ಮಳವಳ್ಳಿ.ಜು.14- ತಾಲ್ಲೂಕಿನ ಹೊರವಲಯ ಕಣಗಲ್ ಬಳಿ ಚಾಮರಾಜನಗರ-ಮಳವಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಆಟೋ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ತಾಲ್ಲೂಕಿನ ಮಾರೇಹಳ್ಳಿ ಗ್ರಾಮದ ಕಣಿಗಲ್ ಬಳಿಯ ರಾತ್ರಿ ಸಮಾರು 12.20ರಲ್ಲಿ ಈ ದುರಂತ ಘಟನೆ ನಡೆದಿದೆ
ಮದ್ದೂರು ತಾಲ್ಲೂಕಿನ ಹುಲಿಗೆರೆಪುರ ಗ್ರಾಮದ ನಿವಾಸಿ ಶ್ರೀನಿವಾಸ್(42) ಹಾಗೂ ಮಳವಳ್ಳಿ ತಾಲ್ಲೂಕಿನ ಕಣಿಕಹಳ್ಳಿ ಗ್ರಾಮದ ನಿವಾಸಿಗಳಾದ ರವಿಕುಮಾರ್(40) ಭಾಸ್ಕರ್(45) ಸಾವುನ್ನಪಿದ್ದ ದುರ್ದೈವಿಗಳಾಗಿದ್ದಾರೆ.
ರವಿಕುಮಾರ್ ಮತ್ತು ಭಾಸ್ಕರ್ ಇಬ್ಬರ ಕೆಲಸ ಮುಗಿಸಿಕೊಂಡು ರಾತ್ರಿ ಗ್ರಾಮಕ್ಕೆ ತೆರಳಲು ಬಸ್ಸ್ ಇಲ್ಲದ ಕಾರಣ ಮದ್ದೂರು ನಿಂದ ಹುಲಿಗೆರೆಪುರ ಗ್ರಾಮದ ನಿವಾಸಿ ಶ್ರೀನಿವಾಸ್ ಎಂಬವರು ಆಟೋ ಮಾಡಿಕೊಂಡ ಗ್ರಾಮಕ್ಕೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಇಂಡಿಕಾ ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಸ್ಥಳದಲ್ಲಿ ಸಾವನಪ್ಪಿದ್ದಾರೆ.
ಇಂಡಿಕಾ ಕಾರನಲ್ಲಿ ಇದು ಐದು ಜನರಲ್ಲಿ ಭೀಮನಹಳ್ಳಿ ಗ್ರಾಮದ ಅನುಕುಮಾರ್ ಹಾಗೂ ಬಫ್ಲ್ನ ಮಧುಕಿರ್ತಿನ್ ಈಇಬ್ಬರಿಗೆ ತೀವ್ರವಾಗಿ ಗಾಯಗೊಂಡಿದ್ದು, ಮಂಡ್ಯ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ವಿಷಯ ತಿಳಿದ ಕೊಡಲೇ ಗ್ರಾಮಾಂತರ ಠಾಣೆಯ ಸಿಪಿಐ ರಾಜೇಶ್ ಸ್ಥಳಕ್ಕೆ ಬೇಟೆನೀಡಿ ಮೃತ ದೇಹಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸ್ಥಳಾಂತರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ,