ಪದಚ್ಯುತ ಮ್ಯಾನ್ಮಾರ್ ನಾಯಕಿ ಸೂಕಿ ಕುರಿತ ತೀರ್ಪು ಮುಂದೂಡಿಕೆ

ಬ್ಯಾಂಕಾಕ್,ನ.30- ಮ್ಯಾನ್ಮಾರ್ ನ್ಯಾಯಾಲಯವು ಪದಚ್ಯುತ ನಾಯಕಿ ಆಂಗ್‍ಸಾನ್ ಸೂಕಿ ಅವರ ವಿಚಾರಣೆಯಲ್ಲಿ ಹೆಚ್ಚುವರಿ ಸಾಕ್ಷಿಗಳ ಹೇಳಿಕೆಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ತೀರ್ಪನ್ನು ಮುಂದೂಡಿದೆ.

ನ್ಯಾಯಾಲಯವು ಓರ್ವ ವೈದ್ಯರು ತನ್ನ ಹೇಳಿಕೆಯನ್ನು ಸೇರ್ಪಡೆಗೊಳಿಸಲು ನ್ಯಾಯಾಲಯಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಸ್ವಯಂ ರಕ್ಷಣಾ ಪ್ರಕ್ರಿಯೆಗೆ ಅನುಮತಿ ನೀಡಿತು ಎಂದು ನ್ಯಾಯಾಂಗ ಅಧಿಕಾರಿಯೊಬ್ಬರು ತಿಳಿಸಿದರು.

ಫೆಬ್ರವರಿ 1ರಂದು ಸೇನೆಯಿಂದ ಪದಚ್ಯುತರಾಗಿ, ಬಂಧನಕ್ಕೊಳಗಾಗಿ ತಮ್ಮ ನ್ಯಾಷನಲ್ ಲೀಗ್ ಆಫ್ ಡೆಮಾಕ್ರಸಿ ಎರಡನೆ ಬಾರಿ ಅಧಿಕಾರಕ್ಕೆ ಬರುವುದರಿಂದ ವಂಚಿತರಾದ ಬಳಿಕ 76 ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕøತೆ ಸೂಕಿ ಅವರ ಪಾಲಿಗೆ ಇದು ಪ್ರಥಮ ತೀರ್ಪಾಗಿದೆ.

ಸೂಕಿ ಅವರು ಭ್ರಷ್ಟಾಚಾರ ಆರೋಪ ಸೇರಿದಂತೆ ಇತರ ಸರಣಿ ಆರೋಪಗಳ ನಿಟ್ಟಿನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಸಾಬೀತಾದಲ್ಲಿ ಅವರಿಗೆ ಹತ್ತಾರು ವರ್ಷಗಳ ಕಾಲ ಸೆರೆವಾಸದ ಶಿಕ್ಷೆ ವಿಧಿಸಲು ಅವಕಾಶವಿದೆ.

ನ್ಯಾಯಾಲಯವು ಪ್ರಚೋದನೆ ಹಾಗೂ ಕೊರೊನಾ ವೈರಸ್ ನಿರ್ಬಂಧಗಳ ಉಲ್ಲಂಘನೆ ಆರೋಪಗಳ ಪ್ರಕರಣಗಳಲ್ಲಿ ಮಂಗಳವಾರ ತೀರ್ಪು ನೀಡಬೇಕಾಗಿತ್ತು.