ವಿಧಾನಸಭೆ ಚುನಾವಣೆ : ಆಕಾಂಕ್ಷಿಗಳಿಂದ ಆಂತರಿಕ ಸಮೀಕ್ಷೆ

Social Share

ಬೆಂಗಳೂರು,ಡಿ.1- ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಂತೆ ಮತದಾರರ ನಾಡಿಮಿಡಿತ ಅರಿಯಲು ಆಕಾಂಕ್ಷಿ ಅಭ್ಯರ್ಥಿಗಳು ಸಮೀಕ್ಷೆಯ ಮೊರೆ ಹೋಗಿದ್ದಾರೆ. ರಾಜ್ಯದ 224 ವಿಧಾನಸಭೆ ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಗೆಲುವಿನ ಕುರಿತು ಖಾಸಗಿ ಏಜೆನ್ಸಿಗಳಿಂದ ಸದ್ದಿಲ್ಲದೆ ಸಮೀಕ್ಷೆ ನಡೆಸುತ್ತಿದ್ದಾರೆ.

ಹಾಲಿ ಸಚಿವರಿಂದ ಹಿಡಿದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರಿಂದ ಹಿಡಿದು ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿರುವ ಸಂಭವನೀಯ ಅಭ್ಯರ್ಥಿಗಳು ಮತದಾರರಿಂದ ಲಾಭ-ನಷ್ಟದ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದಾರೆ.

ಖಾಸಗಿ ಏಜೆನ್ಸಿಗಳ ಮೂಲಕ ಕ್ಷೇತ್ರಗಳಲ್ಲಿನ ಸದ್ಯದ ಸ್ಥಿತಿಗತಿ, ಮತದಾರರ ಮನೋಸ್ಥಿತಿ, ಹಾಲಿ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರ ಸಾಮಥ್ರ್ಯ ಮತ್ತು ದೌರ್ಬಲ್ಯ, ಜಾತಿ ಲೆಕ್ಕಾಚಾರ, ಮುಂಬರುವ ದಿನಗಳಲ್ಲಿ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳನ್ನು ಅರಿಯಲು ಸಂಭಾವ್ಯ ಅಭ್ಯರ್ಥಿಗಳು ಮುಂದಾಗುತ್ತಿದ್ದಾರೆ.

ಕನ್ನಡ ಧ್ವಜ ಹಾರಿಸಿದ ವಿದ್ಯಾರ್ಥಿಗೆ ಮರಾಠಿ ಪುಂಡರಿಂದ ಹಲ್ಲೆ

ಇಂತಹ ಸಮೀಕ್ಷೆ ನಡೆಸಿ ವರದಿ ನೀಡುವ ಖಾಸಗಿ ಏಜೆನ್ಸಿಗಳಿಗೆ ಇದರಿಂದ ಭಾರೀ ಬೇಡಿಕೆ ಬಂದಿದೆ. ಈ ಏಜೆನ್ಸಿಗಳೂ ಚುನಾವಣಾ ಕಣ ರಂಗೇರಲು ತೆರೆಮರೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈಗಾಗಲೇ ಬೆಂಗಳೂರಿನ ಹಲವು ವಿಧಾನಸಭಾ ಕ್ಷೇತ್ರಗಳು, ಚಿಕ್ಕಮಗಳೂರು, ಬಳ್ಳಾರಿ, ಹಾಸನ ಸೇರಿ ರಾಜ್ಯದ ಹಲವು ಜಿಲ್ಲೆಗಳೂ ಸೇರಿದಂತೆ ಆಯ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಇಂತಹ ಗುಪ್ತ ಸರ್ವೆ ನಡೆಸಲಾಗಿದ್ದು, ಇನ್ನೂ ಹಲವು ಕ್ಷೇತ್ರಗಳಲ್ಲಿ ಸಮೀಕ್ಷಾ ಕಾರ್ಯಗಳು ಭರದಿಂದ ಸಾಗಿವೆ.

ಖಾಸಗಿ ಏಜೆನ್ಸಿಗಳು ರಾಜಕೀಯ ಆಳ-ಆಗಲವನ್ನು ಬಲ್ಲ ಮಾಧ್ಯಮ ಹಾಗೂ ರಾಜಕೀಯದ ಅನುಭವಿಗಳನ್ನು ಬಳಸಿ ತಮ್ಮದೇ ತಂಡಗಳನ್ನು ರಚಿಸಿ ಈ ಸಮೀಕ್ಷಾ ಕಾರ್ಯಗಳನ್ನು ನಡೆಸುತ್ತಿವೆ.

ಸಮೀಕ್ಷೆಗಳಲ್ಲಿ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರುವ ಹಿಜಾಬ್, ಹಲಾಲ್, ಆಜಾನ್ ವಿವಾದಗಳು ಹೇಗೆ ರಾಜಕೀಯ ಧೃವೀಕರಣಕ್ಕೆ ಕಾರಣವಾಗಬಹುದು ಎಂಬ ಅಂಶದ ಬಗ್ಗೆಯೂ ಅಭಿಪ್ರಾಯ ಸಂಗ್ರಹ ನಡೆಯುತ್ತಿದೆ.
ಪ್ರಗತಿಪರ ಹಿಂದೂಗಳು ಇಂತಹ ವಿವಾದದ ವಿರುದ್ಧವಾಗಬಹುದೇ ಅಥವಾ ವಿವಾದಗಳೇ ಆಡಳಿತ ಪಕ್ಷಕ್ಕೆ ಬೂಮ್‍ರಾಂಗ್ ಆಗಬಹುದೇ ಅಥವಾ ಸಾಮಾಜಿಕವಾಗಿ ಲಾಭವಾಗಬಹುದೇ ಎಂಬ ಸೂಕ್ಷ್ಮ ಸಂಗತಿಗಳ ಬಗ್ಗೆಯೂ ಗಮನಹರಿಸಲಾಗುತ್ತಿದೆ.

ರಾಗಿಗುಡ್ಡ ಆಂಜನೇಯಸ್ವಾಮಿ ಜಾತ್ರೆಯಲ್ಲೂ ಧರ್ಮ ದಂಗಲ್

ಅಲ್ಲದೆ, ರಾಜ್ಯದಲ್ಲಿ ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದೆಡೆ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಮುಸ್ಲಿಂ ಮತದಾರರು ಭಾರಿ ದೊಡ್ಡ ಪ್ರಮಾಣದಲ್ಲಿದ್ದು, ಆ ಸಮುದಾಯಗಳ ¿ಚಿತ್ತ¿ ಏನಿರಬಹುದು ಎಂಬೆಲ್ಲಾ ಅಂಶಗಳ ಬಗ್ಗೆ ಮಾಹಿತಿಯನ್ನು ಸದ್ದಿಲ್ಲದೆ ಕಲೆ ಹಾಕಲಾಗುತ್ತಿದೆ.

ಬಿಜೆಪಿಗೆ ಮೋದಿ ಬಲ:
ಬಹುತೇಕ ಬಿಜೆಪಿ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದುತ್ವದ ಹೆಸರಿನಲ್ಲಿ ಸಮೀಕ್ಷೆ ನಡೆಸುತ್ತಿರುವುದು ಗೊತ್ತಾಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚು ಹಿಂದುತ್ವವನ್ನೇ ಬಳಸಲಾಗುತ್ತಿದೆ.

ಹಿಜಾಬ್, ಹಲಾಲ್, ಶಾಲಾಕಾಲೇಜುಗಳಲ್ಲಿ ಉಂಟಾದ ಹಿಜಾಬ್ ವಿವಾದ, ಮೋದಿ ಅವರ ನಾಮಬಲ ಎಷ್ಟರ ಮಟ್ಟಿಗೆ ಕೈ ಹಿಡಿಯಬಹುದು ಎಂಬುದರ ಕುರಿತು ಸಮೀಕ್ಷೆ ನಡೆಸಲಾಗಿದೆ. ಉಳಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ವರ್ಚಸ್ಸು, ಯುವ ಮತದಾರರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆ, ಜಾತಿ ಸಮೀಕರಣ ಇತ್ಯಾದಿ ಅಂಶಗಳ ಮೇಲೆ ಸಭೆ ಮಾಡಿಸಲಾಗಿದೆ.

ರ‍್ಯಾಗಿಂಗ್ ಮಾಡಿದ ಸರ್ಕಾರಿ ವೈದ್ಯಕೀಯ ಕಾಲೇಜಿನ 6 ವಿದ್ಯಾರ್ಥಿಗಳ ಅಮಾನತು

ಬಿಜೆಪಿಗೆ ಮೋದಿ ಆಸರೆಯಾದರೆ ಕಾಂಗ್ರೆಸ್‍ಗೆ ಮಾಜಿ ಸಿಎಂ ಸಿದ್ದರಾಮಯ್ಯನವರ ಹೆಸರೇ ಶಕ್ತಿ ತುಂಬಿದೆ. ಜೆಡಿಎಸ್‍ಗೆ ಮಾಜಿ ಸಿಎಂ ಕುಮಾರಸ್ವಾಮಿ ಬಲ ತಂದಿದೆ. ಹೀಗೆ ರಾಜ್ಯದ 224 ಕ್ಷೇತ್ರಗಳಲ್ಲಿ ಆಯಾ ಪಕ್ಷಗಳ ಅಭ್ಯರ್ಥಿಗಳು ಖಾಸಗಿ ಸಮೀಕ್ಷೆಗಳ ಮೂಲಕ ತಮ್ಮ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

assembly, election, aspirants, Internal, survey, constituencies,

Articles You Might Like

Share This Article