ಎಟಿಎಂ ಯಂತ್ರವನ್ನೇ ಕದ್ದೊಯ್ದ ಚಾಲಾಕಿ ಕಳ್ಳರು

Social Share

ಬೆಂಗಳೂರು, ಡಿ.13- ಚಾಲಾಕಿ ಕಳ್ಳರು ಗೂಡ್ಸ್ ವಾಹನದಲ್ಲಿ ಬಂದು 3.16 ಲಕ್ಷ ರೂ. ಹಣವಿದ್ದ ಎಟಿಎಂ ಯಂತ್ರವನ್ನೇ ಕದ್ದೊಯ್ದಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹರಳೂರು ರಸ್ತೆಯಲ್ಲಿ ಬ್ಯಾಂಕ್ ಆಫ್ ಬರೋಡ ಶಾಖೆಗೆ ಸೇರಿದ ಎಟಿಎಂ ಕೇಂದ್ರವಿದೆ. ಡಿ. 10ರಂದು ರಾತ್ರಿ ಕಳ್ಳರು ವಾಹನದಲ್ಲಿ ಬಂದು ಎಟಿಎಂ ಮಿಷನ್‍ಗೆ ಅಳವಡಿಸಿದ್ದ ವೈರ್‍ಗಳನ್ನು ಕತ್ತರಿಸಿ ಎಟಿಎಂ ಯಂತ್ರವನ್ನೇ ಎತ್ತಿಕೊಂಡು ಪರಾರಿಯಾಗಿದ್ದಾರೆ.

ಎಟಿಎಂ ಕೇಂದ್ರದಲ್ಲಿ ಸೆಕ್ಯುರಿಟಿ ಗಾರ್ಡ್ ನಿಯೋಜಿಸಲಾಗಿತ್ತು. ಅವರು ಎಟಿಎಂ ಕೇಂದ್ರ ಕಟ್ಟಡದ ಸೆಲ್ಲರ್‍ನಲ್ಲಿ ಮಲಗಿದ್ದ ಕಾರಣ ಮಿಷನ್ ಕಳ್ಳತನವಾಗಿರುವುದು ಅವರ ಗಮನಕ್ಕೆ ಬಂದಿಲ್ಲ.

ಚುನಾವಣೆ ಎದುರಿಸಲು ರಾಜ್ಯ ಬಿಜೆಪಿಯಲ್ಲಿ ವರ್ಚಸ್ವಿ ನಾಯಕನ ಕೊರತೆ

ಮುಂಜಾನೆ ಎದ್ದು ನೋಡಿದಾಗ ಎಟಿಎಂ ಮಿಷನ್ ನಾಪತ್ತೆಯಾಗಿರುವುದನ್ನು ಕಂಡು ಗಾಬರಿಯಾಗಿ ಬರೋಡ ಬ್ಯಾಂಕಿನ ಮ್ಯಾನೇಜರ್‍ಗೆ ವಿಷಯ ತಿಳಿಸಿದ್ದಾನೆ. ಮ್ಯಾನೇಜರ್ ಅವರು ಸ್ಥಳಕ್ಕಾಗಮಿಸಿ ನೋಡಿ ನಂತರ ಬೆಳ್ಳಂದೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಖರ್ಗೆ ಹೆಸರಿಗಷ್ಟೇ ಕಾಂಗ್ರೆಸ್ ಅಧ್ಯಕ್ಷರು, ಈಗಲೂ ಜೀ ಹುಜೂರ್ ಸಂಸ್ಕೃತಿ ಇದೆ : ಬಿಜೆಪಿ ವ್ಯಂಗ್ಯ

ಎರಡು ತಂಡ ರಚನೆ:
ಹಣದ ಸಮೇತ ಎಟಿಎಂ ಯಂತ್ರವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರ ಪತ್ತೆಗಾಗಿ ಎರಡು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ಅವರು ಈ ಸಂಜೆಗೆ ತಿಳಿಸಿದ್ದಾರೆ.
ಆರೋಪಿಗಳ ಸುಳಿವಿದ್ದು, ಆದಷ್ಟು ಬೇಗ ಎಟಿಎಂ ಮಿಷನ್ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ATM machine, theft, Bengaluru,

Articles You Might Like

Share This Article