36 ಸಾವಿರ ವಿದ್ಯಾರ್ಥಿಗಳಿಗೆ ಸ್ಕೂಟರ್ ಗಿಫ್ಟ್

Social Share

ಗುವಾಹಟಿ. ಅ, 20 -ಹೈಯರ್ ಸೆಕೆಂಡರಿ ಪರೀಕ್ಷೆಗಳಲ್ಲಿ (12ನೇ ತರಗತಿ )ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಸುಮಾರು 36,000 ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಹೆಚ್ಚಾಗಿ ಡುಗಿಯರಿಗೆ ಉಚಿತ ಸ್ಕೂಟರ್ ವಿತರಿಸುವುದಾಗಿ ಅಸ್ಸಾಂ ಸರ್ಕಾರ ಘೋಷಿಸಿದೆ.

ಸುಮಾರು 258 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸುವ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟ ಅಂಗೀಕರಿಸಿದೆ ಎಂದು ಶಿಕ್ಷಣ ಸಚಿವ ರನೋಜ್ ಪೆಗು ಅವರು ಸುದ್ದಿಗಾರರಿಗೆ ತಿಳಿಸಿದರು.

ಟಿಎಂಸಿ ನಾಯಕ ಭಾದು ಶೇಖ್ ಹತ್ಯೆ, ಆರೋಪಿ ಅರೆಸ್ಟ್

ಒಟ್ಟು 35,800 ವಿದ್ಯಾರ್ಥಿಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ 29,748 ಬಾಲಕಿಯರು ಮತ್ತು 6,052 ಬಾಲಕರು ಸ್ಕೂಟರ್‍ಗಳನ್ನು ಪಡೆಯಲಿದ್ದಾರೆ ಎಂದು ಅವರು ಹೇಳಿದರು. ಉನ್ನತ ಶಿಕ್ಷಣ ಇಲಾಖೆಯು ಇದೇ ವೇಳೆ ವಿದ್ಯಾರ್ಥಿಗಳಿಗೆ ನೋಂದಣಿ ಮತ್ತು ವಿಮೆಗಾಗಿ ಆರ್ಥಿಕ ನೆರವು ನೀಡುತ್ತದೆ ಎಂದು ಅವರು ತಿಳಿಸಿದರು ಇದಲ್ಲದೆ ಪ್ರಾಂತೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರ ಮಾಸಿಕ ಸಂಭಾವನೆಯನ್ನು 55,000 ರೂ.ಗೆ ಹೆಚ್ಚಿಸಲು ಸಂಪುಟ ನಿರ್ಧರಿಸಿದೆ ಎಂದು ಸಚಿವರು ಹೇಳಿದರು.

ಬಯಲು ಸೀಮೆಯ ಬುಡಕಟ್ಟು ಜನಾಂಗದವರಿಗೆ ಮತ್ತು ಬೆಟ್ಟಗಳಲ್ಲಿರುವ ಬಯಲು ಬುಡಕಟ್ಟು ಜನಾಂಗದವರಿಗೆ ಪ್ರಮಾಣಪತ್ರ ನೀಡುವ ಮಾರ್ಗಸೂಚಿಗಳನ್ನು ಸಂಪುಟ ನಿರ್ಧರಿಸಿದೆ ಎಂದು ಪ್ರವಾಸೋದ್ಯಮ ಸಚಿವ ಜಯಂತ ಮಲ್ಲ ಬರುವಾ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ನೀಡುವ ಆರ್ಥಿಕ, ಶೈಕ್ಷಣಿಕ ಮತ್ತು ಉದ್ಯೋಗ ಸವಲತ್ತುಗಳನ್ನು ಪಡೆಯಲು ಸಹಾಯ ಮಾಡಲು ಮಿಷನ್ ಭೂಮಿಪುತ್ರ ಅಡಿಯಲ್ಲಿ ಜಿಲ್ಲಾಧಿಕಾರಿಗಳಿಂದ ಜಾತಿ ಪ್ರಮಾಣಪತ್ರಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಮಹಾರಾಷ್ಟ್ರದಲ್ಲಿ ನಿಷೇಧಿತ PFI ಸಂಘಟನೆಯ 4 ಸದಸ್ಯರ ಬಂಧನ

ಪ್ರವಾಸೋದ್ಯಮವನ್ನು ಉತ್ತೇಜಿಸಲು, ಹಯಾತ್ ಗ್ರೂಪ್‍ನಿಂದ ಕಾಜಿರಂಗದಲ್ಲಿ ಹೋಟೆಲ್ ಅನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಬರುವಾ ಹೇಳಿದರು.

Articles You Might Like

Share This Article