ನವದೆಹಲಿ,ಮಾ.6- ಭಾರತದ ಆರೋಗ್ಯ ಕ್ಷೇತ್ರ ವಿದೇಶಿ ಅವಲಂಬನೆಯನ್ನು ಹಂತ ಹಂತವಾಗಿ ತಗ್ಗಿಸಲಾಗುತ್ತಿದೆ. ಕೋವಿಡೋತ್ತರದಲ್ಲಿ ಆತ್ಮನಿರ್ಭರ ಭಾರತ ಸ್ವಾವಲಂಬನೆಯತ್ತ ಹೆಜ್ಜೆ ಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಜೆಟ್ ನಂತರದ ವೆಬಿನಾರ್ ಸರಣಿಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸಂಶೋಧನಾ ಕ್ಷೇತ್ರ ಕುರಿತು ಮಾತನಾಡಿದ ಅವರು, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಔಷಧಿಗಳು, ಲಸಿಕೆಗಳು ಮತ್ತು ಜೀವ ರಕ್ಷಕ ವೈದ್ಯಕೀಯ ಸಾಧನಗಳ ಮೂಲಕ ವೈದ್ಯಕೀಯ ಕ್ಷೇತ್ರವನ್ನು ಶಸ್ತ್ರಸಜ್ಜಿತಗೊಳಿಸಲಾಗಿದೆ. ಈ ಮೂಲಕ ತಮ್ಮ ಸರ್ಕಾರ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಲು ಸತತವಾಗಿ ಪ್ರಯತ್ನಿಸುತ್ತಿದೆ ಎಂದರು.
ಹಿಂದಿನ ಸರ್ಕಾರಗಳ ಸಮಗ್ರತೆ ಮತ್ತು ದೀರ್ಘಾವಯ ದೃಷ್ಟಿಕೋನದ ಕೊರತೆಯಿಂದ ಆರೋಗ್ಯ ಕ್ಷೇತ್ರ ಸೋರಗಿತ್ತು. ದೂರದೃಷ್ಟಿಯ ಕೊರತೆ ಆರೋಗ್ಯ ಸಚಿವಾಲಯಕ್ಕೆ ಮಾತ್ರ ಸೀಮಿತವಾಗಿಲ್ಲ, ಇದು ಇಡೀ ಸರ್ಕಾರವೇ ಜನಪರವಾದ ನಿಲುವುಗಳ ಕೊರತೆಯಿಂದ ಬಳಲಿದೆ ಎಂದು ಆರೋಪಿಸಿದರು.
12 ವರ್ಷದ ಬಾಲಕನನ್ನು ಅಪಹರಿಸಿ ಕೊಂದ 15 ವರ್ಷದ ಬಾಲಕನ ಗ್ಯಾಂಗ್
ಆರೋಗ್ಯ ರಕ್ಷಣೆಯ ಮೂಲಸೌಕರ್ಯವನ್ನು 2 ಶ್ರೇಣಿಯ ನಗರಗಳು ಮತ್ತು ಹಿಂದುಳಿದ ಪ್ರದೇಶಗಳಲ್ಲೂ ಸುಧಾರಿಸಲಾಗಿದೆ. ಜನರಿಗೆ ಅವರ ಮನೆ ಬಾಗಿಲಿಗೆ ಪರೀಕ್ಷಾ ಸೌಲಭ್ಯಗಳು ಸೇರಿದಂತೆ ಚಿಕಿತ್ಸೆ ತಲುಪಿಸಲು ತಮ್ಮ ಸರ್ಕಾರ ಗಮನ ಹರಿಸುತ್ತಿದೆ ಎಂದು ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ತಮ್ಮ ಸರ್ಕಾರವು ಕೈಗೊಂಡ ವಿವಿಧ ಕ್ರಮಗಳಿಂದ ನಮ್ಮ ಉದ್ಯಮಿಗಳು ವಿದೇಶದ ಯಾವುದೇ ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳಬೇಕಾಗಿಲ್ಲ, ಭಾರತ ಸಂಪೂರ್ಣ ಸ್ವಾವಲಂಬಿಯಾಗುವುದನ್ನು ಖಚಿತಪಡಿಸಿಕೊಳ್ಳಬಹುದು.
ನಮ್ಮ ಸರ್ಕಾರ ಕೈಗೆಟಕುವ ದರದಲ್ಲಿ ಚಿಕಿತ್ಸೆಯನ್ನು ನೀಡುವುದು ಪ್ರಮುಖ ಆದ್ಯತೆಯಾಗಿಸಿಕೊಂಡಿದೆ. ಸರ್ಕಾರದ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತ್ 80 ಸಾವಿರ ಕೋಟಿ ರೂಪಾಯಿ, ಅಗ್ಗದ ದರದಲ್ಲಿ ಔಷಗಳನ್ನು ಮಾರಾಟ ಮಾಡುವ ಜನ್ ಔಷಧಿ ಕೇಂದ್ರಗಳು 20 ಸಾವಿರ ಕೋಟಿ ರೂಪಾಯಿಗಳನ್ನು ನಾಗರಿಕರಿಗೆ ಉಳಿತಾಯ ಮಾಡಿವೆ. ಸಾಂಕ್ರಾಮಿಕ ಸಮಯದಲ್ಲಿ ದೇಶದ ಔಷಧಿ ಕ್ಷೇತ್ರ ಜಾಗತಿಕ ವಿಶ್ವಾಸ ಗಳಿಸಿದೆ.
ಇದೇ ನಂಬಿಕೆಯನ್ನು ಹೆಚ್ಚಿಸಲು ಮತ್ತು ಲಾಭ ಮಾಡಿಕೊಳ್ಳಲು ಆರೋಗ್ಯ ಕ್ಷೇತ್ರದಲ್ಲಿ ಇರುವವರು ಮುಂದಾಗಬೇಕು ಎಂದು ಹೇಳಿದರು.
ಭಾರತ ಸೇರಿ 6 ರಾಷ್ಟ್ರಗಳ ವೀಸಾ ಸರಳೀಕರಣಕ್ಕೆ ಮುಂದಾದ ರಷ್ಯಾ
ಆರೋಗ್ಯ ಕ್ಷೇತ್ರವನ್ನು ಕೋವಿಡ್ ಪೂರ್ವ ಮತ್ತು ಕೋವಿಡ್ ನಂತರದ ಎಂದು ವಿಭಜಿಸಿ ನೋಡಬೇಕಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ವ್ಯವಸ್ಥೆಗಳು ತೊಂದರೆಗೆ ಒಳಗಾಗದವು. ಆದರೆ ಭಾರತ ಎಲ್ಲವನ್ನು ಸದೃಢವಾಗಿ ಹೆದರಿಸಿದೆ. ಆರೋಗ್ಯ ರಕ್ಷಣೆಯತ್ತ ಗಮನಹರಿಸದೆ ನಾಗರಿಕರ ಒಟ್ಟಾರೆ ಯೋಗಕ್ಷೇಮಕ್ಕೆ ಒತ್ತು ನೀಡಿದಂತಾಗುತ್ತದೆ ಎಂಬ ಕಲ್ಪನೆಯೊಂದಗೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
Ayushman Bharat, Health, Wellness, centres, being, prepared, PM Modi,