ಅಮೆರಿಕ ಡ್ರೋನ್ ದಾಳಿಯಲ್ಲಿ ಅಲ್-ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ ಉಡೀಸ್..!

Social Share

ವಾಷಿಂಗ್ಟನ್, ಆ.2 -ಅಮೆರಿಕ ಸಿಐಎ ಡ್ರೋನ್ ಮೂಲಕ ಅಫ್ಘಾನಿಸ್ತಾನದಲ್ಲಿ ನಡೆಸಿದ ದಾಳಿಯಲ್ಲಿ ಅಲ್-ಖೈದಾ ನಾಯಕ ಉಗ್ರಗಾಮಿ ಅಯ್ಮಾನ್ ಅಲ್-ಜವಾಹ್ರಿ ಹತನಾಗಿದ್ದಾನೆ. ಕಳೆದ ಭಾನುವಾರವೇ ಜಗತ್ತಿಗೆ ತಿಳಿಯದಂತೆ ರಹಸ್ಯ ಕಾರ್ಯಾಚರಣೆ ನಡೆಸಿ ಜವಾಹ್ರಿನನ್ನು ಕೊಲ್ಲಲಾಗಿದೆ. ಆದರೆ ಇದನ್ನು ರಹಸ್ಯವಾಗಿಡಲಾಗಿತ್ತು. ಕೆಲ ಮಾಜಿ ಅಧಿಕಾರಿಗಳ ಬಾಯಲ್ಲಿ ಮಾತ್ರ ಈ ವಿಷಯ ಹರಿದಾಡಿತ್ತು.

ಆದರೆ ಪೆಂಟಗನ್ ಅಥವಾ ಗುಪ್ತಚರ ಇಲಾಖೆ ಸಿಐಎ ದೃಢೀಕರಿಸಲು ವಿಳಂಬವಾಯಿತು. ಶ್ವೇತಭವನದ ಅಧಿಕಾರಿಗಳು ಅಲ್-ಜವಾಹ್ರಿ ಕೊಲ್ಲಲ್ಪಟ್ಟರು ಎಂದು ಖಚಿತಪಡಿಸಲು ನಿರಾಕರಿಸಿದರು. ಆದರೆ ತಡರಾತ್ರಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿತ್ತು. ಯಾವುದೇ ನಾಗರಿಕ ಸಾವು-ನೋವುಗಳು ಸಂಭವಿಸಿಲ್ಲ ಎಂದು ತಿಳಿಸಲಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಕಾರ್ಯಾಚರಣೆಯ ಹೆಚ್ಚಿನ ವಿವರಗಳನ್ನು ನೀಡುವ ನಿರೀಕ್ಷೆಯಿದೆ. ಬಿಡೆನ್ ಅವರು ವೈಟ್ ಹೌಸ್‍ನಲ್ಲಿ ಪ್ರತ್ಯೇಕವಾಗಿರುವುದರಿಂದ ಬ್ಲೂ ರೂಮ್ ನಿಂದ ಬಾಲ್ಕನಿಯಲ್ಲಿ ಮಾತನಾಡಲು ಯೋಜಿಸಿದ್ದಾರೆ.

ಕಳೆದ 20/11ದಾಳಿಯ ಸೂತ್ರಧಾರರಲ್ಲಿ ಈತನು ಇದ್ದ ಅಂದು ಪ್ರಾಣಬಿಟ್ಟ ಆಮಾಯಕ ಜನರ ಅತ್ಮಕ್ಕೆ ಶಂತಿ ಸಿಕ್ಕಿದೆ ಎಂದು ಬಿಡನ್ ಹೇಳಿದ್ದಾರೆ. ಕಳೆದ ಆಗಸ್ಟ್ 31, 2021ರಂದು ಅಮೆರಿಕ ಪಡೆಗಳು ಅಂತಿಮವಾಗಿ ಅಫ್ಘಾನಿಸ್ತಾನವನ್ನು ತೊರೆದ ನಂತರ, ಆ ದೇಶದಲ್ಲಿ ಅಥವಾ ಬೇರೆಡೆ ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಅಮೆರಿಕ ನಿಲ್ಲಿಸುವುದಿಲ್ಲ ಎಂದು ಬಿಡೆನ್ ಹೇಳಿದ್ದರು.

ನಾವು ಅಫ್ಘಾನಿಸ್ತಾನ ಮತ್ತು ಇತರ ದೇಶಗಳಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟ ನಿರ್ವಹಿಸುತ್ತೇವೆ ಎಂದು ಹೇಳಿದರು. ನಾವು ಅದನ್ನು ಮಾಡಲು ನೆಲದ ಮೇಲೆ ಯುದ್ಧವನ್ನು ಮಾಡಬೇಕಾಗಿಲ್ಲ ಎಂದು ಎಚ್ಚರಿಸಿದ್ದರು. 11 ತಿಂಗಳ ನಂತರ ಅಮೆರಿಕ ಇದನ್ನು ಮಾಡಿ ತೋರಿಸಿದೆ.

Articles You Might Like

Share This Article