ಸಿಡ್ನಿ, ಮಾ. 10- ದೀರ್ಘ ಕಾಲದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್‍ರ ತಾಯಿ ಇಂದು ಬೆಳಗ್ಗೆ ವಿವಶರಾಗಿದ್ದಾರೆ. ತಮ್ಮ ನೆಚ್ಚಿನ ನಾಯಕ ಪ್ಯಾಟ್ ಕಮಿನ್ಸ್‍ರ ತಾಯಿ ಮರಿಯಾ ಮೃತರಾದ ಹಿನ್ನೆಲೆಯಲ್ಲಿ ಗೌರವ ಸಲ್ಲಿಸುವ ಭಾರತ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಆಟಗಾರರು ತಮ್ಮ ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿ ಆಡುವ ಮೂಲಕ ಗೌರವ ಸೂಚಿಸಿದ್ದಾರೆ.
2005 ರಿಂದಲೂ ಮರಿಯಾ ಅವರು ಸ್ತನ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಅಂದಿನಿಂದಲೂ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮರಿಯಾ ಅವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕಳೆದ ರಾತ್ರಿ ಚಿಕಿತ್ಸೆ ಫಲಿಸದೆ ಇಹಲೋಕ ಯಾತ್ರೆಯನ್ನು ಮುಗಿಸಿದ್ದಾರೆ.
ಮರಿಯಾ ಅವರ ಸಾವಿನಿಂದ ನಮಗೆ ತುಂಬಾ ನೋವು ಉಂಟಾಗಿದ್ದು, ಪ್ಯಾಟ್ ಕಮ್ಮಿನ್À್ಸಗೆ ದುಃಖ ಭರಿಸುವ ಶಕ್ತಿ ಸಿಗಲಿ' ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಟ್ವೀಟ್ ಮಾಡಿ ಸಂತಾಪ ಸೂಚಿಸಿದೆ.
ಕಮ್ಮಿನ್ಸ್ ಅವರ ತಾಯಿ ಸಾವನ್ನಪ್ಪಿದ್ದು ಅವರ ಅಗಲಿಕೆಯಿಂದ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರು ಕೂಡ ದುಃಖದಲ್ಲಿದ್ದು,
ಮರಿಯಾಗೆ ಗೌರವ ಸಲ್ಲಿಸುವ ಅಂಗವಾಗಿ ಇಂದಿನ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿ ಆಡಲಿದ್ದಾರೆ’ ಎಂದು ತಿಳಿಸಿದೆ.
ಬಿಸಿಸಿಐ ಕೂಡ ಟ್ವೀಟ್ ಮಾಡಿದ್ದು, `ತಾಯಿಯ ಅಗಲಿಕೆಯಿಂದ ದುಃಖ ದಲ್ಲಿರುವ ಪ್ಯಾಟ್ ಕಮ್ಮಿನ್ಸ್‍ಗೆ ಸಾಂತ್ವನ ಹೇಳುವುದರ ಜೊತೆಗೆ ಅವರ ಕುಟುಂಬಕ್ಕೆ ಕಷ್ಟದ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ಸಿಗಲಿ’ ಎಂದು ಪ್ರಾರ್ಥಿಸುತ್ತೇವೆ’ ಎಂದು ಬರೆದಿದ್ದಾರೆ.
ತಾಯಿಯ ಅನಾರೋಗ್ಯದ ನಿಮಿತ್ತ ಪ್ಯಾಟ್ ಕಮ್ಮಿನ್ಸ್ ಆಸ್ಟ್ರೇಲಿಯಾ ತಂಡವನ್ನು ತೊರೆದಿದ್ದು, ಸ್ಟೀವನ್ ಸ್ಮಿತ್ ನಾಯಕತ್ವ ವಹಿಸಿಕೊಂಡಿದ್ದಾರೆ.
Australia, captain, Pat Cummins, mother, passes away,