ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಇನ್ನೂ ವಿಳಂಬ

Social Share

ಬೆಂಗಳೂರು,ಫೆ.28-ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಶರವೇಗ ಅನುಸರಿಸಿದ ಕಾಂಗ್ರೆಸ್ ಇದ್ದಕ್ಕಿದ್ದಂತೆ ನಿಧಾನವೇ ಪ್ರಧಾನ ಎಂಬ ತಂತ್ರಗಾರಿಕೆ ಅನುಸರಿಸಲಾರಂಭಿಸಿದೆ. ಮೊದಲ ಹಂತದಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಒಬ್ಬ ಅಭ್ಯರ್ಥಿಯ ಹೆಸರನ್ನು ಅಖೈರುಗೊಳಿಸಿ ಕಳುಹಿಸಲಾಗಿದೆ. ಉಳಿದ 50 ಕ್ಷೇತ್ರಗಳಿಗೆ 2ರಿಂದ 3 ಹೆಸರುಗಳ ಶಿಫಾರಸು ಮಾಡಲಾಗಿದೆ. ಬಾಕಿ ಸುಮಾರು 20 ಕ್ಷೇತ್ರಗಳು ಕಾಂಗ್ರೆಸ್‍ಗೆ ತಲೆನೋವಾಗಿವೆ.

ಅಲ್ಲಿ ಪ್ರಭಾವಿ ನಾಯಕರೇ ಟಿಕೆಟ್‍ಗಾಗಿ ಜಿದ್ದಾಜಿದ್ದಿ ನಡೆಸುತ್ತಿದ್ದಾರೆ. ಹೀಗಾಗಿ ಮನವೊಲಿಸುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈಗಾಗಲೇ ಬಳ್ಳಾರಿ, ಬೀದರ್ ಉತ್ತರ, ಹಿರಿಯೂರು, ಚಳ್ಳಕೆರೆ, ಪುಲಕೇಶಿನಗರ, ಯಶವಂತಪುರ, ಯಲಹಂಕ, ಬೊಮ್ಮನಹಳ್ಳಿ ಸೇರಿದಂತೆ ಹಲವು ಕ್ಷೇತ್ರಗಳ ಆಕಾಂಕ್ಷಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ.

ಚುನಾವಣಾ ಕಾಲದಲ್ಲಿ ಅನಗತ್ಯ ಗೊಂದಲಗಳು ಸೃಷ್ಟಿಯಾಗಬಾರದು. ಯಾರಿಗೆ ಟಿಕೆಟ್ ಸಿಕ್ಕರೂ ಎಲ್ಲರೂ ಒಮ್ಮತದಿಂದ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ.

ಮಾಜಿ ಶಾಸಕರು ಇರುವ ಕ್ಷೇತ್ರಗಳಲ್ಲಿ ಹಲವಾರು ಮಂದಿ ಆಕಾಂಕ್ಷಿಗಳು ತಲೆ ಎತ್ತಿದ್ದಾರೆ. ಆಪರೇಷನ್ ಕಮಲದಿಂದ ಪಕ್ಷ ಬಿಟ್ಟು ಹೋದವರ ಕ್ಷೇತ್ರಗಳಿಗೆ ಬಿಜೆಪಿಯಲ್ಲಿರುವ ಪ್ರಭಾವಿ ನಾಯಕರನ್ನು ಕರೆತರಲಾಗಿದೆ. ಆದರೆ, ಅಲ್ಲಿ ಮೂಲ ಕಾಂಗ್ರೆಸಿಗರು ಪ್ರಬಲ ಆಕಾಂಕ್ಷಿಗಳಾಗಿದ್ದು, ವಲಸಿಗರಿಗೆ ಟಿಕೆಟ್ ನೀಡಬಾರದು, ಪಕ್ಷ ನಿಷ್ಟರನ್ನು ಪರಿಗಣಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಮುಳ್ಳುಹಂದಿ ಶಿಕಾರಿಗೆ ಹೋದಾಗ ಸುರಂಗದಲ್ಲಿ ಸಿಲುಕು ಇಬ್ಬರ ಸಾವು

ಹೀಗಾಗಿ ಕೆಲವು ಕಡೆ ಗೊಂದಲಗಳು ಸೃಷ್ಟಿಯಾಗಿವೆ. ಅವರ ಮನವೊಲಿಸಲು ಪ್ರಜಾಧ್ವನಿಯಾತ್ರೆಯಲ್ಲಿ ಚರ್ಚೆ ನಡೆಸುವ ಜತೆಗೆ ಬೆಂಗಳೂರಿಗೆ ಕರೆಸಿ ಮಾತುಕತೆ ನಡೆಸಲಾಗುತ್ತಿದೆ.

ಕನಿಷ್ಠ 15 ಕ್ಷೇತ್ರಗಳಲ್ಲಾದರೂ ಬಂಡಾಯಗಾರರು ಕಣಕ್ಕಿಳಿಯುವ ಅಂದಾಜುಗಳು ಕಾಂಗ್ರೆಸ್‍ನಲ್ಲಿದೆ. ಹೀಗಾಗಿ ಪ್ರತಿ ತಂತ್ರ ರೂಪಿಸಲು ಈಗಾಗಲೇ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಪ್ರತಿಭಟನೆ ಕೈಬಿಡಲು ಸರ್ಕಾರಿ ನೌಕರರಿಗೆ ಸಿಎಂ ಮನವಿ

ಪ್ರಬಲ ಅಭ್ಯರ್ಥಿಗಳಹಿರಿಯ ನಾಯಕರೊಂದಿಗೆ ಸಮನ್ವಯತೆ ಸಾಸಿ ಉಳಿದ ಆಕಾಂಕ್ಷಿಗಳಿಗೆ ಮನವೊಲಿಸುವ ಜವಾಬ್ದಾರಿ ನೀಡಲಾಗಿದೆ. ಒಂದು ವೇಳೆ ಸ್ಥಳೀಯ ಮಟ್ಟದಲ್ಲಿ ಬಂಡಾಯ ತಣಿಯದೇ ಇದ್ದಾರೆ ರಾಜ್ಯ ಮಟ್ಟದಲ್ಲಿ ಚರ್ಚೆ ನಡೆಸುವ ಪ್ರಯತ್ನಗಳು ನಡೆಯುತ್ತಿವೆ. ಈ ಬಾರಿ ಬಂಡಾಯಗಾರರ ವಿರುದ್ಧ ಆರಂಭದಲ್ಲೇ ಕಠಿಣ ಕ್ರಮ ಜರುಗಿಸಲು ಶಿಸ್ತು ಸಮಿತಿಗೆ ಸೂಚಿಸಲಾಗಿದೆ.

Assembly, elections, Congress, candidates, selection,

Articles You Might Like

Share This Article