ನಕಲಿ ಟ್ರಾಫಿಕ್ ಪೊಲೀಸ್ ಅಧಿಕಾರಿ ಬಂಧನ

Social Share

ತೇಜ್ಪುರ (ಅಸ್ಸಾಂ), ಆ. 7- ಅಸ್ಸಾಂನ ಸೋನಿತ್ಪುರ್ ಜಿಲ್ಲಾಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಯೊಂದಿಗೆ ಕಾನೂನು ಉಲ್ಲಂಘಿಸುವವರಿಗೆ ದಂಡ ವಿದಿಸುತ್ತಿದ್ದ ನಕಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಟ್ರಾಫಿಕ್ ಪೊಲೀಸ್ ಅಧಿಕಾರಿಯಂತೆ ಫೋಸು ಕೊಡುತ್ತಿದ್ದ ವ್ಯಕ್ತಿ ಶನಿವಾರ ಗುವಾಹಟಿಯಿಂದ ಬರ್ಸನಲ್ಲಿ ಬಂದು ತೇಜ್ಪುರ ನಗರದ ಪರುವಾ ಚರಿಯಾಲ್ಲಿಯಲ್ಲಿ ಇಳಿದಿದ್ದ ತಕ್ಷಣವೇ ಅಲ್ಲಿದ್ದ ಟ್ರಾಫಿಕ್ ಪೊಲೀಸರನ್ನು ಕರೆದು ನಿಯಮ ಉಲ್ಲಂಘಿಸಿದ ವಾಹನಗಳನ್ನು ತಪಾಸಣೆಗೆ ಒಳಪಡಿಸಿ ದಂಡ ವಸೂಲಿ ಮಾಡಲು ಆರಂಭಿಸಿದರು.

ಮೊದಲು ಸಿಬ್ಬಂದಿಗಳಿಗೆ ಅನುಮಾನ ಬರಲಿಲ್ಲ ಅದರೆ ಸ್ವಲ್ಪ ಸಮಯದ ನಂತರ ವರ್ತನೆ ಬಗ್ಗೆ ಆನುಮನಗೊಂಡು ತಮ್ಮ ಹಿರಿಯರನ್ನು ಸ್ಥಳಕ್ಕೆ ಕರೆಸಿಕೊಂಡರು. ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿದಾಗ ಸತ್ಯಾಂಶ ಹೊರಬಿದ್ದಿದ್ದು, ಕೂಡಲೇ ಅವರನ್ನು ಬಂಧಿಸಲಾಗಿದೆ.

ತನಿಖೆಯ ಸಮಯದಲ್ಲಿ, ಈತ ರಂಗಿಯಾ ಮತ್ತು ನಾಗಾಂವನ ಹಾಗು ಇತರ ಸ್ಥಳಗಳಲ್ಲಿ ಹಣ ಸಂಗ್ರಹಿಸಲು ಅದೇ ತಂತ್ರವನ್ನು ಅನ್ವಯಿಸಿದ್ದಾರೆ ಎಂದು ತಿಳಿದುಬಂದಿದೆ, ಯಾವಾಗಲೂ ಪೊಲೀಸ್ ಅಧಿಕಾರಿಯಾಗಬೇಕೆಂದು ಕನಸು ಕಂಡರು. ಆದ್ದರಿಂದ ಅವರು ಪೋಲೀಸ್ ಸಮವಸ್ತ್ರವನ್ನು ಧರಿಸಿ, ಸಾರ್ವಜನಿಕರ ಬಳಿ ಪೋಸ್ ನೀಡುತ್ತಿದ್ದರು.

Articles You Might Like

Share This Article