ಕಂಠೀರವ ಕ್ರೀಡಾಂಗಣದಲ್ಲಿ ಖ್ಯಾತ ಅಥ್ಲೆಟಿಕ್ಸ್ ಕೋಚ್​ಗೆ ಅಪಮಾನ

Social Share

ಬೆಂಗಳೂರು,ಅ.15- ನಗರದ ಕಂಠೀರವ ಕ್ರೀಡಾಂಗಣದಲ್ಲಿ ಖ್ಯಾತ ಅಥ್ಲೆಟಿಕ್ಸ್ ಹಾಗೂ ಕೋಚ್​ಗೆ ಅಪಮಾನವಾಗಿರುವ ವರದಿ ತಡವಾಗಿ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ ಬೇಲೂರಿನ ರಾಷ್ಟ್ರೀಯ ಕ್ರೀಡಾಪಟು ಡಿ.ಪಿ. ಮನು ಹಾಗೂ ವಿಶ್ವದ ನಂಬರ್ ಒನ್ ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ ಅವರ ಕೋಚ್ ಆಗಿದ್ದ ಕಾಶಿನಾಥ್ ನಾಯ್ಕ್ ಅವರಿಗೂ ಅಪಮಾನ ಮಾಡಲಾಗಿದೆ.

ನೀರಜ್ ಚೋಪ್ರಾ ನಂತರ ಜಾವೆಲಿನ್ ಎಸೆತದಲ್ಲಿ ಮುಂಚೂಣಿಯಲ್ಲಿರುವ ಮನು ಅವರಿಗೆ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಅವಕಾಶ ನಿರಾಕರಿಸುವ ಮೂಲಕ ಅಪಮಾನ ಮಾಡಲಾಗಿದೆ. ಮುಕ್ತ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಮನು ಹಾಗೂ ಕಾಶಿನಾಥ್ ನಾಯ್ಕ್ ಅವರಿಗೆ ಅಭ್ಯಾಸಕ್ಕೆ ಅವಕಾಶ ನಿರಾಕರಿಸಿರುವ ಕ್ರೀಡಾಕೂಟದ ನಿರ್ದೇಶಕ ಸತ್ಯನಾರಾಯಣ್ ಅವರ ದುರ್ವತನೆ ಹಲವರ ಟೀಕೆಗೆ ಗುರಿಯಾಗಿದೆ.

ಕ್ರೀಡಾ ಕೂಟದಲ್ಲಿ ಭಾಗವಹಿಸಲು ಬಂದಿದ್ದ ವಿವಿಧ ರಾಜ್ಯದ ಕ್ರೀಡಾಪಟುಗಳ ಅಭ್ಯಾಸಕ್ಕೆ ಅವಕಾಶ ನೀಡಿ ರಾಜ್ಯದ ಯುವ ಪ್ರತಿಭೆಗೆ ಮಾತ್ರ ಅವಕಾಶ ನಿರಾಕರಿಸಿರುವ ಸತ್ಯನಾರಾಯಣ್ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕ್ರೀಡಾಕೂಟದಲ್ಲಿ ಭಾಗವಹಸಬೇಕಿದ್ದ ಮನು ಅವರಿಗೆ ಕೋಚ್ ಕಾಶಿನಾಥ್ ನಾಯ್ಕ್ ಅವರು ಸ್ಟೇಡಿಯಂನಲ್ಲಿ ತರಬೇತಿ ನೀಡಲು ಮುಂದಾಗಿದ್ದರು. ಆದರೆ, ಕಳೆದ ಗುರುವಾರ ಕ್ರೀಡಾಂಗಣಕ್ಕೆ ಬಂದ ಇಬ್ಬರಿಗೂ ಸತ್ಯನಾರಾಯಣ ಅವರ ಅಭ್ಯಾಸಕ್ಕೆ ಅವಕಾಶ ನಿರಾಕರಿಸಿದ್ದಾರೆ.

ನಾನು ನೀರಜ್ ಚೋಪ್ರಾ ಅವರ ಕೋಚ್ ಎಂದಾಗಲೂ ಚೋಪ್ರಾ ಅವರ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದೇ ಅಲ್ಲದೆ ಯಾವುದೆ ಕಾರಣಕ್ಕೂ ಅಭ್ಯಾಸಕ್ಕೆ ಅವಕಾಶ ನೀಡುವುದಿಲ್ಲ ಎಂದು ಸತ್ಯನಾರಾಯಣ್ ಅವರು ಅವಾಜ್ ಹಾಕಿರುವ ವಿಡಿಯೋ ತುಣುಕನ್ನು ಟ್ವಿಟರ್ನಲ್ಲಿ ಹಾಕುವ ಮೂಲಕ ತಮಗಾದ ಅನ್ಯಾಯವನ್ನು ಕಾಶಿನಾಥ್ ಬಹಿರಂಗಗೊಳಿಸಿದ್ದಾರೆ.

ರಾಷ್ಟ್ರೀಯ ಕ್ರೀಡಾಪಟುವಾಗಿ ರೂಪುಗೊಂಡಿರುವ ಮನು ಅವರು ಭವಿಷ್ಯದಲ್ಲಿ ಕ್ರೀಡಾರಂಗದಲ್ಲಿ ಪ್ರಜ್ವಲಿಸಲಿದ್ದಾರೆ. ರಾಜ್ಯವೇ ಹೆಮ್ಮೆಪಡುವಂತಹ ಕ್ರೀಡಾಪಟು ಬಗ್ಗೆ ಸತ್ಯನಾರಾಯಣ್ ಅವರು ನಡೆದುಕೊಂಡ ರೀತಿ ನನಗೆ ನೋವು ತರಿಸಿದೆ ಎಂದು ಕಾಶಿನಾಥ್ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ರಾಜ್ಯದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತೇವೆ ಎಂದ ಸರ್ಕಾರ ಹೇಳುತ್ತದೆ ಅದರೆ, ಕಂಠೀರವ ಕ್ರೀಡಾಂಗಣದ ಆಡಳಿತ ಮಂಡಳಿ ಏನು ಮಾಡ್ತಿದೆ,ಬೇರೆ ರಾಜ್ಯದ ಕ್ರೀಡಾಪಟುಗಳಿಗೆ ಅಭ್ಯಾಸಕ್ಕೆ ಅವಕಾಶ ಸಿಗುತ್ತಿದೆ. ನಮಗೆ ಏಕೆ ಇಲ್ಲ ಎಂದು ಪ್ರಶ್ನೆ ಮಾಡಿರುವ ಅವರು ಈ ಅನ್ಯಾಯದ ವಿರುದ್ಧ ಕ್ರೀಡಾ ಸಚಿವ ನಾರಾಯಣಗೌಡ ಅವರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ರಾಷ್ಟ್ರೀಯ ಕ್ರೀಡಾಕೂಟ, ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿರುವ ಮನು ಅವರು ರಾಷ್ಟ್ರೀಯ ಜಾವೆಲಿನ್ ಎಸೆತಗಾರರ ಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿದ್ದು, ಅಮೇರಿಕಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸï ಚಾಂಪಿಯನ್ ಶಿಪ್ ಟೂರ್ನಿಯಲ್ಲೂ ಮನು ಭಾಗವಹಿಸುತ್ತಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಚಾರವಾಗಿದೆ.

Articles You Might Like

Share This Article