ಬೆಂಗಳೂರು,ಜ.23- ಅಮ್ ಅದ್ಮಿ ಪಾರ್ಟಿಯ ಕರ್ನಾಟಕ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆಯವರು ರಾಜ್ಯದ ನೂತನ ಘಟಕ ಹಾಗೂ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳ ಮೂದಲ ಪಟ್ಟಿ ಪ್ರಕಟಿಸಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಳೆದ ವಾರ ರಾಜ್ಯ ಅಮ್ ಅದ್ಮಿ ಪಾರ್ಟಿಯ ರಾಜ್ಯ ಹಾಗೂ ಜಿಲ್ಲೆ ಘಟಕಗಳನ್ನು ವಿಸರ್ಜನೆ ಮಾಡಲಾಗಿತ್ತು. ಗ್ರಾಮ ಸಂಪರ್ಕ ಅಭಿಯಾನದಿಂದ ಆಮ್ ಆದ್ಮಿ ಪಾರ್ಟಿಗೆ ಕನ್ನಡಿಗರಿಂದ ಅಭೂತಪೂರ್ವ ಬೆಂಬಲ ದೊರಕಿದ್ದು ರಾಜ್ಯಾದ್ಯಂತ ಸಾವಿರಾರು ಕಾರ್ಯಕರ್ತರು, ಹಿತೈಷಿಗಳು, ಬೆಂಬಲಿಗರು, ರಾಜಕೀಯ ಹೋರಾಟಗಾರರು ಸಿಕ್ಕಿದ್ದಾರೆ.
ಇದರ ಪರಿಣಾಮವಾಗಿ ನಾವು ಕರ್ನಾಟಕದ ಎಲ್ಲ ಜಿಲ್ಲೆಗಳು ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡದಾಗಿ ಬೆಳೆದಿದ್ದೇವೆ. ಇವರುಗಳು ಎಲ್ಲ ಮೂರು ಸಾಂಪ್ರದಾಯಿಕ ಪಕ್ಷಗಳಿಂದ ಮೋಸ ಹೋಗಿರುವವರು ಹಾಗೂ ಬಿಜೆಪಿಯ 40 ಸರ್ಕಾರದಿಂದ ಬೇಸತ್ತಿದ್ದಾರೆ ಎಂದು ಹೇಳಿದರು.
ಗರ್ಭ ಮುಂದುವರೆಸುವ, ತೆಗೆಸುವ ಅಧಿಕಾರ ಮಹಿಳೆಗೆ ಮಾತ್ರ ಸೇರಿದೆ : ಬಾಂಬೆ ಹೈಕೋರ್ಟ್
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಂತಾದ ವಿವಿಧ ರಾಜಕೀಯ ಪಕ್ಷಗಳ ಜನರು ನಮ್ಮೊಂದಿಗೆ ಕೈಜೋಡಿಸುತ್ತಿದ್ದಾರೆ. ಇವರು ಕರ್ನಾಟಕದಲ್ಲಿ ಉತ್ತಮ ಬದಲಾವಣೆ ತರಬೇಕೆಂದು ಬಯಸುವ ಉತ್ತಮ ವ್ಯಕ್ತಿಗಳಾಗಿದ್ದಾರೆ. ಕರ್ನಾಟಕವು ಎಎಪಿ ಮೇಲೆ ವಿಶ್ವಾಸವಿಟ್ಟಿದೆ ಎನ್ನುವುದನ್ನು ಇದು ಸೂಚಿಸುತ್ತಿದೆ. ಅದರ ಬೆಂಬಲದಿಂದಾಗಿ ಅಮ್ ಅದ್ಮಿ ಪಾರ್ಟಿಯು ವಿಜಯದತ್ತ ಸಾಗಲಿದೆ.
ಇಂದು ನಾವು ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ನಟನೆ ಹಾಗೂ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳನ್ನು ಘೋಷಣೆ ಮಾಡುತ್ತಿದ್ದೇವೆ. ಈ ಧೋರಣೆಯ ಭಾಗವಾಗಿ, ನಾವು ಪಟ್ಟಿಯ ಹೊನಲು ಪ್ರಮುಖ ಹುದ್ದೆಗಳನ್ನು ಹೇಳುತ್ತಿದ್ದೇವೆ. ಶೋಷಣೆಯ ಉಳಿದ ಭಾಗವಾದ ಬ್ಲಾಕ್ ಹಾಗೂ ಸರ್ಕಲ್ ಸಮಿತಿಗಳನ್ನು ಜಿಲ್ಲಾ ಮಟ್ಟದಲ್ಲಿ ಘೋಷಿಸಲಾಗುತ್ತದೆ ಎಂದು ತಿಳಿಸಿದರು.
ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಹಲವು ಆಕಾಂಕ್ಷಿಗಳು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಿಕ್ಕಿದ್ದಾರೆ, ಸಾಧ್ಯವಾದಷ್ಟು ಬೇಗನೇ ರಚನೆಯನ್ನು ಜಾರಿಗೆ ತಂದು, ಫೆಬ್ರುವರಿ ಮೊದಲ ವಾರದಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸುತ್ತೇವೆ. ಫೆಬ್ರುವರಿ ಮಧ್ಯ ಭಾಗದೊಳಗೆ ಜಿಲ್ಲಾಗಳ ಹಾಗೂ ಸೆಲ್ಗಳ ಸಂಘಟನಾ ರಚನೆಯನ್ನು ಘೋಷಿಸುತ್ತೇವೆ.
11 ಕೋಟಿ ರೂಪಾಯಿ ಮೌಲ್ಯದ ಬ್ರೌನ್ಶುಗರ್ ಪತ್ತೆ
ಅದೇ ವೇಳೆಗೆ ಎ ಎ ಪಿಯು ಕರ್ನಾಟಕದ ಎಲ್ಲ 58,000 ಬೂತ್ಗಳನ್ನು ತಲುಪಲಿದೆ. ಬೇರೆ ಪಕ್ಷಗಳ ಸಂಘಟನೆಗಳಲ್ಲಿದ್ದು, ಅವರನ್ನು ನಂಬಿ ಮೋಸ ಹೋಗಿರುವ ಉತ್ತಮ ವ್ಯಕ್ತಿಗಳು ರಾಜ್ಯದಲ್ಲಿ ಬದಲಾವಣೆ ತರಲು ನಮ್ಮೊಂದಿಗೆ ಕೈಜೋಡಿಸಬಹುದು ಎಂದು ದಿಲೀಪ್ ಪಾಂಡೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಉಸ್ತುವಾರಿ ದಾಮೋಧರನ್, ರಾಜ್ಯ ಸಂಘಟನಾ ಸಹ ಉಸ್ತುವಾರಿ ಉಪೇಂದ್ರ ಗಾವಂಕರ್, ಮಾಧ್ಯಮ ಮತ್ತು ಸಂವಹನಾ ವಿಭಾಗದ ಉಸ್ತುವಾರಿ ಬ್ರಿಜೇಶ್ ಕಾಳಪ್ಪ, ಮಾಧ್ಯಮ ಉಸ್ತುವಾರಿ ಜಗದೀಶ್ ವಿ. ನದಂ ಮತ್ತಿತರರು ಭಾಗವಹಿಸಿದ್ದರು.
ವಿಧಾನಸೌಧದ ಮುಂಭಾಗ ನೇತಾಜಿ ಪ್ರತಿಮೆ ಮರುಸ್ಥಾಪನೆ : ಸಿಎಂ ಬೊಮ್ಮಾಯಿ
ಅಧ್ಯಕ್ಷರು:
ಪೃಥ್ವಿ ರೆಡ್ಡಿ
ಪ್ರಧಾನ ಕಾರ್ಯದರ್ಶಿ ಗಳು:
ಸಂಚಿತ್ ಸಹಾನಿ
ಹರಿಹರನ್ ಜೆ
ಅಧ್ಯಕ್ಷರು, ಪ್ರಚಾರ ಮತ್ತು ಜನಸಂಪರ್ಕ:
ಮುಖ್ಯಮಂತ್ರಿ ಚಂದ್ರು
ಅಧ್ಯಕ್ಷರು, ಪ್ರಣಾಳಿಕೆ ಸಮಿತಿ:
ಭಾಸ್ಕರ್ರಾವ್
ಮಾಧ್ಯಮ ಮತ್ತು ಸಂವಹನಾ ಉಸ್ತುವಾರಿ:
ಬ್ರಿಜೇಶ್ ಕಾಳಪ್ಪ
ಕಾರ್ಯಾಧ್ಯಕ್ಷರು:
ಬಿ.ಟಿ.ನಾಗಣ್ಣ
ಮೋಹನ್ ದಾಸರಿ
ರವಿಚಂದ್ರ ನರಬೆಂಚಿ
ಶಿವರಾಯಪ್ಪ ಜೋಗಿನ್
ಜಾಫರ್ ಮೊಯಿನುದ್ದೀನ್
ಮಾಧ್ಯಮ ಉಸ್ತುವಾರಿ:
ಜಗದೀಶ್ ವಿ ಸದಾಂ
ಸಾಮಾಜಿಕ ಮಾಧ್ಯಮ ಸಂಯೋ ಜಕರು:
ಸಚಿನ್ ಡಿಎಸ್
ಮಾಧ್ಯಮ ಸಂಯೋಜಕರು:
ವಿಶ್ವನಾಥ ಪಾಟೀಲ
ಉಪಾಧ್ಯಕ್ಷರು:
ವಿಜಯ ಶರ್ಮಾ, ಚೆನ್ನಪ್ಪ ಗೌಡ
ಡಾ ವೆಂಕಟೇಶ್
ಡಾ ವಿಶ್ವನಾಥ್ ಬಿ ಎಲ್
ರೋಹನ ಐನಾಪುರ
ರುದ್ರಯ್ಯ ನವಲಿ ಹಿರೇಮಠ
ಸಾ. ಸಿ. ಬೆನಕನಹಳ್ಳಿ
ಉಮಾಶಂಕರ್,
ವಿ ಲಕ್ಷ್ಮೀಕಾಂತ ರಾವ್
ವಿವೇಕಾನಂದ ಸಾಲಿನ್ಸ
assembly, election, AAP, Committee,