ದುಶ್ಚಟಗಳಿಗೆ ಆಟೋ ಕಳ್ಳತನ, ಆರೋಪಿ ಬಂಧನ

Social Share

ಬೆಂಗಳೂರು, ಆ.6- ದುಶ್ಚಟಗಳಿಗೆ, ದೈನಂದಿನ ಖರ್ಚುವೆಚ್ಚಕ್ಕಾಗಿ ಆಟೋ ರಿಕ್ಷಾವನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ ಎರಡು ಲಕ್ಷ ಮೌಲ್ಯದ ಎರಡು ಆಟೋ ರಿಕ್ಷಾಗಳನ್ನು ವಶಪಡಿಸಿಕೊಂಡಿದ್ದಾರೆ.

ಜು.29 ರಂದು ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಶಂಕರನಗರದ ಬಿಬಿಎಂಪಿ ಆಸ್ಪತ್ರೆ ಮುಂಭಾಗ ತಮ್ಮ ಬಜಾಜ್ ಆಟೋರಿಕ್ಷಾ ವಾಹನವನ್ನು ನಿಲ್ಲಿಸಿ, ಚಾಲಕ ಹೋಗಿದ್ದು, ಕೆಲ ಸಮಯದ ನಂತರ ಬಂದು ನೋಡಲಾಗಿ, ಆಟೋ ರಿಕ್ಷಾ ಇರಲಿಲ್ಲ.
ಈ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ನಂದಿನಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದರು.

ನಂದಿನಿಲೇಔಟ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯವರು ಹಗಲಿನ ವೇಳೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ವ್ಯಕ್ತಿಯೊಬ್ಬ ವಿಧಾನಸೌಧಲೇಔಟ್ ಸರ್ಕಲ್ ಬಳಿ ಆಟೋ ರಿಕ್ಷಾವನ್ನು ನಿಲ್ಲಿಸಿಕೊಂಡಿದ್ದು, ಈ ಬಗ್ಗೆ ವಿಚಾರಿಸಿ ಪರಿಶೀಲನೆ ಮಾಡಿದಾಗ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವಾಗಿರುವ ತ್ರಿಚಕ್ರವಾಹನವೆಂದು ತಿಳಿದು ಬಂದಿರುತ್ತದೆ.

ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಆರೋಪಿಯು ನೀಡಿದ ಮಾಹಿತಿ ಮೇರೆಗೆ ಸುಮಾರು 2 ಲಕ್ಷ ರೂ. ಬೆಲೆ ಬಾಳುವ 2 ಬಜಾಜ್ ಕಂಪನಿ ಆಟೋ ರಿಕ್ಷಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಟೆಂಟ್ ಹೌಸ್‍ನಲ್ಲಿ ಕೆಲಸ ಮಾಡಿಕೊಂಡಿರತ್ತಾನೆ. ಈತನು ದುಶ್ಚಟಗಳನ್ನು ಹೊಂದಿದ್ದು, ಅದರ ದೈನಂದಿನ ಖರ್ಚುವೆಚ್ಚದ ಹಣಕ್ಕಾಗಿ ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ.

ಆರೋಪಿಯ ಬಂಧನದಿಂದ ನಂದಿನಿಲೇಔಟ್ ಪೊಲೀಸ್ ಠಾಣೆಯ 2-ತ್ರಿಚಕ್ರ ವಾಹನ ಕಳವು ಪ್ರಕರಣ ಪತ್ತೆಯಾಗಿರುತ್ತದೆ.
ಈ ಪ್ರಕರಣದಲ್ಲಿ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ, ಪ್ರವೀಣ್ ಎಂ. ಮಾರ್ಗದರ್ಶನದಲ್ಲಿ, ಪೊಲೀಸ್ ಇನ್ಸ್‍ಪೆಕ್ಟರ್ ವೆಂಕಟೇಗೌಡ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article