6 ರಾಜ್ಯಗಳ 7 ಕ್ಷೇತ್ರಗಳ ಉಪಚುನಾವಣೆಗೆ ಇಂದು ಮತದಾನ

Social Share

ನವದೆಹಲಿ,ನ.3- ದೇಶದ ಆರು ರಾಜ್ಯಗಳಲ್ಲಿ 7 ವಿಧಾನಸಭೆ ಸ್ಥಾನಗಳಿಗೆ ಇಂದು ಉಪಚುನಾವಣೆ ನಡೆದಿದೆ. ಪ್ರಮುಖವಾಗಿ ಮಹಾ ರಾಷ್ಟ್ರ,ದಲ್ಲಿ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ ಮೈತ್ರಿಸರ್ಕಾರಕ್ಕೆ ಮೊದಲ ಪರೀಕ್ಷೆಯಾಗಿದ್ದು, ಅಂಧೇರಿ ಪೂರ್ವ ವಿಧಾನ ಸಭೆಗೆ ಉಪಚುನಾವಣೆ ನಡೆಯು ತ್ತಿದೆ.

ಶಿವಸೇನೆ ಶಾಸಕರಾಗಿದ್ದ ರಮೇಶ್ ಲಟ್ಕೆ ನಿಧನದ ಹಿನ್ನೆಲೆಯಲ್ಲಿ ಇಲ್ಲಿ ಉಪಚುನಾವಣೆ ನಡೆದಿದೆ. ಬಿಜೆಪಿ ಅಭ್ಯರ್ಥಿ ಕೊನೆ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದ ಕಾರಣ ಏಕನಾಥ್ ಶಿಂಧೆ ಬಣದ ಅಭ್ಯರ್ಥಿ ಗೆಲುವು ನಿಶ್ಚಿತ ಎನ್ನಲಾಗುತ್ತಿದೆ .

ಆದರೆ ಶಿವಸೇನೆಯು ಲಟ್ಕೆ ಅವರ ಪತ್ನಿಗೆ ಅವಕಾಶ ನೀಡಿ ಕಣಕ್ಕಿಳಿಸಿದ್ದು ಪ್ರಭಲ ಸ್ಪರ್ಧೆ ನಿರೀಕ್ಷಿಸಲಾಗಿದೆ. ಒಟ್ಟು 6 ಅಭ್ಯರ್ಥಿಗಳು ಕಣದಲ್ಲಿದ್ದು ಚುನವಣ ಕಣ ರಂಗೇರಿಸಿದೆ.

ಇನ್ನು ಬಿಹಾರದಲ್ಲೂ ಬದಲಾದ ಸರ್ಕಾರಕ್ಕೆ ಅಗ್ನಿಪರೀಕ್ಷೆ ನಡೆದಿದೆ ಮೊಕಾಮಾ ಮತ್ತು ಗೋಪಾಲ್ಗಂಜ್ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ ಕ್ರಿಮಿನಲ್ ಮೊಕದ್ದಮೆಯಲ್ಲಿ ದೋಷಿಯಾಗಿರುವ ಕಾರಣ ಆರ್ಜೆಡಿ ಶಾಸಕ ಅನಂತ್ ಸಿಂಗ್ ಅವರನ್ನು ಅನರ್ಹಗೊಳಿಸಿದ ನಂತರ ಮೊಕಾಮಾ ಸ್ಥಾನ ತೆರವಾಗಿತ್ತು. ಇನ್ನು ಬಿಜೆಪಿ ಶಾಸಕರಾಗಿದ್ದ ಸುಭಾಷ್ ಸಿಂಗ್ ಅವರ ನಿಧನದಿಂದಾಗಿ ಗೋಪಾಲಗಂಜ್ ಚುನಾವನೆ ನಡೆಯುತ್ತಿದ್ದು ,ಭರ್ಜರಿ ಮತದಾನ ನಡೆಯುತ್ತಿದೆ.

ಮೊಕಾಮಾದಲ್ಲಿ ಅನಂತ್ ಸಿಂಗ್ ಅವರ ಪತ್ನಿ ನೀಲಂ ದೇವಿ ಅವರನ್ನು ಆರ್ಜೆಡಿ ಕಣಕ್ಕಿಳಿಸಿದೆ. ಲಲ್ಲನ್ ಸಿಂಗ್ ಅವರ ಪತ್ನಿ ಸೋನಂ ದೇವಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಹರಿಯಾಣದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಕುಲದೀಪ್ ಬಿಷ್ಣೋಯ್ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದು ಇದೇ ಕ್ಷೇತ್ರದಿಂದ ಅವರ ಮಗ ಭವ್ಯಉಪಚುನಾವಣೆ ಬಿಜೆಪಿ ಅಭ್ಯರ್ಥಿಯಾಗಿ ಸ್ರ್ಪಸಿದ್ದಾರೆ.ಕಾಂಗ್ರೇಸ್ನಿಂದ ಜೈ ಪ್ರಕಾಶ್,ಎಎಪಿ ಸತೇಂದರ್ ಸಿಂಗ್ , ಐಎನ್ಎಲ್ಡಿ ಪಕ್ಷದಿಂದ ಕುರ್ದಾ ರಾಮ್ ನಂಬರ್ದಾರ್ ಪ್ರತಿಸ್ಪರ್ಧೆಯಾಗಿದ್ದಾರೆ.

ಉತ್ತರ ಪ್ರದೇಶಲ್ಲಿ ಬಿಜೆಪಿ ಶಾಸಕ ಅರವಿಂದ್ ಗಿರಿ ಅವರು ಕಳೆದ ಸೆಪ್ಟೆಂಬರ್ 6ರಂದು ನಿಧನರಾದ ಹಿನ್ನೆಲೆಯಲ್ಲಿ ಗೋಲ ಗೋಕರನಾಥ ಕ್ಷೇತ್ರದ ಉಪಚುನಾವಣೆ ನಡೆಸಲಾಗುತ್ತಿದೆ. ಸಮಾಜವಾದಿ ಪಕ್ಷದ ಅರವಿಂದ್ ಗಿರಿ ಮತ್ತು ಬಿಜೆಪಿಯಅಮನ್ ಗಿರಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಒಡಿಶಾ ರಾಜ್ಯ ಧಮನಗರ ವಿಧಾನಸಭೆ ಶಾಸಕ ಬಿಜೆಪಿಯ ಹಿರಿಯ ಬಿಷ್ಣು ಚರಣ್ ಸೇಥಿ ಅವರ ನಿಧನದ ನಂತರ ಈ ಸ್ಥಾನ ತೆರವಾಗಿತ್ತು. ಚರಣ್ ಸೇಥಿ ಅವರ ಪುತ್ರ ಸೂರ್ಯವಂಶಿ ಸೂರಜ್ ಸ್ಥಿತಪ್ರಜ್ಞ ಬಿಜೆಪಿಯಿಂದ ಸ್ರ್ಪಸಿದ್ದು ಬಿಜೆಡಿ ಅಬಂತಿ ದಾಸ್ ಮತ್ತು ಕಾಂಗ್ರೇಸ್ನ ಹರೇಕೃಷ್ಣ ಸೇಥಿ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ತೆಲಂಗಾಣ ರಾಜ್ಯದಲ್ಲಿ ಮುನುಗೋಡೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ ರಾಜಗೋಪಾಲ್ ರೆಡ್ಡಿ ರಾಜೀನಾಮೆಯಿಂದ ಇಲ್ಲಿ ಉಪಚುನಾವಣೆ ನಡೆಯುತ್ತಿದೆ.ಈಗ ಅವರು ಬಿಜೆಪಿಯಿಂದ ರಾಜಗೋಪಾಲ್ ರೆಡ್ಡಿ ಕಣಕ್ಕಿಳಿದಿದ್ದು ಟಿಆರ್ಎಸ್ನ ಕೆ ಪ್ರಭಾಕರ್ ರೆಡ್ಡಿ ಮತ್ತು ಕಾಂಗ್ರೇಸ್ ನಿಂದ ಪಲವೈ ಶ್ರವಂತಿ ರೆಡ್ಡಿ ಸ್ರ್ಪಸಿದ್ದಾರೆ.

Articles You Might Like

Share This Article