ಬೆಂಗಳೂರು, ಜು. 13- ಜ್ಯೋತಿಷಿ ಮನೆ ದರೋಡೆ ಪ್ರಕರಣದಲ್ಲಿ ಮಹಿಳೆಯೊಬ್ಬರ ಪಾತ್ರವಿರುವ ಬಗ್ಗೆ ಕೆಂಗೇರಿ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ. ದರೋಡೆ ಪ್ರಕರಣದ ಕಿಂಗ್‍ಪಿನ್ ಎಂದು ಹೇಳಲಾಗಿರುವ ಆ ಮಹಿಳೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತಿ ್ತ ದ್ದಾರೆ ಎಂದು ತಿಳಿದುಬಂದಿದೆ.
ಈಕೆಯು ಆರೋಪಿಗಳಿಗೆ ಸುಪಾರಿ ನೀಡಿ ಜ್ಯೋತಿಷಿ ಮನೆ ದರೋಡೆ ಮಾಡುವಂತೆ ಹೇಳಿದ್ದಳು ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ದರೋಡೆಕೋರರು ಜ್ಯೋತಿಷಿ ಮನೆಯ ದರೋಡೆ ಮಾಡಿಕೊಂಡು ತಮಿಳುನಾಡಿಗೆ ಪರಾರಿಯಾಗಿದ್ದಾರೆಂಬ ಹಿನ್ನೆಲೆಯಲ್ಲಿ ಕೆಂಗೇರಿ ಪೊಲೀಸರ ತಂಡವೊಂದು ಅಲ್ಲಿಗೆ ತೆರಳಿದೆ.
ಕಳೆದ ಶನಿವಾರ ಕೆಂಗೇರಿ ರೈಲ್ವೆ ನಿಲ್ದಾಣದ ಮುಂಭಾಗ ವಾಸವಾಗಿರುವ ಜ್ಯೋತಿಷಿ ಪ್ರಮೋದ್ ಎಂಬುವವರ ಮನೆಗೆ ಜ್ಯೋತಿಷಿ ಕೇಳುವ ನೆಪದಲ್ಲಿ ಬಂದ ಮೂವರು ಅವರನ್ನು ಕಟ್ಟಿ ಹಾಕಿ 5 ಲಕ್ಷ ರೂಪಾಯಿ ನಗದು ಮತ್ತು 400 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.