರೋಗ್ಯ ಜ್ಞಾನವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಸಂಶೋಧನೆ ಆಧಾರಿತ ವಿಷಯಗಳು, ಸಂಬಂಧಿತ ಕ್ಷೇತ್ರಗಳಲ್ಲಿನ ಪ್ರಗತಿ ಹಾಗೂ ಬೆಳವಣಿಗೆಗಳು, ಆರಂಭಿಕ ರೋಗನಿರ್ಣಯ ಮಾಡುವ ಉಪಕರಣಗಳು, ಬಳಕೆದಾರರ ವಿಚಾರಗಳು, ಪ್ರತಿಕ್ರಿಯೆಗಳ ಮೇಲೆ ಬಲವಾದ ಗಮನವನ್ನು ನೀಡುತ್ತದೆ ಮತ್ತು ಕಿಂಡರ್, ಸಾಫ್ಟ್ ಚಿಕಿತ್ಸೆಗಳತ್ತ ಗಮನಹರಿಸಲಿದೆ. ಈ ಪ್ಲಾಟ್ ಫಾರ್ಮ್ ನಲ್ಲಿ ತಜ್ಞ ವೈದ್ಯರು ಲೇಖನಗಳನ್ನು ಬರೆಯುತ್ತಾರೆ ಮತ್ತು ಅವರದ್ದೇ ಆದ ಬ್ಲಾಗ್ ಗಳು ಇರುತ್ತವೆ. ಇದಲ್ಲದೇ ಪರಿಣತ ವೈದ್ಯರ ಸಮಿತಿಯು ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಸಲಹೆಸೂಚನೆಗಳನ್ನು ನೀಡುತ್ತದೆ. ಆರೋಗ್ಯ ಮತ್ತು ಕ್ಷೇಮಕ್ಕೆ ಸಂಬಂಧಿಸಿದಂತೆ ಜ್ಞಾನ ಹಂಚಿಕೆಗಾಗಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ವೈದ್ಯಕೀಯ ಸಂಶೋಧನಾ ಸಂಸ್ಥೆಗಳೊಂದಿಗೆ ಪ್ಲಾಟ್ ಫಾರ್ಮ್ ಸಹಯೋಗ ಮಾಡಿಕೊಂಡಿರುವುದು ಮತ್ತೊಂದು ಪ್ರಮುಖ ಅಂಶವಾಗಿದೆ. ಅದೇರೀತಿ ಎಲ್ಲಾ ಆಧುನಿಕ ಅಲೋಪತಿ ಪದ್ಧತಿಗಳನ್ನು ಜೊತೆಯಲ್ಲೇ ಹ್ಯಾಪಿಯೆಸ್ಟ್ ಹೆಲ್ತ್ ಆಯುರ್ವೇದ, ಹೋಮಿಯೋಪತಿ, ನ್ಯಾಚುರೋಪತಿ, ಕ್ಷೇಮಕ್ಕಾಗಿ ಯೋಗದಂತಹ ಚಿಕಿತ್ಸೆಗಳ ಬಗ್ಗೆಯೂ ಗಮನಹರಿಸುತ್ತದೆ.

ಈ ಬಗ್ಗೆ ಮಾತನಾಡಿದ ಹ್ಯಾಪಿಯೆಸ್ಟ್ ಹೆಲ್ತ್ ನ ಪ್ರಧಾನ ಸಂಪಾದಕ (ಡಿಜಿಟಲ್) ರವಿ ಜೋಶಿ ಅವರು, “ಇತ್ತೀಚಿನ ದಿನಗಳಲ್ಲಿ ಪರಿಶೀಲಿಸಬಹುದಾದ ವೈದ್ಯಕೀಯ ವಿಷಯಕ್ಕೆ ಬಹುದೊಡ್ಡ ಅವಕಾಶ ಮತ್ತು ಸಾಮರ್ಥ್ಯವಿದೆ. ಇದನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಹ್ಯಾಪಿಯೆಸ್ಟ್ ಹೆಲ್ತ್ ಕ್ಷೇಮ ಜ್ಞಾನದಲ್ಲಿರುವ ಅಂತರವನ್ನು ನಿವಾರಣೆ ಮಾಡುವ ಗುರಿಯನ್ನು ಹಾಕಿಕೊಂಡಿದೆ. ವಿಶ್ವಾಸಾರ್ಹ ಮತ್ತು ಅದಕ್ಕಿಂತ ಪ್ರಮುಖವಾಗಿ ಸ್ಪೆಕ್ಟ್ರಂನಾದ್ಯಂತ ಜನರಿಗೆ ಸಂಬಂಧಿಸಿದ್ದಾಗಿದ್ದು, ನಮ್ಮ ಓದುಗರ ಸರ್ವಾಂಗೀಣ ಕ್ಷೇಮಕ್ಕಾಗಿ ಉತ್ಸಾಹದಿಂದ ಕಾಳಜಿ ವಹಿಸಲಾಗುತ್ತದೆ. ಈ ಮೂಲಕ ನಾವು ಆರೋಗ್ಯ ಮತ್ತು ಕ್ಷೇಮವನ್ನು ನೀಡುವುದರೊಂದಿಗೆ ಭಾರತದಲ್ಲಿ ಹಾಗೂ ವಿಶ್ವದಾದ್ಯಂತ ಗರಿಷ್ಠ ಬಳಕೆದಾರರನ್ನು ತಲುಪುವ ಗುರಿಯನ್ನು ಹೊಂದಿದ್ದೇವೆ’’ ಎಂದು ತಿಳಿಸಿದರು.

ಹ್ಯಾಪಿಯೆಸ್ಟ್ ಹೆಲ್ತ್ ಗ್ಲೋಬಲ್ ಇನ್ ಸ್ಟಿಟ್ಯೂಟ್ ಆಫ್ ಎಕ್ಸ್ ಲೆನ್ಸ್ ನ ಅಧ್ಯಯನಗಳು ಸೇರಿದಂತೆ ಹೊಸ ಸಂಶೋಧನೆಯಿಂದ ಪಡೆದ ಆರೋಗ್ಯ ಮತ್ತು ಕ್ಷೇಮದಲ್ಲಿನ ಪ್ರಗತಿಗಳು ಹಾಗೂ ಬೆಳವಣಿಗೆಗಳೊಂದಿಗೆ ಪ್ರೇಕ್ಷಕರಿಗೆ ಶಿಕ್ಷಣ ನೀಡುತ್ತದೆ. ಪ್ಲಾಟ್ ಫಾರ್ಮ್ ವೈದ್ಯರ ಸಮಿತಿಯಲ್ಲಿನ ವೈದ್ಯರು ಅತಿಥಿ ಪ್ರಬಂಧಗಳು, ಅನನ್ಯ ದೃಷ್ಟಿಕೋನಗಳು ಹಾಗೂ ಆಸಕ್ತಿದಾಯಕ ವೈದ್ಯಕೀಯ ಅನುಭವಗಳನ್ನು ನೀಡುವ ಲೇಖನಗಳ ಮೂಲಕ ಬಹು ವಿಭಾಗಗಳನ್ನು ಒಳಗೊಂಡಿರುತ್ತದೆ.

ಹ್ಯಾಪಿಯೆಸ್ಟ್ ಹೆಲ್ತ್ ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಆಶಿಶ್ ಪ್ರತಾಪ್ ಸಿಂಗ್ ಅವರು ಮಾತನಾಡಿ, “ನಗರದ ಜನಸಂಖ್ಯೆಯಲ್ಲಿ ಹೆಚ್ಚುತ್ತಿರುವ ಜೀವನಶೈಲಿ-ಚಾಲಿತ ಆರೋಗ್ಯ ಸಮಸ್ಯೆಗಳ ಬಗ್ಗೆ ಸಾಕಷ್ಟು ತಿಳಿದಿರುತ್ತದೆ ಮತ್ತು ಅದರ ಬಗ್ಗೆ ಕಾಳಜಿ ವಹಿಸಲಾಗುತ್ತದೆ. ಹ್ಯಾಪಿಯೆಸ್ಟ್ ಹೆಲ್ತ್ ನಲ್ಲಿ ತಡೆಗಟ್ಟುವ ಕ್ಷೇಮ ಮತ್ತು ಆರಂಭಿಕ ರೋಗನಿರ್ಣಯದ ಮೂಲಕ ಕಾಳಜಿಯನ್ನು ತಗ್ಗಿಸುವ ಅಗತ್ಯವನ್ನು ನಾವು ನೋಡುತ್ತಿದ್ದೇವೆ. ಎಲ್ಲಾ ವಯೋಮಾನದ ಜನರು ಸಮಗ್ರ ಕ್ಷೇಮ ಮತ್ತು ಸಮಗ್ರ ಔಷಧದ ಪ್ರಾಮುಖ್ಯತೆಯನ್ನು ಹೆಚ್ಚು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಹ್ಯಾಪಿಯೆಸ್ಟ್ ಹೆಲ್ತ ಮೂಲಕ ಈ ಅಗತ್ಯತೆಗಳನ್ನು ಪೂರೈಸುವುದು ಮತ್ತು ಎಲ್ಲಾ ಜ್ಞಾನವನ್ನು ಸುಸಂಬದ್ಧ, ಅರ್ಥಪೂರ್ಣವಾದ ರೀತಿಯಲ್ಲಿ ತರಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ’’ ಎಂದು ತಿಳಿಸಿದರು.

ಹ್ಯಾಪಿಯೆಸ್ಟ್ ಹೆಲ್ತ್ ಭಾರತದಲ್ಲಿನ ಶ್ರೇಣಿ- II & III ಪ್ರದೇಶಗಳನ್ನು ಪ್ರಾದೇಶಿಕ ಲಿಖಿತ ಮತ್ತು ವಿಡಿಯೋ ವಿಷಯಗಳೊಂದಿಗೆ ಪೂರೈಸುತ್ತದೆ. ಮುಂದಿನ ಒಂದು ವರ್ಷದಲ್ಲಿ ಪ್ಲಾಟ್ ಫಾರ್ಮ್ ಆರಂಭಿಸಲಿದೆ. ಹ್ಯಾಪಿಯೆಸ್ಟ್ ಹೆಲ್ತ್ ಕೂಡ ಶೀಘ್ರದಲ್ಲೇ ತನ್ನದೇ ಆದ ಪಾಡ್ ಕಾಸ್ಟ್, ವೆಬ್ ಸರಣಿ ಮತ್ತು ಆಡಿಯೋ ವಿಷಯವನ್ನು ಆರಂಭಿಸಲಿದೆ.

Articles You Might Like

Share This Article