#ಡಾ. ಡಿ.ಸಿ.ರಾಮಚಂದ್ರ
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯನವರು 20ನೇ ಶತಮಾನದ ಆದಿಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡಿದ ಮೇರು ಸಾಹಿತಿ. ಬಿ.ಎಂ.ಶ್ರೀಯವರು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಸಂಪಿಗೆ ಎಂಬ ಗ್ರಾಮದಲ್ಲಿ ಮೈಲಾರಯ್ಯ ಮತ್ತು ಭಾಗೀರಥಮ್ಮ ಅವರ ಸುಪುತ್ರರಾಗಿ 1884ನೇ ಜನವರಿ 3ರಂದು ಜನಿಸಿದರು. ಇದು ಇವರ ತಾಯಿಯ ತವರೂರು, ತಂದೆಯ ಊರು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರು.
ಸುಮಾರು 70 ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲಾ ಕಾರ್ಯವೂ ಇಂಗ್ಲೀಷ್‍ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ-ಮಾನಗಳಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡವನ್ನು ಅದಕ್ಕಿರುವ ಒಂದು ನ್ಯಾಯವಾದ ಸ್ಥಾನ ದೊರಕಿಸಿ ಕೊಡಲೇಬೇಕು ಎಂದು ಆಶಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು ಬಿ.ಎಂ.ಶ್ರೀಕಂಠಯ್ಯ.
ಇವರು ತಮ್ಮ ಬಾಲ್ಯದ ಶಿಕ್ಷಣ ಬೆಳ್ಳೂರಿನಲ್ಲಿ ಕಲಿತರು. ನಂತರದಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ ಪದವಿಯನ್ನು, ಮದರಾಸು ವಿಶ್ವವಿದ್ಯಾಲಯದಿಂದ ಬಿಎಲ್ ಪದವಿ ಪಡೆದು, 1909ರಲ್ಲಿ ಎಂಎ ಪದವಿ ಪಡೆದರು. ಅದೇ ವರ್ಷ ಮೈಸೂರು ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಸೇರಿಕೊಂಡರು.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ 25ವರ್ಷ ಸೇವೆ ಸಲ್ಲಿಸಿ, 1930ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ವರ್ಗವಾಗಿ 1942ರವರೆಗೆ ಕಾಲೇಜಿನ ಸರ್ವತೋಮುಖ ಬೆಳವಣಿಗೆಗಾಗಿ ಅವಿರತವಾಗಿ ಶ್ರಮಿಸಿದರು. 1944ರಲ್ಲಿ ಧಾರವಾಡದ ಕೆ.ಇ.ಬೋರ್ಡ್‍ನ ಮುಖ್ಯಸ್ಥರಾಗಿ ನೇಮಕಗೊಂಡು ಅವರ ಆಟ್ರ್ಸ್ ಕಾಲೇಜಿನ ಪ್ರಾಂಶುಪಾಲರಾಗಿ ಕೊನೆಯವರೆಗೆ ಅಲ್ಲಿಯೇ ಕೆಲಸ ಮಾಡಿದರು.
ಬಿ.ಎಂ.ಶ್ರೀಕಂಠಯ್ಯನವರು ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಅವಿಶ್ರಾಂತವಾಗಿ ದುಡಿದರು. ಅವರ ಪ್ರೀತಿಯ ವಿದ್ಯಾರ್ಥಿಗಳಾದ ಮಾಸ್ತಿ, ಕುವೆಂಪು, ಎಸ್.ವಿ.ರಂಗಣ್ಣ, ತೀ.ನಂ.ಶ್ರೀಕಂಠಯ್ಯ, ಜಿ.ಪಿ.ರಾಜ ರತ್ನಂ, ಡಿ.ಎಲ್.ನರಸಿಂಹಾಚಾರ್ ಮುಂತಾದವರಿಗೆ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಲು ಪ್ರೋತ್ಸಾಹಿಸಿದರು.
ಕನ್ನಡ ನಾಡಿಗೆ ಕನ್ನಡವೇ ಗತಿ, ಅನ್ಯಥಾ ಶರಣಂ ನಾಸ್ತಿ, ಇಂಗ್ಲೀಷಲ್ಲ, ಹಿಂದಿಯಲ್ಲ; ಕನ್ನಡ. ಈ ಕನ್ನಡ ಸಾವಿರಾರು ವರ್ಷಗಳಿಂದಲೂ ಬೆಳದುಕೊಂಡು ಬಂದಿರುವ ಭಾಷೆ. ಕನ್ನಡ ಭಾಷೆಗೆ ಯಾವ ರೀತಿಯಲ್ಲೂ ಅಪಾಯ ತಟ್ಟದ ಹಾಗೆ, ಕನ್ನಡ ನಾಡಿನಲ್ಲಿ ಅದಕ್ಕೆ ಪ್ರಧಾನ ಸ್ಥಾನವನ್ನು ಕೊಟ್ಟು, ಭಗವಂತನು ನಮಗೆ ಕೊಟ್ಟಿರುವ ಧನ ಬಲವನ್ನು ಮತ್ತು ಬುದ್ಧಿ ಬಲವನ್ನು ಅದಕ್ಕಾಗಿ ವಿನಿಯೋಗಿಸುವುದು ಕನ್ನಡಿಗರ ಕರ್ತವ್ಯ ಎಂದು 1928ರಲ್ಲಿ ಕಲ್ಬುರ್ಗಿಯಲ್ಲಿ ನಡೆದ 14ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಡಿದ ಮಾತುಗಳನ್ನು ಕನ್ನಡಿಗರಾದ ನಾವೆಲ್ಲರೂ ಅರ್ಥ ಮಾಡಿಕೊಂಡು ಮುನ್ನಡೆಯಬೇಕು.
ಬಿ.ಎಂ.ಶ್ರೀರವರ ಹೊಂಗನಸು, ಇಂಗ್ಲೀಷ್ ಗೀತೆಗಳು ಎಂಬ ಕವನ ಸಂಕಲನ 1921ರಲ್ಲಿ ಪ್ರಕಟಗೊಂಡಿತು. ನ್ಯೂಮನ್ ಕವಿ ಬರೆದ Ü Lead Kindly Light ಎಂಬ ಕವಿಯತೆಯನ್ನು ಕನ್ನಡದಲ್ಲಿ ಅನುವಾದ ಮಾಡಿದ ಕರುಣಾಳು ಬಾ ಬೆಳಕೆ ತುಂಬಾ ಪ್ರಸಿದ್ಧವಾಯಿತು.
ಕರುಣಾಳು, ಬಾ, ಬೆಳಕೆ,
ಮುಸುಕಿದೀ ಮಬ್ಬಿನಲಿ,
ಕೈ ಹಿಡಿದು ನಡೆಸೆನ್ನನು.
ಇರುಳು ಕತ್ತಲೆಯ ಗವಿ; ಮನೆ ದೂರ;
ಕನಿಕರಿಸಿ;
ಕೈ ಹಿಡಿದು ನಡೆಸೆನ್ನನು.
ಈ ಕತೆಯನ್ನು ಕೇಳಿದರೆ ದಾಸರ ಪದಗಳು ಕಣ್ಮುಂದೆ ಬಂದು ಆಲಿಸಿ ದಂತಾಗುತ್ತದೆ.
Lead Kindly Light ಕವಿತೆಯು ಕನ್ನಡದಲ್ಲಿ
ಪಡುವ ದಿಬ್ಬದ ಗೌಡನೊಬ್ಬನು
ಬಿಡದೆ ತೊರೆಯನ ಕೂಗಿಕೊಂಡನು
ತಡೆಯದೀಗಲೆ ಗಡುವ ಹಾಸು
ಕೊಡುವೆ ಕೇಳಿದ ಹೊನ್ನನು!
ಎಂಬಂಥ ಸಾಲುಗಳಿಂದ ಬರೆಯಲ್ಪಡುವ ಕತೆಯಲ್ಲಿ ಗ್ರಾಮೀಣ ಸೊಗಡಿದೆ.
ಬಿ.ಎಂ.ಶ್ರೀಯವರು ಕನ್ನಡದಲ್ಲಿ ಬರೆದ ಗದಾಯುದ್ಧ ಅಶ್ವತ್ಥಾಮನ್ ಪಾರಸಿಕರು ನಾಟಕಗಳು ಬಹಳ ಪ್ರಸಿದ್ಧವಾದವು. ಬಿ.ಎಂ.ಶ್ರೀ ರವರು ಕನ್ನಡ ಭಾಷೆಯ ಉಳಿಗಾಗಿ ಸಲ್ಲಿಸಿದ ಸೇವೆಗೆ ಮೈಸೂರಿನ ಮಹಾರಾಜರು 1938ರಲ್ಲಿ ರಾಜಸೇವಾಸಕ್ತ ಎಂಬ ಬಿರುದನ್ನು ನೀಡಿ ಗೌರವಿಸಿದರು. 1928ರಲ್ಲಿ ಗುಲ್ಬರ್ಗಾದಲ್ಲಿ ನಡೆದ 14ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಅದರ ಏಳಿಗೆಗಾಗಿ ಶ್ರಮಿಸಿದರು.
ಬಿ.ಎಂ.ಶ್ರೀರವರು ತಮ್ಮ ಜೀತದ ಕಾಲದಲ್ಲಿ ಕನ್ನಡ ಸಾಹಿತ್ಯಕ್ಕಾಗಿ ಮೀಸಲಿಟ್ಟ ಕನ್ನಡದ ಕಣ್ವ 1946ರ ಜನವರಿ 05ರಂದು ಧಾರವಾಡದಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲೇ ಇಹಲೋಕ ತ್ಯಜಿಸಿದರು.
ಇಂತಹ ಪೆÇ್ರ.ಬಿ.ಎಂ.ಶ್ರೀರವರ ಶಿಷ್ಯರು ಕನ್ನಡ ಸಾಹಿತ್ಯದ ದಿಗ್ಗಜರಾಗಿ ಸಾರಸ್ವತಲೋಕ ಎಂದೂ ಮರೆಯದಂತ ವಿಫುಲವಾದ ಸಾಹಿತ್ಯ ಕೃಷಿಯನ್ನು ನಡೆಸಿದವರು. ಇಂತಹ ಮೇರು ವ್ಯಕ್ತಿತ್ವದ ಕನ್ನಡದ ಕಣ್ವ ಬಿ.ಎಂ.ಶ್ರೀರವರಿಗೆ ನಮನಗಳು.
