ಹಳೇ ಮೈಸೂರಿನತ್ತ ಬಿಜೆಪಿ ಚಿತ್ತ

Social Share

ಬೆಂಗಳೂರು,ಜ.13- ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ರಾಜ್ಯದಲ್ಲಿ ಧಿಅಕಾರಕ್ಕೆ ಬರಲು ಕಾಂಗ್ರೆಸ್ ಹವಣಿಸುತ್ತಿದ್ದರೆ, ಇತ್ತ ಆಡಳಿತ ರೂಢ ಬಿಜೆಪಿ ಪಕ್ಷ ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಸಾಧಿಸುವತ್ತ ಚಿತ್ತನೆಟ್ಟಿದೆ.

ದಕ್ಷಿಣದ ರಾಜ್ಯದಲ್ಲಿ ಮತ್ತೊಮ್ಮೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ಅದಮ್ಯ ಬಯಕೆಯಲ್ಲಿ ಬಿಜೆಪಿ, ಒಕ್ಕಲಿಗ ಮತಗಳನ್ನು ಸೆಳೆಯಲು ತನ್ನದೇ ತಂತ್ರ ರೂಪಿಸುತ್ತಿದೆ. ಸ್ಥಳೀಯ ಪ್ರಭಾವಿ ನಾಯಕರನ್ನು ತನ್ನ ತೆಕ್ಕೆಕೆ ತೆಗೆದುಕೊಂಡು ಪ್ರಾಬಲ್ಯ ಸಾಧಿಸುವ ಯೋಜನೆಯಲ್ಲಿದೆ.

ದಕ್ಷಿಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಇದುವರೆಗೆ ವಿಧಾನಸಭೆ ಚುನಾವಣೆಗಳಲ್ಲಿ ಸಿಕ್ಕಿದ್ದು ಸಿಹಿಗಿಂತ ಜಾಸ್ತಿ ಕಹಿಯೇ. ಇಲ್ಲಿನ ಸಾಂಪ್ರದಾಯಿಕ ಮತಗಳು ಜೆಡಿಎಸ್ ಪಾಲಾಗುತ್ತಿತ್ತು. ಒಕ್ಕಲಿಗ ಸಮುದಾಯದ ಮೇಲೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪ್ರಭಾವ ಹೆಚ್ಚಾಗಿದೆ. ನಂತರದ್ದು ಕಾಂಗ್ರೆಸ್‍ನ್ನದೇ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬಂದ ಬಿಜೆಪಿಗೆ ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಪ್ರಭಾವ ಸಾಧಿಸಲು ಸಾಧ್ಯವಾದ ಕಸರತ್ತುಗಳನ್ನೆಲ್ಲಾ ಮಾಡುತ್ತಿದೆ. ಇದರ ಭಾಗವಾಗಿಯೇ ಕೆಲ ದಿನಗಳ ಹಿಂದೆ ಅಮಿತ್ ಶಾ ಮಂಡ್ಯದ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಿದ್ದು, ಕಳೆದ ವಾರ ಬಂದ ಜೆ.ಪಿ.ನಡ್ಡಾ ಕೂಡ ಹಲವು ಮಠಗಳಿಗೆ ಭೇಟಿ ನೀಡಿದ್ದರು.

ಅತಿ ಉದ್ದದ ನದಿ ವಿಹಾರಕ್ಕೆ ಪ್ರಧಾನಿ ಮೋದಿ ಚಾಲನೆ

2021ರ ಜುಲೈ ತಿಂಗಳಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನ ತೊರೆದು ಬಸವರಾಜ ಬೊಮ್ಮಾಯಿಗೆ ಹುದ್ದೆ ಬಿಟ್ಟುಕೊಟ್ಟರು. ಈ ಬಾರಿ 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ.

ಕರ್ನಾಟಕ ವಿಧಾನಸಭೆಯಲ್ಲಿ ಗೆಲ್ಲುವ ಮಹತ್ವಾಕಾಂಕ್ಷೆಯಲ್ಲಿರುವ ಬಿಜೆಪಿಗೆ ಹಳೆ ಮೈಸೂರು ಭಾಗದ ಮೇಲೆ ಭರವಸೆ ಹೆಚ್ಚಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಕರ್ನಾಟಕದಿಂದ 25 ಸಂಸದರು ಬಿಜೆಪಿಯಿಂದ ಆಯ್ಕೆಯಾಗಿ ಹೋಗಿದ್ದಾರೆ.

ಪ್ರಸ್ತುತ ಬೊಮ್ಮಾಯಿ ಸಂಪುಟದಲ್ಲಿ 7 ಮಂದಿ ಒಕ್ಕಲಿಗ ಸಚಿವರಿದ್ದಾರೆ. ಕೇಂದ್ರದಲ್ಲಿ ಮಂತ್ರಿಯಾಗಿರುವ ಶೋಭಾ ಕರಂದ್ಲಾಜೆ ಕೂಡ ಒಕ್ಕಲಿಗ ಸಮುದಾಯದವರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಹ ಒಕ್ಕಲಿಗ ಸಮುದಾಯಕ್ಕೆ ಸೇರಿದವರು.

ರಾಂಚಿ ಹೊರವಲಯದಲ್ಲಿ ಭದ್ರತಾ ಪಡೆ-ನಕ್ಸಲರ ನಡುವೆ ಗುಂಡಿನ ಚಕಮಕಿ

ಕರ್ನಾಟಕದಲ್ಲಿ ಚುನಾವಣೆಯಲ್ಲಿ ನಿರ್ಣಾಯಕವಾಗುವ ಜಾತಿಗಳಲ್ಲಿ ಮೊದಲ ಸ್ಥಾನದಲ್ಲಿ ಲಿಂಗಾಯತ ಸಮುದಾಯ ಎರಡನೆ ಸ್ಥಾನದಲ್ಲಿ ಒಕ್ಕಲಿಗ ಸಮುದಾಯವಿದೆ. ಬೆಂಗಳೂರು ಹೊರಗೆ ಹಳೆ ಮೈಸೂರು ಭಾಗದಲ್ಲಿ ಸುಮಾರು 64 ವಿಧಾನಸಭಾ ಸ್ಥಾನಗಳಿವೆ. ಕಳೆದ ಬಾರಿ ಬಿಜೆಪಿ ಬೆರಳೆಣಿಕೆಯ ಸೀಟುಗಳನ್ನು ಮಾತ್ರ ಇಲ್ಲಿ ಗೆದ್ದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಹೆಚ್ಚಿನ ಸ್ಥಾನಗಳು ಹೋಗಿದ್ದವು.

assembly elections, BJP, South Karnataka,

Articles You Might Like

Share This Article