ನವದೆಹಲಿ,ನ.26- ಕಳೆದ 2018ರಲ್ಲಿ ನಾಯಿ ಬೊಗಳಿದ ವಿಚಾರಕ್ಕೆ ಆಸ್ಟ್ರೇಲಿಯಾದಲ್ಲಿ ಮಹಿಳೆಯೊಬ್ಬರನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೊಳಗಾಗಿರುವ ವ್ಯಕ್ತಿಯನ್ನು ರಾಜ್ವಿಂದರ್ ಸಿಂಗ್(38) ಎಂದು ಗುರುತಿಸಲಾಗಿದೆ.
2018 ರಲ್ಲಿ ಕ್ವೀನ್ಸ್‍ಲ್ಯಾಂಡ್‍ನ ರಾಜ್ವಿಂದರ್‍ಸಿಂಗ್ ನಾಯಿ ಬೊಗಳಿದ ವಿಚಾರದಲ್ಲಿ 24 ವರ್ಷದ ತೋಯಾ ಕಾರ್ಡಿಂಗ್ಲೆ ಎಂಬ ಮಹಿಳಯನ್ನು ಹತ್ಯೆ ಮಾಡಿ ಅಲ್ಲಿಂದ ಭಾರತಕ್ಕೆ ವಾಪಸ್ಸಾಗಿ ತಲೆಮರೆಸಿಕೊಂಡಿದ್ದ.
ಆರೋಪಿ ಬಂಧನಕ್ಕೆ ಆಸ್ಟ್ರೇಲಿಯಾ ಪೊಲೀಸರು ಒಂದು ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಬಹುಮಾನ ಘೋಷಿಸಿದ್ದರು.
ರಾಜವಿಂದರ್ ಸಿಂಗ್ ತನ್ನ ಪತ್ನಿಯೊಂದಿಗೆ ಜಗಳವಾಡಿದ ನಂತರ ಕ್ವೀನ್ಸ್‍ಲ್ಯಾಂಡ್‍ನ ವಾಂಗೆಟ್ಟಿ ಬೀಚ್‍ಗೆ ಹೋಗಿದ್ದ ಆ ಸಂದರ್ಭದಲ್ಲಿ ಕಾರ್ಡಿಂಗ್ಲೆ ಬೀಚ್‍ನಲ್ಲಿ ಸಾಕು ನಾಯಿಯೊಂದಿಗೆ ತೆರಳುತ್ತಿದ್ದರು. ಸಿಂಗ್‍ನನ್ನು ಕಂಡ ನಾಯಿ ಬೊಗಳತೊಡಗಿತು. ಈ ವಿಚಾರದಲ್ಲಿ ಆಕೆಯೊಂದಿಗೆ ಜಗಳ ತೆಗೆದು ಆಕೆಯನ್ನು ಹತ್ಯೆ ಮಾಡಿದ್ದ.
ವೋಟರ್ ಡೇಟಾ ಅಕ್ರಮ ನಡೆದಿಲ್ಲ ಎಂದಾದರೆ IAS ಅಧಿಕಾರಿಗಳ ಅಮಾನತಾಗಿದ್ದೇಕೆ..?
ಬಳಿಕ ಮೃತದೇಹವನ್ನು ಮರಳಿನಲ್ಲಿ ಹೂತು ಹಾಕಿ ಆಕೆಯ ಸಾಕು ನಾಯಿಯನ್ನು ಮರವೊಂದಕ್ಕೆ ಕಟ್ಟಿ ಹಾಕಿ. ಎರಡು ದಿನಗಳ ನಂತರ ತನ್ನ ಕೆಲಸ, ಪತ್ನಿ ಹಾಗೂ ಮೂವರು ಮಕ್ಕಳನ್ನು ಆಸ್ಟ್ರೇಲಿಯಾದಲ್ಲೇ ಬಿಟ್ಟು ಭಾರತಕ್ಕೆ ಬಂದು ತಲೆಮರೆಸಿಕೊಂಡಿದ್ದ.
ರಾಜ್ವಿಂದರ್ ವಿರುದ್ಧ ಇಂಟರ್‍ಪೆಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ್ದು, ಹಸ್ತಾಂತರ ಕಾಯ್ದೆಯಡಿ ನವೆಂಬರ್ 21 ರಂದು ಪಟಿಯಾಲ ಹೌಸ್ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
ಪ್ರತಿ ವರ್ಷ ನಾನು ಭಾರತಕ್ಕೆ ಹೋಗಲು ಬಯಸುತ್ತೇನೆ : ಅನುಷ್ಕಾ ಸುನಕ್
ಭಾರತದಲ್ಲಿ ಇಂಟರ್‍ಪೋಲ್‍ನ ನೋಡಲ್ ಏಜೆನ್ಸಿಯಾಗಿರುವ ಸಿಬಿಐನವರು ಆಸ್ಟ್ರೇಲಿಯಾ ಪೊಲೀಸರು ನೀಡಿದ ಮಾಹಿತಿಯನ್ನಾಧರಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
Australia, woman, murder, Indian, arrested,