ವಿಧಾನಸಭೆ ಚುನಾವಣೆಗೆ ಬಿಜೆಪಿ ಭಾರೀ ತಂತ್ರ

Social Share

ಬೆಂಗಳೂರು,ಜು.22- 2023ರ ವಿಧಾನಸಭೆ ಚುನಾವಣೆಗೆ ದಿನ ಸನ್ನಿಹಿತವಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ತನ್ನ ತಯಾರಿಯನ್ನು ತೀವ್ರಗೊಳಿಸಿದೆ. ಹೀಗಾಗಿ ನಾನಾ ತಂತ್ರಗಳನ್ನು ಹೆಣೆಯಲು ಮುಂದಾಗಿದೆ. ಸರಣಿ ಸಭೆಗಳನ್ನು ನಡೆಸುತ್ತಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಮಧ್ಯಸ್ಥಿಕೆಯಲ್ಲಿ ಚುನಾವಣೆಯಲ್ಲಿ ಹೆಚ್ಚಿನ ಸಾಧನೆ ತೋರುವವರನ್ನು ಕರೆತರಲಾಗುತ್ತಿದೆ.

2013ರ ವಿಧಾನಸಭೆ ಚುನಾವಣೆಯಲ್ಲಿ ಸಂಘಟನಾ ಲೋಪದಿಂದ ಬಿಜೆಪಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಳ್ಳಬೇಕಾಗಿತ್ತು.
ಇದೀಗ 2023ರಲ್ಲಿ ಅದೇ ತಪ್ಪನ್ನು ಪುನರಾವರ್ತಿಸಲು ಪಕ್ಷ, ಪಕ್ಷದಲ್ಲಿನ ನಾಯಕರು ಸಿದ್ಧರಿಲ್ಲ. ಮೈಸೂರು ಮತ್ತು ತುಮಕೂರುಗಳಲ್ಲಿ ಪ್ರಚಾರಕರಾಗಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ(ಸಂಘಟನೆ)ಜಿ ವಿ ರಾಜೇಶ್, ಮತ್ತೊಬ್ಬ ಪ್ರಚಾರಕ ಅರುಣ್ ಕುಮಾರ್ ಅವರ ಸ್ಥಾನವನ್ನು ತುಂಬಲಿದ್ದಾರೆ. ಆರ್‍ಎಸ್‍ಎಸ್‍ನಲ್ಲಿ ಪ್ರಚಾರಕರು ಅವಿವಾಹಿತರಾಗಿದ್ದು ಪೂರ್ಣಕಾಲಿಕ ಕಾರ್ಯಕರ್ತರಾಗಿರುತ್ತಾರೆ. ಅವರು ಬಿಜೆಪಿಯಲ್ಲೂ ಕೆಲಸ ಮಾಡುತ್ತಾರೆ.

ಪಕ್ಷದಲ್ಲಿನ ಸ್ಥಾನಗಳ ನೇಮಕಾತಿಯಲ್ಲಿ ಪ್ರಚಾರಕರ ನೇಮಕ ಮೊದಲ ಬಾರಿಗೆ ನಡೆಯುತ್ತಿದೆ. ಆಗಸ್ಟ್‍ನಲ್ಲಿ ನಳೀನ್ ಕುಮಾರ್ ಕಟೀಲ್ ಅವರ ಕಾಲಾವ ಮುಗಿಯಲಿದ್ದು ರಾಜ್ಯ ಬಿಜೆಪಿಯ ಮುಂದಿನ ಅಧ್ಯಕ್ಷರ ನೇಮಕ ಕೂಡ ಚುನಾವಣೆ ಹೊಸ್ತಿಲಿನಲ್ಲಿ ಮುಖ್ಯವಾಗಿದೆ.

ಸದ್ಯದಲ್ಲಿಯೇ ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕಾತಿ ನಡೆಯಲಿದೆ ಎಂಬ ಸೂಚನೆ ಸಿಕ್ಕಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಸುನೀಲ್‍ಕುಮಾರ್ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಬಿಜೆಪಿ ಅಧ್ಯಕ್ಷೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಸಂತೋಷ್ ಮತ್ತು ಯಡಿಯೂರಪ್ಪ ಪಾಳಯ ಅವರನ್ನು ಒಕ್ಕಲಿಗರು ಎಂದು ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡ ಒಕ್ಕಲಿಗರಾಗಿದ್ದು, ಸಂತೋಷ ಪಾಳಯಕ್ಕೆ ಹತ್ತಿರವಾಗಿದ್ದಾರೆ, ಇಂಧನ ಸಚಿವ ಸುನೀಲ್ ಕುಮಾರ್ ಹಿಂದುಳಿದ ಪೂಜಾರಿ ಸಮುದಾಯದವರಾಗಿದ್ದಾರೆ.

ಬಿ.ಎಲ್.ಸಂತೋಷ್ ಮತ್ತು ಅರುಣ್‍ಕುಮಾರ್ ಅವರಂತಹ ಪೂರ್ಣ ಸಮಯದ ಆರ್‍ಎಸ್‍ಎಸ್ ಪ್ರಚಾರಕರು, ದಕ್ಷಿಣ ಕನ್ನಡದವರು. ಪ್ರಧಾನ ಕಾರ್ಯದರ್ಶಿಯಾಗಿ ಬಿ.ವೈ.ವಿಜಯೇಂದ್ರ ಅವರನ್ನು ಕರೆತರುವ ಸಾಧ್ಯತೆ ಇದ್ದು, ಹಿಂದಿನ ಪ್ರಧಾನ ಕಾರ್ಯದರ್ಶಿಗಳು ಮತ್ತು ಇತರ ಪದಾಕಾರಿಗಳ ತಂಡ ಬದಲಾಗುವ ಸಾಧ್ಯತೆ ಬಿಜೆಪಿಯಲ್ಲಿ ದಟ್ಟವಾಗಿದೆ.

Articles You Might Like

Share This Article