ಆರೋಪಿ ಬಂಧನ ಆಟೋ-ಬೈಕ್‍ಗಳ ಜಪ್ತಿ

Social Share

ಬೆಂಗಳೂರು,ಅ.27- ತ್ರಿಚಕ್ರ ಹಾಗೂ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್‍ನ್ನು ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿ 2.55 ಲಕ್ಷ ರೂ. ಬೆಲೆಯ ವಿವಿಧ ಮಾದರಿಯ ಮೂರು ದ್ವಿಚಕ್ರವಾಹನ ಹಾಗೂ ಪ್ಯಾಸೆಂಜರ್ ಆಟೋ ವಶಪಡಿಸಿಕೊಂಡಿದ್ದಾರೆ.

ಮಾಗಡಿ ರಸ್ತೆ, ಕೆ.ಪಿ.ಅಗ್ರಹಾರದ ಅರುಣ್‍ಕುಮಾರ್ (26) ಬಂಧಿತ ಆರೋಪಿ. ಈತ ತುಮಕೂರು ನ್ಯೂ ಎಕ್ಸ್‍ಟೆನ್ಸನ್ ಪೊಲೀಸ್ ಠಾಣೆ, ಯಲಹಂಕ ಹಾಗೂ ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಗಳಲ್ಲಿ ದ್ವಿಚಕ್ರವಾಹನಗಳು ಹಾಗೂ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಪ್ಯಾಸೆಂಜರ್ ಆಟೋ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ಪತಿಯನ್ನೇ ಕೊಲೆ ಮಾಡಿಸಿದ್ದ ಪತ್ನಿ-ಪ್ರಿಯಕರನ ಸೆರೆ

ಆರೋಪಿ ಮಾಹಿತಿ ಮೇರೆಗೆ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ 2.55 ಲಕ್ಷ ರೂ ಮೌಲ್ಯದ ವಿವಿಧ ಮಾದರಿಯ 3 ದ್ವಿಚಕ್ರ ವಾಹನ ಹಾಗೂ ಪ್ಯಾಸೆಂಜರ್ ಆಟೋ ವಶಪಡಿಸಿಕೊಳ್ಳಲಾಗಿದೆ.

Articles You Might Like

Share This Article