ಆಟೋದಲ್ಲಿ ಬಿಟ್ಟು ಹೋಗಿದ್ದ ಚಿನ್ನವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

Social Share

ಬೆಂಗಳೂರು, ನ.30- ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ 250 ಗ್ರಾಂ ತೂಕದ ಚಿನ್ನಾಭರಣವನ್ನು ಗೋವಿಂದ ರಾಜನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ ವಾಸುದಾರರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರ ಕಾರ್ಯ ಹಾಗೂ ಆಟೋ ಚಾಲಕನ ಪ್ರಮಾಣಿಕತೆಗೆ ದಂಪತಿ ಧನ್ಯವಾದ ತಿಳಿಸಿದ್ದಾರೆ.

ಹೌಸಿಂಗ್ ಬೋರ್ಡ್ ನಿವಾಸಿ ಮಂಜುನಾಥ್ ಕುಟುಂಬ ಸಂಬಂಧಿಕರ ಮದುವೆಗಾಗಿ ತಮಿಳುನಾಡಿಗೆ ಹೋಗಿದ್ದರು. ವಾಪಸ್ ಮೊನ್ನೆ ರಾತ್ರಿ ಬೆಂಗಳೂರಿಗೆ ಬಂದಿದ್ದು, ಆಟೋದಲ್ಲಿ ಮನೆ ಬಳಿ ಬಂದ ಸಂದರ್ಭದಲ್ಲಿ 250 ಗ್ರಾಂ ಚಿನ್ನಾಭರಣವಿದ್ದ ಬ್ಯಾಗನ್ನು ಮರೆತು ಆಟೋದಲ್ಲೇ ಬಿಟ್ಟು ಇಳಿದಿದ್ದಾರೆ.

ತಕ್ಷಣ ಆಭರಣವಿದ್ದ ಬ್ಯಾಗು ಆಟೋದಲ್ಲೇ ಬಿಟ್ಟಿರುವುದನ್ನು ಅರಿತು ಪೊಲೀಸರಿಗೆ ತಿಳಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ನಿನ್ನೆ ಬೆಳಗ್ಗೆ ಸುಮಾರು 15ಕ್ಕೂ ಹೆಚ್ಚು ಸಿಸಿ ಟಿವಿಗಳನ್ನು ಪರಿಶೀಲಿಸಿದಾಗ ಆಟೋ ನಂಬರ್ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ.

40 ಲಕ್ಷ ಮೌಲ್ಯದ ನಿಷೇಧಿತ ಇ-ಸಿಗರೇಟ್ ಜಪ್ತಿ

ಆದರೆ ಆಟೋ ಮೇಲಿದ್ದ ಸಾಯಿ ಬಾಬಾ ಪೋಟೋ ಗಮನಿಸಿ ಕಾರ್ಯಾಚರಣೆ ಮುಂದುವರೆಸಿ ಆ ಆಟೋವನ್ನು ಗಾಂಧಿ ನಗರದ ಮೂವಿಲ್ಯಾಂಡ್ ಚಿತ್ರಮಂದಿರದ ಬಳಿ ಪತ್ತೆ ಹಚ್ಚಿದ್ದಾರೆ.

ಆಟೋ ಚಾಲಕ ಹರೀಶ್ ಎಂಬಾತನನ್ನು ಚಿನ್ನಾಭರಣವಿದ್ದ ಬ್ಯಾಗ್ ಬಗ್ಗೆ ವಿಚಾರಿಸಿದಾಗ ಆ ಬ್ಯಾಗ ನನ್ನ ಬಳಿಯೇ ಇದೆ. ನಾನು ಅದನ್ನು ವಾಪಸ್ ಮಾಡಲು ಮಾಲಿಕರಿಗಾಗಿ ಹುಡುಕುತ್ತಿದ್ದೆ ಎಂದು ತಿಳಿಸಿ ಪೊಲೀಸರಿಗೆ ಆಭರಣವಿದ್ದ ಬ್ಯಾಗ್‍ನ್ನು ಒಪ್ಪಿಸಿದ್ದಾನೆ.

ಹಿಂದೂ ಧರ್ಮ ನಾಶಕ್ಕೆ ಲವ್‍ಜಿಹಾದ್ ನಡೆಯುತ್ತಿದೆ : ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಪೊಲೀಸರು ಆಭರಣ ಕಳೆದುಕೊಂಡಿದ್ದ ಮಾಲಿಕರಿಗೆ ಬ್ಯಾಗ್ ಪತ್ತೆಯಾಗಿದೆ ಎಂದು ತಿಳಿಸಿ ಠಾಣೆಗೆ ಕರೆಸಿಕೊಂಡು ಬ್ಯಾಗ್‍ನ್ನು ಹಿಂದಿರುಗಿಸಿದ್ದಾರೆ. ಪೊಲೀಸರ ಕಾರ್ಯ ವೈಖರಿ ಹಾಗೂ ಆಟೋ ಚಾಲಕನ ಪ್ರಾಮಾಣಿಕತೆಯನ್ನು ದಂಪತಿ ಶ್ಲಾಘಿಸಿದ್ದಾರೆ.

ಕೊಲಿಜಿಯಂನ 19 ಹೆಸರುಗಳು ತಿರಸ್ಕಾರ : ಕೇಂದ್ರ – ನ್ಯಾಯಾಂಗ ಸಂಘರ್ಷ..?

auto, driver, returns, gold, jewellery, passenger,

Articles You Might Like

Share This Article