ಅಸ್ಸಾಂನಿಂದ ಬೆಂಗಳೂರಿಗೆ ಗಾಂಜಾ, ಮೂವರು ಸೆರೆ

Social Share

ಬೆಂಗಳೂರು, ಅ.20- ಅಸ್ಸಾಂ ನಿಂದ ರೈಲಿನಲ್ಲಿ ಗಾಂಜಾ ಹಾಗೂ ಹ್ಯಾಶಿಶ್ ಆಯಿಲ್‍ನ್ನು ಸಾಗಾಣಿಕೆ ಮಾಡಿ ಪೆಡ್ಲರ್‍ಗಳಿಗೆ ಮಾರಾಟ ಮಾಡುತ್ತಿದ್ದ ಅಸ್ಸಾಂ ಹಾಗೂ ತ್ರಿಪುರ ರಾಜ್ಯದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ 80 ಲಕ್ಷ ರೂ. ಬೆಲೆ ಬಾಳುವ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಾಣಿಗಳಲ್ಲಿ ರೂಪಾಂತರಗೊಂಡು ಓಮಿಕ್ರಾನ್ ಮನುಷ್ಯರಿಗೆ ಹರಡಿದೆ

ಈಶಾನ್ಯ ಗಡಿ ರೈಲ್ವೆ ಕೋಚಿಂಗ್ ಡಿಪೊನಲ್ಲಿ ಎಸಿ ಅಟೆಂಡರ್ ಹಾಗೂ (ಬೆಡ್ ರೋಲ್) ಮಲಗುವ ಕೋಣೆಯ ಅಂಟೆಂಡರ್‍ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಪದ್ ಕರೆ, ಪಿಂಟೋದಾಸ್ ಹಾಗೂ ರಾಜೇಶ್ ದಾಸ್ ಬಂಧಿತ ಆರೋಪಿಗಳು.

ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ಸಿಬ್ಬಂದಿ ತಂಡದವರು ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಎಂ.ವಿ.ಟಿ ರೈಲ್ವೆ ನಿಲ್ದಾಣದ ಆವರಣದಲ್ಲಿ ಕಾರ್ಯಚರಣೆ ಕೈಗೊಂಡು ಕಾಂಪೌಂಡ್ ಬಳಿ ಬಂದಿತರ ಬಳಿ ಇದ್ದ 1 ಕೆಜಿ 10 ಗ್ರಾಂ ಹ್ಯಾಶಿಶ್ ಆಯಿಲ್, 6 ಕೆಜಿ ಗಾಂಜ , 4 ಮೊಬೈಲ್ ಫೋನ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ರೈಲ್ವೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಅಸ್ಸಾಂನಲ್ಲಿ ಕಡಿಮೆ ಬೆಲೆಗೆ ನಿಷೇತ ಮಾದಕ ವಸ್ತುಗಳಾದ ಹ್ಯಾಶಿಶ್ ಆಯಿಲ್ ಮತ್ತು ಗಾಂಜ ವನ್ನು ಖರೀದಿ ಮಾಡಿ, ತಮ್ಮ ಕೆಲಸಗಳ ನಿರ್ವಹಣೆಗೆ ನೀಡಲಾಗಿದ್ದ ರೈಲೆ ್ವ ಬೋಗಿಗಳಲ್ಲಿನ ಲಾಕರ್‍ಗಳಲ್ಲಿ ಬಚ್ಚಿಟ್ಟು ಅವುಗಳನ್ನು ಬೆಂಗಳೂರಿಗೆ ತಂದು ಪರಿಚಯಸ್ಥ ಪೆಡ್ಲರ್‍ಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ದಂಧೆಯಲ್ಲಿ ತೊಡಗಿದ್ದರು ಎಂದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.

ಕ್ರಿಶ್ಚಿಯನ್‍ಗೆ ಮತಾಂತರಗೊಳ್ಳುವವರ ಮೀಸಲಾತಿ ನಿಲ್ಲಿಸಿ : VHP

ಹ್ಯಾಶಿಶ್ ಆಯಿಲ್‍ಅನ್ನು 5 ಲಕ್ಷ ರೂ.ಗಳಿಗೆ ಮತ್ತು 1 ಕೆಜಿ ಗಾಂಜ ವನ್ನು 40-50 ಸಾವಿರ ರೂ.ಗಳಂತೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.ಈ ಕೃತ್ಯಕ್ಕೆ ಸಂಬಂಧಿಸಿದ ಇಬ್ಬರು ಡ್ರಗ್ ಪೆಡ್ಲರ್‍ಗಳು ತಲೆಮರೆಸಿಕೊಂಡಿರುತ್ತಾರೆ. ಆರೋಪಿಗಳು ಈ ಹಿಂದೆಯೂ ಮಾದಕ ವಸ್ತು ಮಾರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳುದುಬಂದಿದೆ.

ಆರೋಪಿಗಳ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ-1985 ಅಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.

Articles You Might Like

Share This Article