ಬಾಗ್ಪತ್ ಫೆ.8 ಛಪ್ರೌಲಿ ಗ್ರಾಮದ ಬಳಿ ಬಾಗ್ಪತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಹೇಂದ್ರ ರಮಾಲಾ ಅವರ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳು ಕಳೆದ ರಾತ್ರಿ ದಾಳಿ ನಡೆಸಿದ್ದಾರೆ. ಹಾಲಿ ಶಾಸಕಿಯಾಗಿರುವ ಸಹೇಂದ್ರ ರಮಾಲಾ ಪ್ರಚಾರಕ್ಕೆ ಬಂದಾಗ ಬೆಂಗಾವಲು ಪಡೆಯ ಮೇಲೆ ಕಿಡಿಗೇಡಿಗಳು ಹಸುವಿನ ಸಗಣಿ ಎಸೆದು ಕಲ್ಲು ತೂರಾಟ ನಡೆಸಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಮೆರವಣಿಗೆ ನಡೆಸಲು ತಯಾರಿ ಮಾಡಲಾಗಿತ್ತು ಅಭ್ಯರ್ಥಿ ಬರುವಾಗ ಕಲ್ಲು ತೂರಾಟ ನಡೆದಿದೆ ಇದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಧ್ವಜ ಹಿಡಿದು ಅರ್‍ಎಲ್‍ಡಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದು,ೀ ವೇಳೆ ಎರಡು ಕಡೆ ವಾಗ್ವಾದಕ್ಕೆ ಕಾರಣವಾಯಿತು.
ಸ್ಥಳಕ್ಕೆ ಧಾವಿಸಿದ ಪೊಲೀಸರು ವಿಷಯ ಹತೋಟಿಗೆ ತಂದಿದ್ದಾರೆ.ಪೊಲೀಸರು ನಡೆಸಿದ ಛಾಯಾಗ್ರಹಣದ ಆಧಾರದ ಮೇಲೆ ದುಷ್ಕರ್ಮಿಗಳನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಕಾರಿಗಳು ತಿಳಿಸಿದ್ದಾರೆ
