ಪ್ರಯಾಣಿಕನ ಮೊಬೈಲ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

Social Share

ಬೆಂಗಳೂರು, ಫೆ.25- ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟುಹೋಗಿದ್ದ ಮೊಬೈಲ್ ಹಿಂದಿರುಗಿಸುವ ಮೂಲಕ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಎಂಎಸ್ ಪಾಳ್ಯದ ಆಟೋ ಚಾಲಕರಾದ ಸಲಾರ್ ಖಾನ್ ಅವರ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಮೊಬೈಲ್ ಮರೆತು ಬಿಟ್ಟುಹೋಗಿದ್ದರು.
ಸಲಾರ್ ಖಾನ್ ಅವರು ಆ ಮೊಬೈಲ್‍ಅನ್ನು ಸಿಟಿ ಮಾರ್ಕೆಟ್ ಠಾಣೆಗೆ ಬಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆ ಮೊಬೈಲ್‍ನ ವಾರಸುದಾರರನ್ನು ಠಾಣೆಗೆ ಕರೆಸಿ ವಾರಸುದಾರರಿಗೆ ಮೊಬೈಲ್ ಹಸ್ತಾಂತರಿಸಿದ್ದಾರೆ. ಆಟೋ ಚಾಲಕರಾದ ಸಲಾರ್ ಖಾನ್ ಅವರ ಪ್ರಾಮಾಣಿಕತೆಯನ್ನು ಡಿಸಿಪಿ ಸಂಜೀವ್ ಎಂ.ಪಾಟೀಲ್ ಪ್ರಶಂಸಿಸಿದ್ದಾರೆ.

Articles You Might Like

Share This Article