ಮಾ.8ಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಭಾರತ ಭೇಟಿ

Social Share

ನವದೆಹಲಿ, ಮಾ 4 -ವ್ಯಾಪಾರ, ಹೂಡಿಕೆ ಮತ್ತು ನಿರ್ಣಾಯಕ ಖನಿಜಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧ ವೃದ್ದಿಸುವ ಉದ್ದೇಶದಿಂದ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಇದೇ ಮಾರ್ಚ್ 8 ರಿಂದ ಭಾರತಕ್ಕೆ ನಾಲ್ಕು ದಿನಗಳ ಭೇಟಿ ನೀಡಲಿದ್ದಾರೆ.

ಕಳೆದ ವರ್ಷ ಮೇ ತಿಂಗಳಲ್ಲಿ ಪ್ರಧಾನಿ ಸ್ಥಾನ ಅಲಂಕರಿಸಿದ ನಂತರ ಇದು ಅವರ ಮೊದಲ ಭಾರತ ಭೇಟಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅಲ್ಬನೀಸ್ ಅವರ ನೇತೃತ್ವದಸಚಿವರು, ಅಧಿಕಾರಿಗಳ ನಿಯೋಗ ಮಾರ್ಚ್ 8 ರಿಂದ 11 ರವರೆಗೆ ಭಾರತ ಭೇಟಿ ನಡುವೆ ಹಲವು ರಾಜ್ಯಗಳಿಗೂ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಹೋಳಿ ದಿನದಂದು (ಮಾರ್ಚ್ 8) ಅಲ್ಬನೀಸ್ ಅಹಮದಾಬಾದ್‍ಗೆ ಆಗಮಿಸಲಿದ್ದಾರೆ ಮಾರ್ಚ್ 9 ರಂದು ಮುಂಬೈಗೆ ಭೇಟಿ ನೀಡಲಿದ್ದು, ನಂತರ ದೆಹಲಿಗೆ ಆಗಮಿಸಲಿದ್ದಾರೆ. ಮಾರ್ಚ್ 10 ರಂದು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಆಸ್ಟ್ರೇಲಿಯಾದ ಪ್ರಧಾನಿಗೆ ವಿಧ್ಯುಕ್ತ ಸ್ವಾಗತವನ್ನು ನೀಡಲಾಗುವುದು.

ಕ್ರೆಡಿಟ್ ಕಾರ್ಡ್ ವಂಚನೆಗೆ ಧೋನಿ, ಅಭಿಷೇಕ್ ಬಚ್ಚನ್ ಪ್ಯಾನ್ ಬಳಸುತ್ತಿದ್ದ ಐವರ ಬಂಧನ

ಇದರ ನಂತರ, ಪರಸ್ಪರ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಜೊತೆಗೆ ಭಾರತ-ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಅಡಿಯಲ್ಲಿ ಸಹಕಾರದ ಕ್ಷೇತ್ರಗಳನ್ನು ಚರ್ಚಿಸಲು ಮೋದಿ ಮತ್ತು ಅಲ್ಬನೀಸ್ ವಾರ್ಷಿಕ ಶೃಂಗಸಭೆಯನ್ನು ನಡೆಸಲಿದ್ದಾರೆ.

ಬಗೆದಷ್ಟೂ ಹೊರ ಬರುತ್ತಿದೆ ಪ್ರಶಾಂತ್ `ಲಂಚ’ ಪುರಾಣ

ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧಗಳು ಏರುಗತಿಯಲ್ಲಿವೆ. ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಜೂನ್ 2020 ರಲ್ಲಿ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲಾಗಿದೆ. ಮತ್ತಷ್ಟು ವೇಗವನ್ನು ಒದಗಿಸುವ ನಿರೀಕ್ಷೆಯಿದೆ ಎಂದು ಅಸಿಸ್ ಅಧಿಕಾರಿಗಳು ತಿಳಿಸಿದ್ದಾರೆ.

Australian, PM, Anthony Albanese, Visit, India, March 8-11,

Articles You Might Like

Share This Article