ಗಂಡ ಮತ್ತುಅತ್ತೆಯನ್ನು ತುಂಡು ತುಂಡಾಗಿ ಕತ್ತರಿಸಿದ ಮಹಿಳೆ

Social Share

ಗುವಾಹಟಿ,ಫೆ.20- ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರಿಯಕರ ಮತ್ತು ಆತನ ಗೆಳೆಯನೊಂದಿಗೆ ಸೇರಿ ಗಂಡ ಮತ್ತು ಅತ್ತೆಯ ಹತ್ಯೆಗೈದು ಮೃತದೇಹವನ್ನು ತುಂಡು ತುಂಡಾಗಿಸಿ ಎಸೆದಿರುವ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ವರ್ಷ ಆಗಸ್ಟ್ -ಸಪ್ಟೆಂಬರ್ ತಿಂಗಳಲ್ಲಿ ಘಟನೆ ನಡೆದಿದ್ದು, ಆರೋಪಿಯ ಅತ್ತೆಯ ಮೃತ ದೇಹದ ತುಂಡುಗಳು ನಿನ್ನೆ ಮೇಘಾಲಯದಲ್ಲಿ ಪತ್ತೆಯಾಗಿದೆ.

ತನ್ನ ಗಂಡ ಅಮರೇಂದ್ರ ಮತ್ತು ಅತ್ತೆ ಶಂಕರಿ ಕಾಣೆಯಾಗಿದ್ದಾರೆ ಎಂದು ಆರೋಪಿ ಮಹಿಳೆಯು ಕಳೆದ ಸೆಪ್ಟೆಂಬರ್‍ನಲ್ಲಿ ಪೊಲೀಸರಿಗೆ ದೂರು ದಾಖಲಿಸಿದ್ದರು. ಕೆಳ ದಿನಗಳ ಬಳಿಕ ಅಮರೇಂದ್ರನ ಸೋದರ ಸಂಬಂಧಿಯೊಬ್ಬರು, ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಮತ್ತೊಂದು ದೂರು ದಾಖಲಿಸಿದ್ದರು.

30 ದಿನಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಗ್ರಾಹಕರ ವಿಶ್ವಾಸ ಗೆದ್ದ ಐಗೇಮಿಂಗ್ ಬೆಟ್‍ಡೈಲಿ

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಮೃತ ಅಮರೇಂದ್ರರ ಪತ್ನಿ, ಆಕೆಯ ಪ್ರಿಯಕರ ಮತ್ತು ಅವನ ಸ್ನೇಹಿತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಅಮರೇಂದ್ರ ಮತ್ತು ಆತನ ತಾಯಿಯನ್ನು ಚಾಂದ್‍ಮಾರಿ ಮತ್ತು ನರೆಂಗಿ ಪ್ರದೇಶಗಳಲಿದ್ದ ಪ್ರತ್ಯೇಕ ಮನೆಗಳಲ್ಲಿ ಹತ್ಯೆ ಗೈದ ಆರೋಪಿಗಳು ಮೃತ ದೇಹಗಳನ್ನು ತುಂಡು ತುಂಡಾಗಿಸಿ, ಬಳಿಕ ಪಾಲೀಥಿನ್ ಚೀಲಗಳಲ್ಲಿ ತುಂಬಿ ಮೇಘಾಲಯದ ಗುಡ್ಡಗಳ ಮಧ್ಯೆ ಎಸೆದಿದ್ದರು.

ಕಳಚಿತು ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ, ಎಸ್.ಕೆ.ಭಗವಾನ್ ಇನ್ನಿಲ್ಲ

ಮೃತ ದೇಹಗಳ ಕೆಲ ತುಂಡುಗಳು ಪತ್ತೆಯಾಗಿದ್ದು, ಉಳಿದ ತುಂಡುಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ.

Assam, woman, kills, husband, mother-in-law, stores, body, parts, freezer,

Articles You Might Like

Share This Article