ಮುಂಬೈ,ಜ.22 ನಟಿ ಅಥಿಯಾ ಶೆಟ್ಟಿ ಮತ್ತು ಕೆ.ಎಲ್ .ರಾಹುಲ್ ಮದುವೆ ಮಹೋತ್ಸವ ಕಾರ್ಯ ಆರಂಭಗೊಂಡಿದೆ. ಕಂಡಾಲಾದ ಫಾರಂ ಹೌಸ್ನಲ್ಲಿ ಮಂಗಳವಾದ್ಯ ಮೊಳಗಲಾರಂಭಿಸಿದೆ ಮದುವೆ ಮಂಟಪ ಸಿಂಗಾರಗೊಂಡಿದ್ದು, ನಾಳೆ (ಜ.23) ದಾಂಪತ್ಯ ಜೀವನಕ್ಕೆ ಕಾಲಿಡುವ ಈ ಜೋಡಿಗೆ ಹರಿಶಿನ ಶಾಸ್ತ್ರ ಸೇರಿದಂತೆ ಹಲವು ದಾರ್ಮಿಕ ಕಾರ್ಯ ಬೆಳಿಗ್ಗೆ ಆರಂಭಗೊಂಡಿದೆ.
ಸುನೀಲ್ ಶೆಟ್ಟಿ ಕೂಡ ಸಂಭ್ರಮದಿಂದ ಅತಿಥಿಗಳನ್ನು ಸ್ವಾಗತಿಸುತ್ತಿದ್ದು ನೋ ಫೋನ್(ಮೊಬೈಲ್ಬಳಕೆ ನಿಷೇಧ)ನೀತಿ ಅನುಸರಿಸುವಂತೆ ಅತಿಥಿಗಳಿಗೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ.
ಅಮೆರಿಕ ಅಧ್ಯಕ್ಷ ಬಿಡೆನ್ ಮನೆಯಲ್ಲಿ ಎಫ್ಬಿಐ ಶೋಧ ದಾಖಲೆಗಳ ವಶ
ಇದಲ್ಲದೆ ಅತಿಥಿಗಳು ಫೋಟೋಗಳು ಅಥವಾ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಲು ಅನುಮತಿ ನೀಡಿಲ್ಲ ಮದುವೆ ಬರುವ ಮಾಧ್ಯಮದವರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ.
ಮದುವೆ ಬಗ್ಗೆ ಶೆಟ್ಟಿ ಕುಟುಂಬವಾಗಲಿ ಅಥವಾ ಕ್ರಿಕೆಟಿಗನ ಕುಟುಂಬವಾಗಲಿ ಯಾವುದೇ ಹೇಳಿಕೆ ನೀಡಿಲ್ಲವೆಂದು ತಿಳಿದುಬಂದಿದೆ. ಹಲವು ಗಣ್ಯರು, ಬಾಲಿವುಡ್ ನಟ ನಟಿಯರು ಆಗಮಿಸಿದ್ದಾರೆ. ಆರತಕ್ಷತೆ ಅದ್ದೂರಿಯಾಗಿ ನಡೆಯಲಿದೆ ಎನ್ನಲಾಗಿದೆ.
Athiya Shetty, KL Rahul, wedding,