ಭಾರತ- ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ

Social Share

ದುಬೈ, ಆ. 28- ಕ್ರಿಕೆಟ್ ಲೋಕದಲ್ಲಿ ಪ್ರತಿಷ್ಠಿತ ಟೂರ್ನಿಯಾಗಿರುವ ಏಷ್ಯಾ ಕಪ್‍ನ ರಂಗು ಈಗಾಗಲೇ ರಂಗೇರಿದ್ದರೂ, ಅಸಲಿ ಆಟವು ಇಂದಿನಿಂದ ಆರಂಭಗೊಳ್ಳಲಿದೆ. ಇಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದರೆ, ಮತ್ತೊಂದೆಡೆ ಸ್ಟಾರ್ ಆಟಗಾರರು ಮುಂಬರುವ ಚುಟುಕು ವಿಶ್ವಕಪ್‍ನ ಹಿನ್ನೆಲೆಯಲ್ಲಿ ತಮ್ಮ ಸಾಮಥ್ರ್ಯವನ್ನು ತೋರ್ಪಡಿಸುವ ಅಗ್ನಿಪರೀಕ್ಷೆಗೆ ಗುರಿಯಾಗಿದ್ದಾರೆ.

ಚುಟುಕು ಕ್ರಿಕೆಟ್ ಮಾದರಿಯಲ್ಲಿ ಟೀಂ ಇಂಡಿಯಾ ನಂಬರ್ 1 ಸ್ಥಾನದಲ್ಲಿದೆ, ಇದಕ್ಕೆ ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾರಂತಹ ಯುವ ಆಟಗಾರರ ಬ್ಯಾಟಿಂಗ್ ವೈಭವವೇ ಕಾರಣ. ಮುಂಬರುವ ವಿಶ್ವಕಪ್‍ನಲ್ಲಿ ಸ್ಥಾನ ಪಡೆಯಲು ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್‍ರಂತಹ ಸ್ಟಾರ್ ಆಟಗಾರರಿಗೆ ಪೈಪೋಟಿ ನೀಡಲು ಈ ಯುವ ಆಟಗಾರರು ಏಷ್ಯಾಕಪ್‍ನಲ್ಲಿ ತಮ್ಮ ಸಾಮಥ್ರ್ಯವನ್ನು ತೋರಿಸಲು ಮುಂದಾಗಿದ್ದಾರೆ.

ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕಳೆದ 2 ವರ್ಷಗಳಿಂದಲೂ ತಮ್ಮ ಸ್ಪೋಟಕ ಆಟವನ್ನು ಪ್ರದರ್ಶಿಸಲು ಪದೇ ಪದೇ ಎಡವುತ್ತಿದ್ದರಿಂದ, ಜಿಂಬಾಬ್ವೆ ವಿರುದ್ಧದ ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು, ಈಗ ಏಷ್ಯಾಕಪ್‍ನಲ್ಲಿ ಸ್ಥಾನ ಪಡೆದಿದ್ದು, ಇಂದು 100ನೇ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.

ಕನ್ನಡಿಗ ಹಾಗೂ ಉಪನಾಯಕ ಕೆ.ಎಲ್.ರಾಹುಲ್ ಐಪಿಎಲ್ ನಂತರ ಗಾಯಗೊಂಡಿದ್ದರಿಂದ ನ್ಯೂಜಿಲ್ಯಾಂಡ್, ಶ್ರೀಲಂಕಾ, ವೆಸ್ಟ್‍ಇಂಡೀಸ್, ಇಂಗ್ಲೆಂಡ್ ಸರಣಿಯಿಂದ ಹೊರಗುಳಿದಿದ್ದರು, ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಯಶಸ್ವಿಯಾಗಿ ನಾಯಕತ್ವ ನಿಭಾಯಿಸಿದರೂ ಕೂಡ ಸ್ಪೋಟಕ ಬ್ಯಾಟಿಂಗ್ ನಡೆಸುವಲ್ಲಿ ಎಡವಿರುವುದರಿಂದ ರಾಹುಲ್‍ಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್ ದೃಷ್ಟಿಯಿಂದ ಏಷ್ಯಾಕಪ್ ಮಹತ್ತರ ಸರಣಿಯಾಗಿದೆ.

ಐಪಿಎಲ್‍ನಲ್ಲಿ ಮಿಂಚು ಹರಿಸಿ ಬಿಸಿಸಿಐ ಆಯ್ಕೆ ಮಂಡಳಿಯ ಗಮನ ಸೆಳೆದಿದ್ದ ದಿನೇಶ್ ಕಾರ್ತಿಕ್ ಕೂಡ ಸ್ಪೋಟಕ ಆಟವನ್ನು ಪ್ರದರ್ಶಿಸಲು ಎಡವುತ್ತಿದ್ದಾರೆ, ಅಲ್ಲದೆ ರಿಷಭ್ ಪಂತ್, ಸಂಜುಸಮ್ಸನ್‍ರ ಪೈಪೋಟಿಯ ನಡುವೆಯೂ ವಿಶ್ವಕಪ್‍ನಲ್ಲಿ ಸ್ಥಾನ ಪಡೆಯಬೇಕಾದರೆ ಏಷ್ಯಾಕಪ್‍ನಲ್ಲಿ ತಮ್ಮ ಬ್ಯಾಟ್‍ನಿಂದ ರನ್‍ಗಳ ಸುರಿಮಳೆ ಸುರಿಸಬೇಕಾಗುತ್ತದೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಅಲೌಂಡರ್ ರವೀಂದ್ರಾ ಜಡೇಜಾ ಕೂಡ ಹೆಚ್ಚು ವಿಶ್ರಾಂತಿ ಪಡೆದಿರುವುದರಿಂದ ತಮ್ಮ ಎಂದಿನ ಲಯವನ್ನು ಕಂಡುಕೊಳ್ಳಲು ಏಷ್ಯಾಕಪ್ ಸರಣಿಯಲ್ಲಿ ಮಿಂಚಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.

ಭಾರತ ತಂಡವು ವೇಗದ ಬೌಲಿಂಗ್‍ಗೆ ಹೇಳಿ ಮಾಡಿಸಿದ ತಂಡವಾಗಿದೆ, ಆದರೆ ಏಷ್ಯಾಕಪ್‍ನಂತಹ ಪ್ರಮುಖ ಸರಣಿಯಾಗಿ ಜಸ್‍ಪ್ರೀತ್ ಬೂಮ್ರಾ, ಹರ್ಷಲ್ ಪಟೇಲ್‍ರ ಅನುಪಸ್ಥಿತಿಯಲ್ಲಿ ಯುವ ವೇಗಿಗಳಾದ ಅರ್ಷದೀಪ್ ಸಿಂಗ್, ಆವೇಶ್‍ಖಾನ್, ಸ್ಪಿನ್ನರ್ ರವಿಬಿಸ್ನೋಯ್ ಅವರು ತಮ್ಮ ಸಾಮಥ್ರ್ಯ ತೋರಿಸಲು ಏಷ್ಯಾಕಪ್ ಸರಣಿ ವರದಾನವಾಗಿದೆ.

ಬಾಬರ್- ರಿಜ್ವಾನ್ ಆಸರೆ:
ಭಾರತದಷ್ಟೇ ಪಾಕಿಸ್ತಾನ ಕೂಡ ಚುಟುಕು ಕ್ರಿಕೆಟ್‍ನಲ್ಲಿ ಬಲಿಷ್ಠ ತಂಡವಾಗಿದೆ. ರಾಂಕಿಂಗ್ ಪಟ್ಟಿಯಲ್ಲಿ 3ನೆ ಸ್ಥಾನದಲ್ಲಿರುವ ಬಾಬರ್ ಅಜಮ್ ಪಡೆಯು ಕಳೆದ ವಿಶ್ವಕಪ್‍ನಲ್ಲಿ ಭಾರತ ತಂಡವನ್ನು ಮಣಿಸಿದ್ದು ಇಂದು ನಡೆಯುವ ಹೈವೋಲ್ಟೇಜ್ ಪಂದ್ಯದಲ್ಲೂ ಗೆಲುವಿಗಾಗಿ ಕಾತರಿಸುತ್ತಿದೆ.

ಪಾಕಿಸ್ತಾನ ತಂಡವು ಹೆಚ್ಚಾಗಿ ನಾಯಕ ಬಾಬರ್ ಅಜಮ್, ವಿಕೆಟ್ ಕೀಪರ್ ಮೊಹ ಮ್ಮದ್ ರಿಜ್ವಾನ್‍ರನ್ನು ನೆಚ್ಚಿಕೊಂಡಿದೆ ಎಂಬುದು ಇತ್ತೀಚಿನ ಕೆಲವು ಸರಣಿಗಳಿಂದ ಸಾಬೀತಾಗಿದೆ. ಪಾಕ್ ತಂಡದಲ್ಲಿ ಫಖರ್ ಜಮಾನ್, ಆಸಿಫ್ ಆಲಿ, ಇಫ್ತಿಕರ್ ಅಹ್ಮದ್‍ರಂತಹ ಸ್ಟಾರ್ ಆಟಗಾರರಿದ್ದರೂ ಕೂಡ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿರುವುದರಿಂದ ಮುಂಬರುವ ಚುಟುಕು ವಿಶ್ವಕಪ್‍ನ ದೃಷ್ಟಿಯಿಂದ ಆ ತಂಡದ ಸ್ಟಾರ್ ಆಟಗಾರರು ಏಷ್ಯಾಕಪ್ ಸರಣಿಯಲ್ಲಿ ಮಿಂಚುವ ಅವಶ್ಯಕತೆಯಿದೆ.

ಶಾಹಿನ್ ಕೊರತೆ:
ಭಾರತದಂತೆ ಪಾಕಿಸ್ತಾನವು ಕೂಡ ಸ್ಟಾರ್ ಬೌಲರ್‍ಗಳ ಕೊರತೆ ಎದುರಿಸುತ್ತಿದೆ. ಕಳೆದ ಬಾರಿ ಚುಟುಕು ವಿಶ್ವಕಪ್‍ನಲ್ಲಿ ಭಾರತ ತಂಡವನ್ನು ಸೋಲಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ವೇಗದ ಬೌಲರ್ ಶಾಹಿನ್ ಆಫ್ರಿದಿ ಅವರ ಅನುಪಸ್ಥಿತಿಯು ಪಾಕ್ ಅನ್ನು ಕಾಡುವುದರಿಂದ ಉಳಿದ ಬೌಲರ್‍ಗಳ ಮೇಲೆ ಒತ್ತಡವಿದೆ. ಆ ತಂಡದ ಬೌಲರ್‍ಗಳಾದ ಹೈದರ್ ಆಲಿ, ಮೊಹಮ್ಮದ್ ನವಾಜ್, ಉಪನಾಯಕ ಶಬಾದ್‍ಖಾನ್‍ರಂತಹ ಆಟಗಾರರಿಗೆ ಏಷ್ಯಾಕಪ್ ಅಗ್ನಿಪರೀಕ್ಷೆಯಾಗಿದೆ.

ಕೊಹ್ಲಿಗೆ ಎಬಿಡಿ ಶುಭಾಶಯ: ಡರ್ಬನ್, ಆ. 28- ಚುಟುಕು ಕ್ರಿಕೆಟ್‍ನಲ್ಲ 100ನೆ ಪಂದ್ಯವನ್ನಾಡುತ್ತಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ, ಆರ್‍ಸಿಬಿ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿಡಿವಿಲಿಯರ್ಸ್ ಟ್ವೀಟ್ ಮೂಲಕ ಶುಭ ಕೋರಿದ್ದಾರೆ. ಕೊಹ್ಲಿ ಅವರು ತಮ್ಮ ಚುಟುಕು ಕ್ರಿಕೆಟ್‍ನ ನೂರನೇ ಪಂದ್ಯವನ್ನು ಏಷ್ಯಾಕಪ್ ಅದರಲ್ಲೂ ಪಾಕಿಸ್ತಾನದ ವಿರುದ್ಧ ಆಡುತ್ತಿರುವ ಕ್ರೀಡಾಭಿಮಾನಿಗಳ ಕಣ್ಣು ವಿರಾಟ್ ಮೇಲೆಯೇ ನೆಟ್ಟಿದೆ.

ಸೋಟಕ ಆಟಗಾರ ಎನಿಸಿಕೊಂಡಿದ್ದರೂ 2019ರಿಂದಲೂ ಅವರು ಶತಕದ ಬರ ಎದುರಿಸುತ್ತಿದ್ದರೂ ಕೂಡ ಇಂದಿನ ಅವರ 100ನೇ ಪಂದ್ಯದಲ್ಲಿ ಅವರನ್ನು ಸೋಟಕ ಆಟವನ್ನು ಆಡಲಿದ್ದು , ಅವರ ಆಟವನ್ನು ವೀಕ್ಷಿಸಲು ನಾನು ಕಾತುರನಾಗಿದ್ದೇನೆ, ಕೊಹ್ಲಿರಂತಹ ಸರ್ವಶ್ರೇಷ್ಠ ಆಟಗಾರರೊಂದಿಗೆ ಡ್ರೆಸಿಂಗ್ ರೂಮ್ ಹಂಚಿಕೊಂಡಿದ್ದು ಕೂಡ ನನ್ನ ಪುಣ್ಯ ಎಂದು ಎಬಿಡಿವಿಲಿಯರ್ಸ್ ತನ್ನ ಆಪ್ತ ಗೆಳೆಯ ವಿರಾಟ್ ಕೊಹ್ಲಿಯ ಗುಣಗಾನ ಮಾಡಿದ್ದಾರೆ.

ಏಷ್ಯಾಕಪ್ ವಿರಾಟ್‍ಗೆ ಕೊನೆಯ ಸರಣಿಯಲ್ಲ
ನವದೆಹಲಿ,ಆ. 28- ಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕರಾಗಿದ್ದ ವಿರಾಟ್ ಕೊಹ್ಲಿ ಅವರಿಗೆ ಏಷ್ಯಾಕಪ್ ಕೊನೆಯ ಸರಣಿಯಾಗುವುದಿಲ್ಲ ಎಂಬ ವಿಶ್ವಾಸವನ್ನು ವಿಶ್ವಕಪ್ ವಿಜೇತ ನಾಯಕ ಕಪಿಲ್‍ದೇವ್ ಅವರು ವ್ಯಕ್ತಪಡಿಸಿದ್ದಾರೆ.
ಚುಟುಕು ಮಾದರಿಯಲ್ಲಿ ಕೊಹ್ಲಿ ಬದಲಿ ಆಟಗಾರನ ಬಗ್ಗೆ ಪ್ರತಿಕ್ರಿಯಿಸಿರುವ ಕಪಿಲ್‍ದೇವ್, ವಿರಾಟ್ ಕೊಹ್ಲಿ ಅವರು ಪದೇ ಪದೇ ವಿಶ್ರಾಂತಿ ಪಡೆಯುವ ಬದಲು ಹೆಚ್ಚು ಹೆಚ್ಚು ಪಂದ್ಯಗಳನ್ನಾಡುವ ಮೂಲಕ ಅವರು ಮತ್ತೆ ತಮ್ಮ ಸೋಟಕ ಬ್ಯಾಟಿಂಗ್‍ಗೆ ಮರಳಬಹುದು.

ಏಷ್ಯಾ ಕಪ್ ಸರಣಿಯೇ ವಿರಾಟ್‍ಗೆ ಕೊನೆಯ ಅವಕಾಶ, ಅಂತಿಮ ಆವೃತ್ತಿಯನ್ನು ಬಿಂಬಿಸಲು ಹೊರಟರೆ ಅದು ಸರಿಯಾದ ನಿರ್ಣಯವಲ್ಲ ಎಂದು ಕಪಿಲ್‍ದೇವ್ ಹೇಳಿದರು.

ವಿರಾಟ್ ಕೊಹ್ಲಿ ಅವರು ಒಮ್ಮೆ ತಮ್ಮ ಬ್ಯಾಟಿಂಗ್ ವೈಭವಕ್ಕೆ ಮರಳಿದರೆ ಅವರನ್ನು ತಡೆದು ನಿಲ್ಲಿಸಲು ಸಾಧ್ಯವಿಲ್ಲ , ಮುಂಬರುವ ಚುಟುಕು ವಿಶ್ವಕಪ್ ದೃಷ್ಟಿಯಿಂದಲೂ ಭಾರತ ತಂಡಕ್ಕೆ ವಿರಾಟ್ ಕೊಹ್ಲಿಯಂತಹ ಶ್ರೇಷ್ಠ ಆಟಗಾರರಾದ ಅವಶ್ಯಕತೆ ಇದೆ ಎಂದು ಕಪಿಲ್ ದೇವ್ ತಿಳಿಸಿದರು.

ನಿರೀಕ್ಷೆ ದೊಡ್ಡಮಟ್ಟದಲ್ಲಿದೆ: ರಿಷಭ್‍ಪಂತ್
ದುಬೈ,ಆ. 28- ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯಗಳು ನಡೆಯುತ್ತಿದ್ದರೆ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲೇ ಇರುತ್ತದೆ ಎಂದು ವಿಕೆಟ್ ಕೀಪರ್ ರಿಷಭ್ ಪಂತ್ ತಿಳಿಸಿದರು.
ಇಂದು ಬಾಬರ್ ಅಜಮ್ ವಿರುದ್ಧ ನಡೆಯುತ್ತಿರುವ ಏಷ್ಯಾಕಪ್‍ನಲ್ಲಿ ಭಾರತ ಆಟಗಾರರು ಸವಾಲಿನ ಹೋರಾಟವನ್ನು ನಡೆಸಲಿದ್ದೇವೆ ಎಂದು ಹೇಳಿದರು.

ತಮ್ಮ ಟ್ವೀಟರ್ ಖಾತೆಯಲ್ಲಿ ವೀಡಿಯೋವನ್ನು ಹರಿಬಿಟ್ಟಿರುವ ರಿಷಭ್ ಪಂತ್, ಸಾಮಾನ್ಯವಾಗಿ ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯಗಳು ನಡೆದಾಗಲೆಲ್ಲಾ ಶೇ.100ರಷ್ಟು ಒತ್ತಡವಿರುತ್ತದೆ. ನಾವು ಕೂಡ ನಮ್ಮ ಸಾಮಥ್ರ್ಯವನ್ನು ಹೆಚ್ಚಿನ ಪ್ರಯತ್ನವನ್ನು ನೀಡಿ ಪಂದ್ಯ ಗೆಲ್ಲುವತ್ತ ಗಮನ ಹರಿಸುತ್ತೇವೆ ಎಂದು ಹೇಳಿದರು.

ಮೈದಾನದ ಹೊರಗೆ ಸಾಕಷ್ಟು ಕ್ರೀಡಾಭಿಮಾನಿ ಗಳು ಪಂದ್ಯದ ಬಗ್ಗೆ ಸಾಕಷ್ಟು ಭಾವನೆಗಳನ್ನು ಹೊಂದಿರುತ್ತಾರೆ, ಆದರೆ ಆಟಗಾರರು ಆ ಭಾವನೆಗಳನ್ನು ಅರಿತು ಮೈದಾನದಲ್ಲಿ ತಮ್ಮ ಕೆಲಸ ನಿರ್ವಹಿಸಿದರೆ ಗೆಲುವು ಖಚಿತ ಎಂದು ಹಾರ್ದಿಕ್ ಪಾಂಡ್ಯ ಮತ್ತೊಂದು ವಿಡಿಯೋದಲ್ಲಿ ಪ್ರತಿಕತ್ರಿಯಿಸಿದಾದರೆ.

Articles You Might Like

Share This Article