ವಿಜಯೇಂದ್ರಗೆ ಸಿಎಂ ಸ್ಥಾನ ಸಿಗಲೆಂದು ಅಶ್ವಮೇಧ ಯಾಗ

Social Share

ಮಂಡ್ಯ.ಅ.27-ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ 2023ರ ಮುಖ್ಯಮಂತ್ರಿ ಸ್ಥಾನ ಸಿಗಬೇಕೆಂದು ನಗರದ ಕಾಳಿಕಾಂಬ ದೇವಾಲಯದ ಆವರಣದಲ್ಲಿ ಅಭಿಮಾನಿಗಳು ಅಶ್ವಮೇಧ ಯಾಗ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶಿವಕುಮಾರ ಆರಾಧ್ಯ ಮಾತನಾಡಿ,ಮಂಡ್ಯದ ಕಾಳಿಕಾಂಬ ದೇವಾಲಯದಲ್ಲಿ ವಿಶೇಷವಾಗಿ ಅಶ್ವಮೇಧ ಯಾಗಕ್ಕೆಂದು ಒಂದು ಕುದರೆಯನ್ನು ತರಿಸಿ ಯಾಗ ನಡೆಸಲಾಗಿದೆ ಎಂದರು.

ಅಶ್ವಮೇಧಯಾಕ್ಕೆಂದು ದ್ವಾಪರ ಕಾಲಯುಗದಲ್ಲಿ ಕುದುರೆಯ ಸಾರಥ್ಯವನ್ನು ಅರ್ಜುನ ವಹಿಸಿದ್ದರು. ಅದೇರೀತಿ ಈ ಯಾಗ ನಡೆಸಿ ವಿಜಯೇಂದ್ರ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದು ನಮ್ಮೆಲ್ಲರ ಹಾಗೂ ಅಭಿಮಾನಿಗಳ ಆಶಯವಾಗಿದೆ.

ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಕಿಡಿ

ಇದನ್ನು ಮನಗಂಡು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಾಗೂ ರಾಜ್ಯದ ನಾಯಕರು ಇದನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ರೈತ ಮೋರ್ಚಾದ ನಗರಾಧ್ಯಕ್ಷ ಹೊಸಹಳ್ಳಿ ಶಿವು, ಮುಖಂಡರಾದ ಮಾದರಾಜ ಅರಸು, ಮಹದೇವು, ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

Articles You Might Like

Share This Article