ಗುವಾಹಟಿ,ಜ.31- ಭಾರತ ಜಿ-20 ಶೃಂಗದ ಅಧ್ಯಕ್ಷೀಯ ಅವಧಿಯಲ್ಲಿ ಆಯೋಜಿಸಲಾಗುತ್ತಿರುವ ಸರಣಿ ಸಭೆಗಳ ಪೈಕಿ ಈಶಾನ್ಯ ರಾಜ್ಯ ಅಸ್ಸಾ ಮೊದಲ ಬಾರಿಗೆ ಸುಸ್ಥಿರ ಹಣಕಾಸು ಕಾರ್ಯನಿರ್ವಹಾ ಗುಂಪಿನ ಸಭೆ ಆತಿಥ್ಯಕ್ಕೆ ಸಿದ್ಧವಾಗಿದೆ.
ಫೆಬ್ರವರಿ 2-3ರಂದು ಅಸ್ಸಾಂನ ಗೌಹಾಟಿಯಲ್ಲಿ ನಡೆಯುವ ಸಭೆಗಾಗಿ ಪ್ರತಿನಿಧಿಗಳು ಈಶಾನ್ಯ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಜೊತೆಗೆ ರಾಜ್ಯವು ಮಾರ್ಚ್‍ನಲ್ಲಿ ಎರಡು, ಏಪ್ರಿಲ್‍ನಲ್ಲಿ ಒಂದು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಗುವಾಹಟಿಯ ಹೋಟೆಲ್‍ನಲ್ಲಿ ನಡೆಯುವ ಸಭೆಯಲ್ಲಿ ಜಿ-20 ಶೃಂಗದ ಸದಸ್ಯ ರಾಷ್ಟ್ರಗಳು, ಅತಿಥಿ ರಾಷ್ಟ್ರಗಳು, ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಕೇಂದ್ರದ ಅಧಿಕಾರಿಗಳು ಸೇರಿ 94 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರತಿನಿಧಿಗಳನ್ನು ಸ್ವಾಗತಿಸಲು ಇಲ್ಲಿನ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಂಪ್ರದಾಯಿಕ ಸಂಗೀತ ಪ್ರದರ್ಶನದ ಆಯೋಜನೆ ಮಾಡಿದ್ದಾರೆ.
ಬಿಜೆಪಿಗೆ ಚೈತನ್ಯ ನೀಡಲು ಫೆಬ್ರವರಿಯಲ್ಲಿ ಮೋದಿ ಸರಣಿ ಪ್ರವಾಸ
ಭಾರತಕ್ಕೆ ಸುಸ್ವಾಗತ, ಅಪರಿಮಿತ ವೈವಿಧ್ಯತೆ, ಸೌಂದರ್ಯ ಮತ್ತು ಅದ್ಭುತ ಗತಕಾಲದ ನಾಡು. ನಮ್ಮ ಸ್ಥಳೀಯ ಸಂಸ್ಕøತಿಯ ಉತ್ತಮ ಪ್ರದರ್ಶನದೊಂದಿಗೆ ಜಿ-20 ಪ್ರತಿನಿಧಿಗಳಿಗೆ ಗುವಾಹಟಿ ವಿಮಾನ ನಿಲ್ದಾಣದಲ್ಲಿ ಅತ್ಯಂತ ಆತ್ಮೀಯ ಸ್ವಾಗತವನ್ನು ನೀಡಲಾಗುತ್ತದೆ. ಅದ್ಭುತ ಅಸ್ಸಾಂನಲ್ಲಿ ನಿಮ್ಮ ವಾಸ್ತವ್ಯವನ್ನು ನೀವು ಆನಂದಿಸುವಿರಿ ಎಂದು ಮುಖ್ಯಮಂತ್ರಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ನಾಲ್ಕು ಕಾರ್ಯಾಗಾರಗಳು ನಡೆಯಲಿದ್ದು, ಸಭೆಯ ಬಳಿಕ ಪ್ರತಿನಿಧಿಗಳನ್ನು ಬ್ರಹ್ಮಪುತ್ರ ನದಿಯಲ್ಲಿ ವಿಹಾರಕ್ಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕರೆದೊಯ್ಯವ ವ್ಯವಸ್ಥೆ ಮಾಡಲಾಗಿದೆ. ಫೆಬ್ರವರಿ 6-8 ರಂದು ನಡೆಯುವ ವೈ-20 ಸಭೆಯಲ್ಲಿ 250 ಪ್ರತಿನಿಗಳು ಭಾಗವಹಿಸಲಿದ್ದಾರೆ ಎಂದು ಅಸ್ಸಾಂ ಸರ್ಕಾರ ತಿಳಿಸಿದೆ.
ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಿದ ಬಿಆರ್‌ಎಸ್, ಎಎಪಿ
ಅಸ್ಸಾಂನ ವಿವಿಧ ಶಿಕ್ಷಣ ಸಂಸ್ಥೆಗಳ 400 ವಿದ್ಯಾರ್ಥಿಗಳು ವೈ-20 ಇನ್ಸೆಪ್ಶನ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ವರ್ಷದ ಆಗಸ್ಟ್‍ನಲ್ಲಿ ನಡೆಯಲಿರುವ ವೈ-20 ಶೃಂಗಸಭೆಯ ಪೂರ್ವಭಾವಿಯಾಗಿ ಭಾರತದಾದ್ಯಂತ ಐದು ಸಭೆಗಳು ಆಯೋಜನೆಗೊಂಡಿವೆ.
Assam, host, first, series, G20 events,