ಸೋಮಾಲಿಯಾದಲ್ಲಿ ಆತ್ಮಾಹುತಿ ದಾಳಿಗೆ 32 ಮಂದಿ ಬಲಿ

ಮೊಗಾದಿಶು,ಆ.4- ಸೋಮಾಲಿಯಾದ ರಾಜಧಾನಿ ಮೊಗಾದಿಶುವಿನ ಬೀಚ್‌ ಹೋಟೆಲ್‌‍ನಲ್ಲಿ ಆತಾಹುತಿ ಬಾಂಬ್‌ ದಾಳಿಗೆ 32 ಮಂದಿ ಬಲಿಯಾಗಿ, 63 ಜನರು ಗಾಯಗೊಂಡಿದ್ದಾರೆ. ಅಲ್‌‍-ಖೈದಾದ ಪೂರ್ವ ಆಫ್ರಿಕಾದ ಅಂಗಸಂಸ್ಥೆ ಅಲ್‌‍-ಶಬಾಬ್‌ ತನ್ನ ರೇಡಿಯೋ ಸ್ಟೇಷನ್‌ ಮೂಲಕ ತನ್ನ ಹೋರಾಟಗಾರರು ಈ ದಾಳಿ ನಡೆಸಿದ್ದಾರೆ ಎಂದು ಹೇಳಿಕೊಂಡಿದೆ. ದಾಳಿಯಲ್ಲಿ ಓರ್ವ ಯೋಧ ಸಾವನ್ನಪ್ಪಿದ್ದು, ಉಳಿದವರು ನಾಗರಿಕರು ಎಂದು ಪೊಲೀಸ್‌‍ ವಕ್ತಾರ ಮೇಜರ್‌ ಅಬ್ದಿಫತಾ ಆದಾನ್‌ ಹಸನ್‌ ಪತ್ರಕರ್ತರಿಗೆ ತಿಳಿಸಿದ್ದಾರೆ. ದಾಳಿಯಲ್ಲಿ ಮತ್ತೊಬ್ಬ ಯೋಧ ಕೂಡ ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. … Continue reading ಸೋಮಾಲಿಯಾದಲ್ಲಿ ಆತ್ಮಾಹುತಿ ದಾಳಿಗೆ 32 ಮಂದಿ ಬಲಿ