ರೋಹಿಂಗ್ಯಗಳ ಒಳನುಸಳುವಿಕೆಗೆ ನೆರವು ನೀಡುತ್ತಿದ್ದ ಆರೋಪಿಯ ಬಂಧನ

Social Share

ಅಗರ್ತಲಾ,ಮಾ.14- ಬಾಂಗ್ಲಾದೇಶದಿಂದ ರೋಹಿಂಗ್ಯಾ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ದಕ್ಷಿಣ ತ್ರಿಪುರಾ ಜಿಲ್ಲೆಯ ಯುವಕನನ್ನು ಅಸ್ಸಾಂ ಪೊಲೀಸರ ತಂಡ ಬಂಧಿಸಿದೆ.

ಅಸ್ಸಾಂ ಪೊಲೀಸ್ ತಂಡವು ಸೋಮವಾರ ಬೆಲೋನಿಯಾ ಉಪವಿಭಾಗದ ಹೃಷ್ಯಮುಖ ಪ್ರದೇಶದ ಅವರ ನಿವಾಸದಿಂದ ದೀಪಾಂಜನ್ ಬೈದ್ಯ ಅವರನ್ನು ಬಂಧಿಸಿದ್ದು, ರೋಹಿಂಗ್ಯಾ ಕಳ್ಳಸಾಗಣೆ ಪ್ರಕರಣದ ತನಿಖೆಗಾಗಿ ಕರೀಮ್‍ಗಂಜ್‍ಗೆ ಕರೆದೊಯ್ದಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಭಿಜಿತ್ ದಾಸ್ ತಿಳಿಸಿದ್ದಾರೆ.

ಇತ್ತೀಚೆಗೆ ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಬಜಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ರೋಹಿಂಗ್ಯಾಗಳ ಗುಂಪನ್ನು ಬಂಧಿಸಿದ್ದರು. ತನಿಖೆಯ ಸಂದರ್ಭದಲ್ಲಿ ಬಂಧಿತರ ಫೋನ್‍ಗಳಲ್ಲಿ ದೀಪಾಂಜನ್‍ನ ಹೆಸರು ಕಂಡು ಬಂದಿತ್ತು. ಆ ಮಾಹಿತಿ ಆಧರಿಸಿ ಡಿಎಸ್‍ಪಿ ಜಿ ಡಿ ಶರ್ಮಾ ನೇತೃತ್ವದ ಪೊಲೀಸರ ತಂಡ ಹೃಷ್ಯಮುಖ್‍ಗೆ ತೆರಳಿ ಕಾರ್ಯಾಚರಣೆ ನಡೆಸಿದೆ. ಸ್ಥಳೀಯ ಪೊಲೀಸರ ಸಹಕಾರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ.

“ಅದಾನಿ ಹಗರಣ ಮರೆ ಮಾಚಲು ಆಡಳಿತ ಪಕ್ಷದಿಂದ ಸಂಸತ್‍ನಲ್ಲಿ ಗದ್ದಲ”

ಪ್ರಕರಣದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಎಸ್‍ಡಿಪಿಒ ನಿರಾಕರಿಸಿದ್ದಾರೆ. ಆದರೆ ಬೆಲೋನಿಯಾ ಉಪವಿಭಾಗದ ಹೃಷ್ಯಮುಖ್ ಮತ್ತು ಮತಿ ಪ್ರದೇಶದ ಮೂಲಕ ಬಾಂಗ್ಲಾದೇಶದ ಒಳನುಸುಳುವಿಕೆಯ ವರದಿಗಳಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಾಡಾಳು ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿಯ ಮೇಲ್ಮನಿ ವಿಚಾರಣೆಗೆ ಸುಪ್ರೀಂ ಸಮ್ಮತಿ

ಕಳೆದ ಒಂದು ವರ್ಷದಲ್ಲಿ ಭಾರತೀಯ ಭೂಪ್ರದೇಶದಲ್ಲಿ ಅಕ್ರಮ ಪ್ರವೇಶಕ್ಕಾಗಿ 10 ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಅವರೆಲ್ಲರನ್ನು ವಾಪಾಸ್ ಕಳುಹಿಸಲಾಗಿದೆ.

Assam, police, arrest, Tripura, youth, link, Rohingya, trafficking,

Articles You Might Like

Share This Article