ಚುನಾವಣೆಗೆ ಸಿದ್ಧ, ಒಂದೇ ಕ್ಷೇತ್ರಕ್ಕೆ ಬದ್ಧ: ಸಿದ್ದರಾಮಯ್ಯ

Social Share

ಬೆಂಗಳೂರು, ನ.24- ಕ್ಷೇತ್ರ ಹುಡುಕಾಟ ದಲ್ಲಿರುವ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಚುನಾವಣೆಗೆ ಸ್ರ್ಪಧಿಸಿಯೇ ಸಿದ್ಧ ಎಂಬ ನಿರ್ಧಾರಕ್ಕೆ ಬಂದಿದ್ದು, ಒಂದೇ ಕ್ಷೇತ್ರದಲ್ಲಿ ಕಣಕ್ಕಿಳಿ ಯುವ ಮುನ್ಸೂಚನೆ ನೀಡಿದ್ದಾರೆ.
ಚುನಾವಣೆಗೆ ಸ್ರ್ಪಧಿಸದೆ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮಾಜಿ ಸಚಿವ ಸಂತೋಷ್ ಸಲಹೆ ನೀಡಿ ದ್ದರು. ಆದರೆ, ಇದನ್ನು ಸಿದ್ದರಾಮಯ್ಯ ತಳ್ಳಿ ಹಾಕಿದ್ದಾರೆ.

ಈ ಹಿಂದೆ ದೇವರಾಜ ಅರಸು, ಎಸ್.ಎಂ.ಕೃಷ್ಣ ಸೇರಿದಂತೆ ಅನೇಕ ಪ್ರಭಾವಿ ನಾಯಕರು ಚುನಾವಣೆಯಲ್ಲಿ ಸ್ರ್ಪಧಿಸದೆ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಬಳಿಕ ತಮ್ಮ ಆಪ್ತರಿಂದ ರಾಜೀನಾಮೆ ಕೊಡಿಸಿ ಆ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಮುಖ್ಯಮಂತ್ರಿ ಗಾದಿಗೇರಿದ್ದರು. ಇನ್ನೂ ಕೆಲವು ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾಗಿ ಅಕಾರದ ಕೇಂದ್ರ ಸ್ಥಾನದಲ್ಲಿ ಪ್ರತಿಷ್ಠಾಪಿತರಾದರು.

ಇದೇ ರೀತಿಯ ಮಾದರಿಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾಲಿಸಬೇಕೆಂಬ ಸಲಹೆಗಳು ಕೇಳಿ ಬಂದಿದ್ದವು. ಆದರೆ, ಸಿದ್ದರಾಮಯ್ಯ ನಕಾರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ 2013ರ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ಅವರು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಆ ಕಾರಣಕ್ಕಾಗಿಯೇ ಅವರನ್ನು ಮುಖ್ಯಮಂತ್ರಿ ಹುದ್ದೆಯ ರೇಸ್‍ನಿಂದ ಬದಿಗೆ ಸರಿಸಲಾಗಿತ್ತು. ಇದರಿಂದ ಸಿದ್ದರಾಮಯ್ಯ ಅವರ ಹಾದಿ ಸುಗಮವಾಗಿತ್ತು.

ವೋಟರ್ ಐಡಿ ಹಗರಣ: ರಾಜಕಾರಣಿಗಳ ಸಂಪರ್ಕದ ಬಗ್ಗೆ ಬಾಯಿ ಬಿಡದ `ಚಿಲುಮೆ’ ರವಿ

ಈ ಬಾರಿ ತಾವು ಶಾಸಕರಾಗಿ ಆಯ್ಕೆ ಯಾಗದೇ ಇದ್ದರೆ ನಿರಾಯಾಸವಾಗಿ ತಮ್ಮನ್ನು ಮುಖ್ಯ ಮಂತ್ರಿ ಹುದ್ದೆಯ ರೇಸ್‍ನಿಂದ ಬದಿಗೆ ಸರಿಸ ಬಹುದೆಂಬ ಆತಂಕ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಜನ ಬೆಂಬಲ ಪಡೆದು ಮುಖ್ಯಮಂತ್ರಿ ರೇಸ್‍ನಲ್ಲಿ ಉಳಿದುಕೊಳ್ಳಲೇಬೇಕು ಎಂಬುದು ಅವರ ನಿರ್ಧಾರವಾಗಿದೆ ಎನ್ನಲಾಗುತ್ತಿದೆ.

ಆದರೆ, ಯಾವ ಕ್ಷೇತ್ರದಿಂದ ಸ್ರ್ಪಧಿಸಬೇಕು ಎಂಬ ಗೊಂದಲ ಈಗಲೂ ಮುಂದುವರೆದಿದೆ. ಒಂದು ವೇಳೆ ಚುನಾವಣೆ ಫಲಿತಾಂಶದಲ್ಲಿ ಏರುಪೇರಾಗಿ ಕ್ಷೇತ್ರ ಕೈಕೊಟ್ಟಿದ್ದೇ ಆದರೆ, ರಾಜಕೀಯವಾಗಿ ಭಾರಿ ಹಿನ್ನಡೆ ಅನುಭವಿಸ ಬೇಕಾಗುತ್ತದೆ ಎಂಬ ಅಂದಾಜುಗಳು ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ.

ಮೇಲ್ನೋಟಕ್ಕೆ ವರುಣ, ಕೋಲಾರ ಮತ್ತು ಬಾದಾಮಿ ಕ್ಷೇತ್ರಗಳನ್ನು ಆಯ್ಕೆ ಯನ್ನಾಗಿಟ್ಟುಕೊಂಡಿರುವ ಸಿದ್ದರಾಮಯ್ಯ ಕೊನೆ ಕ್ಷಣದಲ್ಲಿ ಅಚ್ಚರಿಯೆಂಬಂತೆ ಕ್ಷೇತ್ರ ಬದಲಾವಣೆ ಮಾಡುವ ಸಾಧ್ಯತೆಗಳು ಇವೆ.

ಟಿಕೆಟ್‍ಗಾಗಿ ಪಕ್ಷಕ್ಕೆ ಅರ್ಜಿ ಸಲ್ಲಿಸುವ ವೇಳೆ ಆಯ್ಕೆಯನ್ನು ಹೈಕಮಾಂಡ್‍ಗೆ ಬಿಟ್ಟಿರುವುದಾಗಿ ನಮೂದಿಸಿದ್ದಾರೆ. ಆದರೆ, ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅಂತಿಮವಾಗಿ ಸಿದ್ದರಾಮಯ್ಯ ಪ್ರಸ್ತಾಪಿಸಿದ ಕ್ಷೇತ್ರದಲ್ಲೇ ಸ್ರ್ಪಧಿಸಲು ಅವಕಾಶ ಮಾಡಿಕೊಡಲಿದೆ ಎಂದು ಹೇಳಲಾಗಿದೆ.

ಕೋಲಾರ ಕಠಿಣ ಸವಾಲು: ವರುಣಾದಲ್ಲಿ ಸಿದ್ದರಾಮಯ್ಯ ಸ್ರ್ಪಧಿಸುವುದರಿಂದ ಇವರ ಪುತ್ರ ಡಾ.ಯತೀಂದ್ರ ಅವರ ರಾಜಕೀಯ ಭವಿಷ್ಯಕ್ಕೆ ಧಕ್ಕೆಯಾಗಲಿದೆ. ಅತ್ತ ಬಾದಾಮಿ ದೂರ ಎಂಬ ಕಾರಣಕ್ಕೆ ಸ್ಪರ್ಧೆಯಿಂದ ಹಿಂದೇಟು ಹಾಕುತ್ತಿದ್ದಾರೆ.

ವಾರ್ಡ್ ಪುನರ್ ವಿಂಗಡಣೆ ತಕರಾರು: ಬಿಬಿಎಂಪಿಗೆ ನೋಟೀಸ್..

ಸದ್ಯಕ್ಕೆ ಬಾಕಿ ಉಳಿದಿರುವುದು ಕೋಲಾರ ಆಯ್ಕೆ ಮಾತ್ರ. ಆದರೆ, ಈ ಜಿಲ್ಲೆಯ ಒಳ ಬೇಗುದಿಗಳು ಸುಲಭವಾಗಿ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದಾಗ ಕೆ.ಎಚ್.ಮುನಿಯಪ್ಪ ಅವರ ಆಪ್ತರಾಗಿದ್ದರು. ದಲಿತ ಮುಖ್ಯಮಂತ್ರಿ ವಿಷಯ ಪ್ರಸ್ತಾಪವಾದಾಗ ಕೆ.ಎಚ್.ಮುನಿಯಪ್ಪ ಅವರು ಸಿದ್ದರಾಮಯ್ಯ ಅವರಿಗೆ ಗುರಾಣಿಯಾಗಿ ಬಳಕೆಯಾಗುತ್ತಿದ್ದರು.

ಕಾಂಗ್ರೆಸ್‍ನ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್ ಅವರ ಬೆಂಬಲಿಗರು ಧ್ವನಿ ಎತ್ತಿದಾಗಲೆಲ್ಲಾ ಮುನಿಯಪ್ಪ ತಾನೂ ಕೂಡ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಹೇಳಿ ಸಿದ್ದರಾಮಯ್ಯ ಅವರಿಗೆ ಬೆಂಗಾವಾಲಿಗೆ ನಿಲ್ಲುತ್ತಿದ್ದರು. ಇದಕ್ಕೆ ಸಿದ್ದು ಬಣದ ಕುಮ್ಮಕ್ಕು ಮತ್ತು ಬೆಂಬಲ ಸ್ಪಷ್ಟವಾಗಿ ಕಂಡು ಬರುತ್ತಿತ್ತು.

ಈಗ ಅದೇ ಸಿದ್ದು ಬಣ ಮುನಿಯಪ್ಪ ಅವರನ್ನು ಮೂಲೆಗುಂಪು ಮಾಡಲು ಮುಂದಾಗಿದೆ. ರಮೇಶ್‍ಕುಮಾರ್ ಬಣ ಸಿದ್ದರಾಮಯ್ಯ ಅವರ ಸುತ್ತ ಕೋಟೆ ಕಟ್ಟಿ ಕೋಲಾರ ಜಿಲ್ಲಾ ರಾಜಕಾರಣದ ಮಟ್ಟಿಗೆ ಆಂತರಿಕ ಸಮರವನ್ನೇ ಸಾರಿದೆ.

ಕುಟುಂಬಸ್ಥರಿಗೆ ಟಿಕೆಟ್ ಕೊಡಿಸಲು ಬಿಜೆಪಿ ಭಾರೀ ಲಾಬಿ..

ಈ ಒಳ ಸಂಕಟಗಳನ್ನು ಬಗೆಹರಿಸುವುದು ಅಷ್ಟು ಸುಲಭವಾಗಿಲ್ಲ. ಹೀಗಾಗಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದ ಬಗ್ಗೆಯೂ ಗೊಂದಲದಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿದೆ.

assembly, election, siddaramaiah, congress,

Articles You Might Like

Share This Article