ನಿಲ್ಲದ ಮೂಲ ವಲಸಿಗರ ಸಂಘರ್ಷ : ಬಿಜೆಪಿಗೆ ಬಿಕ್ಕಟ್ಟು

Social Share

ಬೆಂಗಳೂರು,ಮಾ.9- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಮತ್ತೆ ಅಧಿಕಾರಕ್ಕೆ ಬರಲು ಹೆಣ ಗಾಡುತ್ತಿರುವ ಆಡಳಿತರೂಢ ಬಿಜೆಪಿಗೆ ಹಾಲಿ ಸಚಿವರನ್ನು ಮತ್ತು ಶಾಸಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಈ ಬೆಳವಣಿಗೆಗಳ ನಡುವೆಯೇ ಮೂಲ ಮತ್ತು ವಲಸಿಗರ ನಡುವೆ ಸಂಘರ್ಷ ದಿನದಿಂದ ದಿನಕ್ಕೆ ಸಂಘರ್ಷ ಹೆಚ್ಚುತ್ತಿರುವುದು ಕಮಲ ಪಾಳೆಯ ವಿಧಾನಸಭೆಯ ಚುನಾವಣೆಗೂ ಮುನ್ನವೇ ವಿಲ ವಿಲ ಎನ್ನುವಂತಾಗಿದೆ.
ಕ್ಷೇತ್ರದಲ್ಲಿ ಆಡಳಿತಾ ವಿರೋಧಿ ಎದುರಿಸುತ್ತಿರುವ ಕೆಲವು ಶಾಸಕರು ಮತ್ತು ಸಚಿವರು ಪಕ್ಷಕ್ಕೆ ಗುಡ್ ಬೈ ಹೇಳಿ ಅನ್ಯಪಕ್ಷಗಳತ್ತ ಮುಖ ಮಾಡಿದ್ದರೆ, ಟಿಕೆಟ್ ಖಾತರಿ ಇಲ್ಲದವರು ಕೂಡ ಬೇರೆ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಚುನಾವಣೆ ಗೆಲ್ಲಬೇಕಾದರೆ ಗುಜರಾತ್ ಮಾದರಿ ತಂತ್ರವನ್ನೇ ಅನುಸರಿಸುವುದು ಸೂಕ್ತ ಎಂದು ಸಂಘ ಪರಿವಾರ ಸಲಹೆ ಕೊಟ್ಟಿದೆ. ಆದರೆ ಕರ್ನಾಟಕ ರಾಜಕೀಯ ಪರಿಸ್ಥಿತಿಗೂ ಅಲ್ಲಿನ ರಾಜಕೀಯ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಇದನ್ನು ಕರ್ನಾಟಕಕ್ಕೆ ಅನ್ವಯಿಸುವುದು ಬೇಡ ಎಂಬ ತರ್ಕವು ಎದ್ದಿದೆ.

ಮನಬಂದತೆ ನುಗ್ಗಿದ ಎಸ್‍ಯುವಿ ; ಇಬ್ಬರು ಸಾವು, 8 ಮಂದಿಗೆ ಗಾಯ

ಪಕ್ಷ ಬಿಡಲು ಮುಂದಾಗಿರುವವರನ್ನು ಮನವೊಲಿಸಿ ಉಳಿಸಿಕೊಳಬೇಕೆ ವಿನಃ ಹೋಗುವವರನ್ನು ಗೌರವದಿಂದ ಕಳುಹಿಸಿಕೊಡುತ್ತೇವೆ ಎಂದು ಹೇಳುವುದು ಸಮಂಜಸವಲ್ಲ. ಚುನಾವಣೆ ಹತ್ತಿರ ಇರುವಾಗ ಹೊಸಬರನ್ನು ಸೇರಿಸಿಕೊಂಡು ಅವರನ್ನು ಕ್ಷೇತ್ರದಲ್ಲಿ ಮತದಾರರಿಗೆ ಪರಿಚಯ ಮಾಡಿಕೊಡುವ ಹೊತ್ತಿಗೆ ಫಲಿತಾಂಶವೇ ಹೊರಬೀಳಲಿದೆ. ಅಸಮಾಧಾನಗೊಂಡಿರುವವರನ್ನು ಪಕ್ಷದ ಹಿರಿಯರು ಏಕೆ ಮನವೊಲಿಸುತ್ತಿಲ್ಲ ಎಂದು ಪಕ್ಷದಲ್ಲೇ ಪ್ರಶ್ನೆ ಎದ್ದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಮತ್ತಿತರರು ಸಂಧಾನಕ್ಕೆ ಏಕೆ ಮುಂದಾಗುತ್ತಿಲ್ಲ ಎಂದು ಪದಾಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ.

ಕೇವಲ ಮಾಜಿ ಸಿಎಂ ಯಡಿಯೂರಪ್ಪ ಮಾತ್ರ, ಅಸಮಾಧಾನಗೊಂಡವರ ಹತ್ತಿರ ನಾನು ಮಾತನಾಡುತ್ತೇನೆ ಎಂದು ಹೇಳಿದ್ದನ್ನು ಬಿಟ್ಟರೆ ಉಳಿದವರು ಪಕ್ಷಕ್ಕೂ ನಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಸಚಿವರಾದ ವಿ.ಸೋಮಣ್ಣ, ಕೆ.ಸಿ.ನಾರಾಯಣಗೌಡ, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಶಾಸಕ ನಂದೀಶ್ ರೆಡ್ಡಿ ಸೇರಿದಂತೆ ಮತ್ತಿತರರು ಬಿಜೆಪಿ ಬೆಳವಣಿಗೆಗಳ ಬಗ್ಗೆ ಬೇಸರಗೊಂಡು ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದಾರೆ.

ಹಿರಿತನ, ಸಾಮಥ್ರ್ಯಕ್ಕೆ ಸೂಕ್ತ ಗೌರವ, ಮನ್ನಣೆ ಸಿಗುತ್ತಿಲ್ಲ ಎಂದು ಮುನಿಸಿಕೊಂಡು ಪಕ್ಷದ ಚಟುವಟಿಕೆಗಳಿಂದ ಪ್ರಜ್ಞಾಪೂರ್ವಕವಾಗಿ ಅಂತರ ಕಾಯ್ದುಕೊಳ್ಳುತ್ತಿರುವ ಸೋಮಣ್ಣ ವಿಚಾರದಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿದೆ.

ಮತ್ತೊಂದೆಡೆ ಮಂಡ್ಯದಲ್ಲಿ ಮೊದಲ ಬಾರಿಗೆ ¿ಕಮಲ¿ ಅರಳಲು ಕಾರಣರಾದ ಸಚಿವ ಕೆ.ಸಿ.ನಾರಾಯಣಗೌಡ ವಿಚಾರದಲ್ಲೂ ಗೊಂದಲ ತಿಳಿಯಾಗಿಲ್ಲ. ಜೆಡಿಎಸ್ ತೊರೆದು ಆಪರೇಷನ್ ಕಮಲದ ಪಾಲಾಗಿ ಬಿಜೆಪಿ ಸೇರಿದ್ದ ನಾರಾಯಣಗೌಡ, ಉಪಚುನಾವಣೆಯಲ್ಲಿ ಕಮಲ ಚಿನ್ಹೆಯಡಿ ಗೆದ್ದು ಬಂದು ಸಚಿವರಾಗಿದ್ದರು. ಆದರೆ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈ ಭಾಗದಲ್ಲಿ ಬಲವಿಲ್ಲದ ಬಿಜೆಪಿಯಲಿ ್ಲಉಳಿಯುವುದಕ್ಕಿಂತ, ಕಾಂಗ್ರೆಸ್ ಸೇರ್ಪಡೆ ಸೂಕ್ತ ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಚೀನಾ ಪುಂಡಾಟಕ್ಕೆ ಬ್ರೇಕ್ ಹಾಕಲು ಒಂದಾದ ಪ್ರಮುಖ ರಾಷ್ಟ್ರಗಳು

ಕೆ.ಆರ್.ಪೇಟೆಯಲ್ಲಿ ನಾಲ್ಕೈದು ಆಕಾಂಕ್ಷಿಗಳ ಮಧ್ಯೆ ಸಮರ್ಥ ಅಭ್ಯರ್ಥಿಗಾಗಿ ಶೋಧ ನಡೆಸಿದ್ದ ಕಾಂಗ್ರೆಸ್ ನಾಯಕರೂ ಕೂಡ ನಾರಾಯಣಗೌಡಗೆ ಆಪರೇಷನ್ ಹಸ್ತದ ಖೆಡ್ಡಾ ಅಣಿಗೊಳಿಸಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೆಜಿಪಿ ಕಟ್ಟಿದ ಸಂದರ್ಭದಲ್ಲಿ ಲಿಂಗಾಯತ ಸಮುದಾಯದ ನಾಯಕರನ್ನು ಬಿಜೆಪಿಯಲ್ಲೇ ಹಿಡಿದಿಟ್ಟುಕೊಳ್ಳುವ ಟಾಸ್ಕ್ ನಿಭಾಯಿಸಿದ್ದ ಕಾರಣಕ್ಕೆ ಬಿಎಸ್‍ವೈ ಮತ್ತು ಸೋಮಣ್ಣ ಅವರ ನಡುವೆ ಸೃಷ್ಟಿಯಾದ ಅಂತರ ವಿಸ್ತರಣೆಯಾಗುತ್ತಲೇ ಹೋಯಿತು. ಪಕ್ಷದ ಮೇಲೆ ಹಿಡಿತ ಸಾಧಿಸಿರುವ ಪ್ರಮುಖ ನಾಯಕರೊಬ್ಬರು ಸೋಮಣ್ಣ ಅವರ ಬೆನ್ನಿಗೆ ನಿಂತು ಈ ಅಂತರವನ್ನು ಹೆಚ್ಚಿಸುತ್ತಾ ಹೋದರು.

ಆದರೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಸಮಾರಂಭದ ಬಳಿಕ ಬೆನ್ನಿಗಿದ್ದ ಪ್ರಮುಖ ನಾಯಕರು ನಿರ್ಲಿಪ್ತರಾದರೆ, ಯಡಿಯೂರಪ್ಪ ಕೈ ಮೇಲಾಯಿತು. ಈ ಬೆಳವಣಿಗೆಯೇ ಸೋಮಣ್ಣ ಅವರ ವಿಚಾರದಲ್ಲಿಸದ್ಯ ಸೃಷ್ಟಿಯಾಗಿರುವ ಗೊಂದಲಕ್ಕೆ ಮೂಲ ಕಾರಣ ಎಂಬುದು ಬಿಜೆಪಿಯ ಆಪ್ತ ಮೂಲಗಳ ವಿವರಣೆ.

ಸಂಸದೀಯ ಮಂಡಳಿ ಸದಸ್ಯರಾಗಿರುವ ಯಡಿಯೂರಪ್ಪ ಹಠಸಾಧನೆಗೆ ಮುಂದಾದರೆ 72ರ ಗಡಿ ದಾಟಿದ ತಮಗೆ ಹಾಗೂ ಪುತ್ರ ಅರುಣ್ ಭವಿಷ್ಯ ಅರಳಿಸುವ ಪ್ರಯತ್ನಕ್ಕೂ ಅಡ್ಡಿಯಾಗಿ ಟಿಕೆಟ್ ವಿಚಾರದಲ್ಲಿ ಅನಿರೀಕ್ಷಿತ ತೊಡಕು ಸೃಷ್ಟಿಯಾದರೆ ಮುಂದೇನು ಎಂಬ ಪ್ರಶ್ನೆ ಸೋಮಣ್ಣ ಅವರಿಗೆ ಎದುರಾಗಿದೆ.

ಪಾರಿವಾಳದ ಮೂಲಕ ಬೇಹುಗಾರಿಕೆ..!

ಜಾರಕಿಹೊಳಿ ವಿರುದ್ಧ ಕಿಡಿ:
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರುವವರು ಸೀತೆಯಷ್ಟೇ ಪರಿಶುದ್ಧರಾಗಿರಬೇಕು. ಇಲ್ಲದಿದ್ದರೆ ಈ ಕ್ಷೇತ್ರಕ್ಕೆ ಬರಬಾರದು. ಪಕ್ಷದ ಹಿತದೃಷ್ಟಿಯಿಂದ ನಾನು ಇದನ್ನು ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಇನ್ನೊಂದೆಡೆ ಸಚಿವ ನಾರಾಯಣಗೌಡ, ಕಾಂಗ್ರೆಸ್‍ಗೆ ಹೋಗುವುದಾದದರೆ ಹೋಗಲಿ, ನಾನೇನು ಅವರನ್ನು ಕರೆದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿರುವುದು ಮೂಲ ಮತ್ತು ವಲಸಿಗರ ನಡುವೆ ಬೆಂಕಿಗೆ ತುಪ್ಪ ಸುರಿದಂತಾಗಿದೆ.

assembly, election, BJP, leader, crisis,

Articles You Might Like

Share This Article