ಅಯೋಧ್ಯೆ (ಯುಪಿ), ಆ-28 – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ ಎರಡು ವರ್ಷಗಳಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣದ ಶೇಕಡಾ 40 ಕ್ಕಿಂತ ಹೆಚ್ಚು ಪೂರ್ಣಗೊಂಡಿದೆ ಎಂದು ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಮ ಭಕ್ತರು ಡಿಸೆಂಬರ್ 2023 ರಿಂದ ದೇವರಿಗೆ ನಮನ ಸಲ್ಲಿಸಬಹುದು ಎಂದು ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ತಿಳಿಸಿದ್ದಾರೆ. ದೇವಾಲಯ ಕಟ್ಟಡ ನಿರ್ಮಾಣದ ಜೊತೆಗೆ ರಸ್ತೆ ಅಭಿವೃದ್ಧಿ ಮತ್ತಿತರ ಕಾರ್ಯಗಳನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದ್ದು, ಅದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.
ಈಗಾಗಲೇ ದೇವಾಲಯ ನಿರ್ಮಾಣ ಕಾಮಗಾರಿ ಶೇ.40 ರಷ್ಟು ಪೂರ್ಣಗೊಂಡಿದೆ. ಶೇ.80ಕ್ಕೂ ಹೆಚ್ಚು ಪ್ಲಿಂತ್ ಕೆಲಸ ನಡೆಸಲಾಗಿದೆ. ಒಟ್ಟಾರೆ ಡಿಸಂಬರ್ 2023ರ ವೇಳೆಗೆ ದೇವರ ದರ್ಶನಕ್ಕೆ ಅನುಮತಿ ನೀಡಲಾಗುವುದು ಎಂದು ರೈ ತಿಳಿಸಿದರು.
2024ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ 2023 ರ ವೇಳೆಗೆ ಶ್ರೀ ರಾಮಮಂದಿರ ನಿರ್ಮಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಕಾಮಗಾರಿಯ ನೇತೃತ್ವ ವಹಿಸಿರುವ ರೈ ಅವರು ಭರದಿಂದ ದೇವಾಲಯ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದಾರೆ.
ಮಂದಿರ ನಿರ್ಮಾಣಕ್ಕೆ ಬಳಸಲಾಗುತ್ತಿರುವ ಹಣದ ಬಗ್ಗೆ ಕೇಳಿದ ಪ್ರಶ್ನೇಗೆ ದೇವರ ಕಾರ್ಯ ನಿರ್ಮಾಣಕ್ಕೆ ಲಕ್ಷ್ಮೀಗೆನೂ ಕೊರತೆ ಇರಲ್ಲ. ದೇವರ ಇಚ್ಚೆಯಂತೆ ಎಲ್ಲಾ ಕಾರ್ಯವೂ ಸುಗಮವಾಗಿ ನಡೆಯುತ್ತಿದೆ ಎನ್ನುತ್ತಾರೆ ರೈ ಅವರು.