ನ್ಯೂಯಾರ್ಕ್,ಫೆ.14- ಅಮೆರಿಕದ ಮಿಚಿಗನ್ ವಿಶ್ವವಿದ್ಯಾನಿಲಯ ಕ್ಯಾಂಪಸ್‍ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ಶೈಕ್ಷಣಿಕ ಕಟ್ಟಡದ ಮತು ಅಥ್ಲೆಟಿಕ್ ಸೌಲಭ್ಯದ ಆವರಣದಲ್ಲಿ ಬಳಿ ಗುಂಡಿನ ದಳಿ ನಡೆದಿದ್ದು ಎಂದು ಪೊಲೀಸರು ಹೇಳಿದ್ದಾರೆ.
ವಿವಿ ಕ್ಯಾಂಪಸ್ ಸುತ್ತುವರಿದಿದ್ದು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ರಕ್ಷಿಸಲು ಪ್ರಯತ್ನಿಸಲಾಗಿದೆ ಉನ್ನತ ಶಿಕ್ಷಣದ ಪ್ರಮುಖ ಸಂಸ್ಥೆಯಾಗಿದ್ದು,ಸುಮಾರು 50 ಸಾವಿರ ಪದವೀಧರ ಮತ್ತು ಪದವಿಪೂರ್ವ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಮುಖಕ್ಕೆ ಮಾಸ್ಕ್ ಒಳ ನುಗ್ಗಿರುವ ದುಷ್ಕರ್ಮಿ ಗುಂಡು ಹಾರಿಸಿ ಪರಾರಿಯಾಗಿರುವ ಸಾಧ್ಯತೆ ಇದ್ದು ,ಐವರು ಗಾಯಾಳುಗಳನ್ನು ಆಸ್ಪತ್ತೆಗೆ ದಾಖಲು ಮಾಡಲಾಗಿದೆ.ಪೊಲೀಸರು ತನಿಖೆ ಆರಂಭಿಸಿದ್ದು ಸಾಮಾಜಿಕ ಮಾಧ್ಯಮ ಮೂಲಕ ತಪ್ಪು ಮಾಹಿತಿ ಹರಡಬೇಡಿ ಎಂದು ಮನವಿ ಮಾಡಿದ್ದಾರೆ.
#3dead, #5injured #shooting, #Michigan, #StateUniversity,