ಅವಳಿನಗರ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಡಿಸಿಎಂ ಅಶ್ವಥ್ ನಾರಾಯಣ

ರಾಮನಗರ,ಏ.20-ರಾಮನಗರ-ಚನ್ನಪಟ್ಟಣವನ್ನು ಅವಳಿ ನಗರವಾಗಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ, ಒಳಚರಂಡಿ, ಬೀದಿದೀಪ, ಕೆರೆ, ಪಾರ್ಕ್ ಅಭಿವೃದ್ಧಿ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ಕೊಡಲಾಗುವುದು ಎಂದರು.

ಈ ಬಾರಿ ನಗರಸಭೆ ಚುನಾವಣೆಗಳು ಎರಡು ನಗರಗಳಲ್ಲಿ ನಡೆಯುತ್ತಿದೆ. ಮುಂದಿನ ಚುನಾವಣೆ ನಗರಪಾಲಿಕೆ ಚುನಾವಣೆಯಾಗಿ ಪರಿವರ್ತನೆಯಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಚನ್ನಪಟ್ಟಣ, ರಾಮನಗರ ಅಭಿವೃದ್ಧಿಪಡಿಸಲು ಪೂರಕವಾದ ಕ್ರಮಗಳನ್ನುಕೈಗೊಂಡು ಎಲ್ಲ ರೀತಿ ಸುಧಾರಣೆ ತರಲಾಗುವುದು.

ರಾಮನಗರ ನಗರಾಭಿವೃದ್ಧಿ ಪ್ರಾಕಾರಕ್ಕೆ ಮಾಸ್ಟರ್ ಪ್ಲಾನ್ ರೂಪಿಸಲಾಗುವುದು. ಅರ್ಕಾವತಿ ನದಿ ಪುನಶ್ಚೇತನಗೊಳಿಸಲಾಗುವುದು. ರಾಮನಗರ ಜಿಲ್ಲೆ ಅಭಿವೃದ್ಧಿಗೆ ಸರ್ವ ರೀತಿಯಲ್ಲಿ ಪ್ರಯತ್ನಿಸಲಾಗುತ್ತದೆ. ಜಿಲ್ಲೆಯಲ್ಲಿ ಈಗಾಗಲೇ ರಾಜೀವ್ ಗಾಂ ವಿಶ್ವ ವಿದ್ಯಾಲಯ, ಸಂಸ್ಕøತ ವಿವಿ ಮಂಜೂರಾಗಿದ್ದು, ಮತ್ತೊಂದು ವಿಶ್ವವಿದ್ಯಾಲಯವನ್ನು ರಾಮ ನಗರಕ್ಕೆ ಪ್ರತ್ಯೇಕವಾಗಿ ನೀಡುವ ಉದ್ದೇಶವಿದೆ ಎಂದು ಹೇಳಿದರು.