ಅಲ್‍ಖೈದಾ ಉಗ್ರ ಸಂಘಟನೆ ನಂಟು, ಮತ್ತೊಬ್ಬನ ಬಂಧನ

Social Share

ನವದೆಹಲಿ,ಆ.26- ಅಲ್‍ಖೈದಾ ಉಗ್ರ ಸಂಘಟನೆಗೆ ನಂಟು ಹೊಂದಿದ್ದ ಮತ್ತೊಬ್ಬ ವ್ಯಕ್ತಿಯನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಗೋಲಾಪರ ಜಿಲ್ಲೆಯ ಪೊಲೀಸರು ಕಾರ್ಯಚರಣೆ ನಡೆಸಿ ಅಲ್ ಖೈದಾ ಭಾರತೀಯ ಉಪಶಾಖೆ(ಎಕ್ಯೂಐಎಸ್) ಮತ್ತು ಅನ್ಸಾರ್ ಉಲ್ಲಾ ಬಾಂಗ್ಲಾ ಟೀಮ್(ಎಬಿಟಿ)ಗೆ ಸೇರಿದ ರೆಹಮಾನ್ ಮುಫ್ತಿ ಎಂಬ ಮದರಸಾದ ಶಿಕ್ಷಕನನ್ನು ಬಂಧಿಸಲಾಗಿದೆ.

ಕಳೆದ ಒಂದು ವಾರದಿಂದ ಎಕ್ಯೂಐಎಸ್-ಎಬಿಟಿ ಸಂಘಟನೆಗೆ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಬೊಂಗಿಯಾನ್‍ಗೊನ್ ಜಿಲ್ಲೆಯಲ್ಲಿ ಅಡಗಿದ್ದ ಅಫೀಜರ್ ರೆಹಮಾನ್ ಮುಫ್ತಿಯನ್ನು ಬಂಸಲಾಗಿದೆ ಎಂದು ಗೋಲಾಪರ ಜಿಲ್ಲಾ ಎಸ್ಪಿ ಇ.ವಿ.ರಾಕೇಶ್ ರೆಡ್ಡಿ ತಿಳಿಸಿದ್ದಾರೆ.

ಬಾಂಗ್ಲಾದೇಶ ಮೂಲದ ಎಬಿಟಿ ಮತ್ತು ಜಾಗತಿಕ ಉಗ್ರ ಸಂಘಟನೆ ಎಕ್ಯೂಐಎಸ್ ಭಾರತದಲ್ಲಿ ತನ್ನ ನೆಲೆಗಳನ್ನು ವಿಸ್ತರಿಸಲು ಯತ್ನಿಸುತ್ತಿದ್ದು, ಇದರ ಸುಳಿವು ಆಧರಿಸಿ ಅಸ್ಸಾಂ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಇದುವರೆಗೂ ಮೂವರು ಪ್ರಮುಖರನ್ನು ಬಂಸಲಾಗಿದ್ದು, ಮುಫ್ತಿ 4ನೇ ವ್ಯಕ್ತಿಯಾಗಿದ್ದಾನೆ. ಕಳೆದ ಜುಲೈ 28ರಂದು ನಡೆದಿದ್ದ ಕಾರ್ಯಾಚರಣೆಯಲ್ಲಿ ಈ ಉಗ್ರ ಸಂಘಟನೆಗೆ ಸೇರಿದ 11 ಮಂದಿಯನ್ನು ಬಂಧಿಸಲಾಗಿತ್ತು. ವಿಚಾರಣೆ ನಡೆಯುತ್ತಿದ್ದಂತೆಲ್ಲ ಜಾಲ ವಿಸ್ತಾರಗೊಳ್ಳುತ್ತಿದ್ದು, ಉಗ್ರರು ಸಿಕ್ಕಿ ಬೀಳುತ್ತಿದ್ದಾರೆ.

Articles You Might Like

Share This Article