4 ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ, ಪಂಜಾಬ್‍ನಲ್ಲಿ ಆಮ್‍ಆದ್ಮಿ ದರ್ಬಾರ್, ಕಾಣೆಯಾದ ಕಾಂಗ್ರೆಸ್

Social Share

ನವದೆಹಲಿ,ಮಾ.10- ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಯೆಂದೇ ಬಿಂಬಿಸಲಾಗಿದ್ದ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಭರ್ಜರಿ ಜಯಸಾಸಿದೆ. ಮತ್ತೊಂದೆಡೆ ಆಮ್‍ಆದ್ಮಿ ಪಕ್ಷ ದೆಹಲಿಯಿಂದ ಹೊರಗೆ ಕಾಲಿಟ್ಟಿದ್ದು, ಪಂಜಾಬ್‍ನಲ್ಲೂ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಏಳು ಹಂತಗಳಲ್ಲಿ ಚುನಾವಣೆ ನಡೆದ ಪಂಚರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ್ ಹಾಗೂ ಮಣಿಪುರ
ರಾಜ್ಯಗಳ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಕಮಲಪಡೆ ನಾಲ್ಕರಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು, ಬಹುತೇಕ ಅಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶದ 403 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, ಈಗಾಗಲೇ ಬಿಜೆಪಿ 260ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಅಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವರ್ಚಸ್ಸು ಮತ್ತೊಮ್ಮೆ ಪ್ರಜ್ವಲಿಸಿದೆ. ವಿಪಕ್ಷಗಳು ಬಿಜೆಪಿಯನ್ನು ಮಣಿಸುವ ಗುರಿಯೊಂದಿಗೆ ನಡೆಸಿದ ಕಾರ್ಯತಂತ್ರಗಳು ವಿಫಲವಾಗಿದೆ.
ಆದರೂ ಸಮಾಜವಾದಿ ಪಕ್ಷದ ಅಖಿಲೇಶ್‍ಯಾದವ್ ಅವರು ಭಾರೀ ಪೈಪೋಟಿ ನೀಡುವ ಮೂಲಕ ಪಕ್ಷವನ್ನು 100ರ ಗಡಿ ದಾಟಿಸಿದ್ದು, ಮಧ್ಯಹ್ನದವರೆಗಿನ ನಿರೀಕ್ಷೆಯಂತೆ 103 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಆರಂಭದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದ ಕಾಂಗ್ರೆಸ್ ಮುಗ್ಗರಿಸಿದ್ದು, ಕೇವಲ 7 ಸ್ಥಾನಗಳನ್ನು ಗೆಲ್ಲುವ ಮೂಲಕ ಮುಖಭಂಗ ಅನುಭವಿಸಿದೆ.
ಬಹುಜನ ಸಮಾಜವಾದಿ ಪಕ್ಷ ಕೂಡ ಕೇವಲ 6 ಕ್ಷೇತ್ರವನ್ನು ಗೆಲ್ಲುವ ಮೂಲಕ ಮಾಯಾವತಿ ಸಂಪೂರ್ಣ ಹಿನ್ನಡೆ ಅನುಭವಿಸಿದ್ದಾರೆ.
ಚುನಾವಣೆ ಸಮಯದಲ್ಲೇ ಬಿಜೆಪಿಗೆ ಟಕ್ಕರ್ ಕೊಟ್ಟು ಎಸ್‍ಪಿ ಸೇರಿದ್ದ ಮೌರ್ಯ ಸೇರಿದಂತೆ ಹಲವರು ಗೆಲುವಿಗಾಗಿ ಭಾರೀ ಪ್ರಯಾಸಪಟ್ಟಿದ್ದು, ಕೆಲವರು ಸೋಲುಂಡಿದ್ದಾರೆ. ಕಾಂಗ್ರೆಸ್‍ನ ಅನಾಯಕಿ ಸೋನಿಯಾಗಾಂ ಅವರ ರಾಯ್‍ಬರೇಲಿ ಕ್ಷೇತ್ರದಲ್ಲೇ ಕಾಂಗ್ರೆಸ್ ಸೋಲು ಕಂಡಿರುವುದು ಚಿಂತೆಗೀಡು ಮಾಡಿದೆ.
ಇನ್ನು ಪಂಜಾಬ್‍ನಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯಂತೆ ಆಮ್‍ಆದ್ಮಿ ಪ್ರಚಂಡ ಗೆಲುವು ಸಾಸಿದೆ. ಒಟ್ಟು 117 ಸ್ಥಾನಗಳ ಪೈಕಿ 80ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅರವಿಂದ ಕೇಜ್ರಿವಾಲ್ ವರ್ಚಸ್ಸು ದೆಹಲಿ ಗಡಿ ದಾಟಿದೆ. ಈಗಾಗಲೇ ಫಲಿತಾಂಶ ಹೊರ ಬೀಳುತ್ತಿದ್ದಂತೆ ಆಡಳಿತದಲ್ಲಿದ್ದ ಕಾಂಗ್ರೆಸ್ ಸೋಲು ಕಂಡಿದೆ. ಚರಜಿತ್ ಸಿಂಗ್ ಚನ್ನಿ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.
ಅಮೃತ್‍ಸರ, ಪಾಟೀಯಾಲದಲ್ಲಿ ಆಮ್‍ಆದ್ಮಿ ಕಾರ್ಯಕರ್ತರ ವಿಜಯೋತ್ಸವ ಮುಗಿಲು ಮುಟ್ಟಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದ ಕ್ಯಾಪ್ಟನ್ ಅಮರೇಂದರ್ ಸಿಂಗ್ ವಿಫಲರಾಗಿದ್ದಾರೆ.
ಕಾಂಗ್ರೆಸ್ ಕೇವಲ 15 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದ್ದು, ಹಿಂದೊಮ್ಮೆ ಗತವೈಭವದಿಂದ ಮೆರೆದಿದ್ದ ಶಿರೋಮಣಿ ಅಕಾಲಿದಳ ಕೇವಲ 7ರಿಂದ 8 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದ್ದು, ಸಂಪೂರ್ಣ ನೆಲಕಚ್ಚಿದೆ. ಬಿಜೆಪಿ ಕೇವಲ 4 ಸ್ಥಾನಗಳನ್ನು ಪಡೆದು ತೃಪ್ತಿಪಟ್ಟುಕೊಂಡಿದೆ. ಒಟ್ಟಾರೆ ಆಮ್‍ಆದ್ಮಿಯ ಆರ್ಭಟಕ್ಕೆ ರಾಷ್ಟ್ರೀಯ ಪಕ್ಷಗಳು ಧೂಳಿಪಟವಾಗಿವೆ.
ಇನ್ನು ಉತ್ತರಾಖಂಡ್ ಫಲಿತಾಂಶ ಭಾರೀ ಕುತೂಹಲ ಕೆರಳಿಸಿದ್ದು, ಮೂರು ಬಾರಿ ಮುಖ್ಯಮಂತ್ರಿಗಳ ಬದಲಾವಣೆ ನಡುವೆಯೂ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಒಟ್ಟು 70 ಕ್ಷೇತ್ರಗಳಲ್ಲಿ ಬಿಜೆಪಿ 44 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದ್ದು, ಕಾಂಗ್ರೆಸ್ 22 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.
ಭಾರೀ ನಿರೀಕ್ಷೆ ಹೊಂದಿ ಚುನಾವಣೆ ಮುಗಿದ ನಂತರ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕೆಂದು ಪಟ್ಟು ಹಿಡಿದಿದ್ದ ಕಾಂಗ್ರೆಸ್‍ನ ಮಾಜಿ ಸಿಎಂ ಹರೀಶ್ ರಾವತ್ ಮುಖಭಂಗ ಅನುಭವಿಸಿದ್ದಾರೆ. ಬಿಜೆಪಿಯ ತಂತ್ರಗಾರಿಕೆ ಇಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದು, ಪವಿತ್ರ ಕ್ಷೇತ್ರಗಳ ಸಂಗಮವಾಗಿರುವ ಈ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ನಡೆಸಿದ ಭಾವನಾತ್ಮಕ ಪ್ರಚಾರ ಕೈ ಹಿಡಿದಿದೆ.
ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸರ್ಕಾರ ರಚನೆಗೆ ಈಗಾಗಲೇ ರಾಜ್ಯಪಾಲರನ್ನು ಭೇಟಿ ಮಾಡಿ ಹಕ್ಕು ಮಂಡಿಸಿದೆ. ಬಿಜೆಪಿ ವರಿಷ್ಠರು ಈಗ ಯಾರನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂಬುದು ಭಾರೀ ಕುತೂಹಲ ಕೆರಳಿಸಿದೆ.
ಇನ್ನು ಈಶಾನ್ಯ ರಾಜ್ಯದ ಮಣಿಪುರದಲ್ಲೂ ಭಾರೀ ಪ್ರಯಾಸದ ನಡುವೆ ಬಿಜೆಪಿ ಅಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಒಟ್ಟು 60 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಬಹುಮತದತ್ತ ಸಾಗಿದೆ. ಕಾಂಗ್ರೆಸ್ 14 ಸ್ಥಾನಗಳನ್ನು, ಎನ್‍ಪಿಪಿ 11, ಎನ್‍ಪಿಎಫ್ 4 ಹಾಗೂ ಇತರರು 6 ಸ್ಥಾನಗಳನ್ನು ಗಳಿಸಿದ್ದಾರೆ.
ಕಡಲ ನಾಡು ಗೋವಾದಲ್ಲೂ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಬಿಜೆಪಿ ಅಧಿಕಾರ ಹಿಡಿಯಲು ಹರಸಾಹಸ ಮಾಡುತ್ತಿದೆ.
ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿಲ್ಲ. 40 ಸ್ಥಾನಗಳ ಪೈಕಿ 19 ಸ್ಥಾನ ಬಿಜೆಪಿ ಪಡೆದಿದ್ದರೆ ಕಾಂಗ್ರೆಸ್ 10 ಸ್ಥಾನ ಪಡೆದಿದೆ. ಟಿಎಂಸಿ 5, ಪಕ್ಷೇತರರು 4 ಸ್ಥಾನಗಳಲ್ಲಿ ಗೆಲುವು ಸಾಸಿದ್ದಾರೆ.
ಪಕ್ಷೇತರರ ಬೆಂಬಲ ಪಡೆದು ಅಧಿಕಾರ ಹಿಡಿಯಲು ಪ್ರಯತ್ನಗಳು ಮುಂದುವರೆದಿವೆ. ಗೋವಾದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ ಹಿಡಿಯಲು ರಣತಂತ್ರ ನಡೆಸಿದ್ದರೆ, ಕಾಂಗ್ರೆಸ್ ಕೂಡ ಪೈಪೋಟಿ ನಡೆಸಿದೆ. ರಾಜ್ಯದಲ್ಲಿ ಕಾಂಗ್ರೆಸ್‍ಗೆ ದೊಡ್ಡ ಪೆಟ್ಟು ನೀಡಿರುವ ತೃಣಮೂಲ ಕಾಂಗ್ರೆಸ್ ಪ್ರಥಮ ಬಾರಿಗೆ 5 ಸ್ಥಾನಗಳನ್ನು ಗೆಲ್ಲುವ ಮೂಲಕ ಮಮತಾ ಬ್ಯಾನರ್ಜಿ ಅವರು ದಕ್ಷಿಣದಲ್ಲೂ ತಮ್ಮ ಪಕ್ಷವನ್ನು ವಿಸ್ತರಿಸುವ ಹಾದಿಯನ್ನು ಸುಗಮಗೊಳಿಸಿದ್ದಾರೆ.
ಒಂದೊಮ್ಮೆ ಅವರು ಕಾಂಗ್ರೆಸ್‍ಗೆ ಬೆಂಬಲ ನೀಡಿದರೆ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇದೆ. ಇತರರು ಹಾಗೂ ಆಮ್‍ಆದ್ಮಿ ಜತೆಗೂಡಿ ಮತ್ತೊಂದು ಘಟಬಂದ್ ಸರ್ಕಾರ ಇಲ್ಲಿಗೆ ಅಧಿಕಾರಕ್ಕೆ ಬಂದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಹೇಳಲಾಗುತ್ತಿದೆ.

Articles You Might Like

Share This Article