ಬೈಕ್ ಸವಾರನಿಗೆ ದೊಣ್ಣೆಯಿಂದ ಥಳಿಸಿದ ಡಿಸಿ ಅಮಾನತು

Social Share

ಗುವಾಹಟಿ, ಸೆ.29- ತಪ್ಪು ಮಾರ್ಗದಲ್ಲಿ ಬರುತ್ತಿದ್ದ ಬೈಕ್ ಸವಾರನನ್ನು ದೊಣ್ಣೆಯಿಂದ ಥಳಿಸಿದ ಕಾರಣಕ್ಕೆ ಅಸ್ಸಾಂನ ಹೊಜೈ ಜಿಲ್ಲೆಯ ಜಿಲ್ಲಾಧಿಕಾರಿ (ಡಿಸಿ) ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಅವರನ್ನು ಅಮಾನತುಗೊಳಿಸಲಾಗಿದೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಆದೇಶದ ಮೇರೆಗೆ ಹೋಜೈ ಡಿಸಿ ಅನುಪಮ್ ಚೌಧರಿ ಮತ್ತು ಎಡಿಸಿ ರಕ್ತಿಮ್ ಬರುವಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಮುಖ್ಯಮಂತ್ರಿಗಳು ಖುದ್ದಾಗಿ ವೀಕ್ಷಿಸಿದ ಬಳಿಕ ಬುಧವಾರ ರಾತ್ರಿ ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ.

ಚೌಧರಿ ಅವರು ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 26 ರಲ್ಲಿ ಲುಮ್ಡಿಂಗ್‍ನಿಂದ ಲಂಕಾಗೆ ಪ್ರಯಾಣಿಸುತ್ತಿದ್ದರು. ಆ ವೇಳೆ ಒನ್‍ವೇಯಲ್ಲಿ ಎದುರಿಗೆ ಬೈಕ್ ಸವಾರನೊಬ್ಬ ಬಂದಿದ್ದಾನೆ. ಆತ ಅಡ್ಡಾದಿಡ್ಡಿ ಬೈಕ್ ಚಲಾಯಿಸುತ್ತಿದ್ದ ಎಂದು ಆರೋಪಿಸಿ ಎಡಿಸಿ ರಕ್ತಿಮ್ ಬರುವಾ ದೊಣ್ಣೆಯಿಂದ ಥಳಿಸಿದ್ದಾರೆ.

ಘಟನೆಗೆ ಸಾಕ್ಷಿಯಾಗಿದ್ದ ಮತ್ತೊಬ್ಬ ವೃದ್ಧನ ಮೇಲೆ ಎಡಿಸಿ, ಅವರ ಚಾಲಕ ಹಾಗೂ ಮತ್ತೊಬ್ಬ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇಡೀ ಘಟನೆ ಆ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಯವರು ಅಕಾರಿಗಳನ್ನು ಅಮಾನತುಗೊಳಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅಮಾನತು ಆದೇಶಿ ಇನ್ನೂ ತಮಗೆ ತಲುಪಿಲ್ಲ ಎಂದಿದ್ದಾರೆ.

Articles You Might Like

Share This Article