ಬೆಂಗಳೂರು,ಮೇ 27- ಸಾವಿರಾರು ಕೋಟಿ ರೂಪಾಯಿ ಹೊಂದಿರುವ ಧನಿಕರು, ಐದಾರು ಕೋಟಿ ರೂಪಾಯಿ ಕಾರುಗಳನ್ನು ಹೊಂದಿರುವ ಶ್ರೀಮಂತರಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡಿದರೆ, ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗುವುದಿಲ್ಲವೇ ಎಂದು ನೂತನ ಸಚಿವ ಬಿ.ಎಸ್. ಸುರೇಶ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಪ್ರಕಟಿಸಿದಂತೆ ಸರ್ಕಾರದ ರಚಿಸಿದ ಮೊದಲ ಸಚಿವ ಸಂಪುಟದಲ್ಲೇ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಂಗೀಕಾರ ನೀಡಲಾಗಿದೆ. ವಿರೋಧ ಪಕ್ಷಗಳ ಹೇಳಿಕೆ ಬಾಲಿಶವಾಗಿದೆ ಎಂದು ಟೀಕಿಸಿದ್ದಾರೆ.
‘ಸಾರೆ ಜಹಾನ್ ಸೆ ಅಚ್ಚಾ’ ಹಾಡಿನ ಕರ್ತೃ ಕುರಿತ ಪಠ್ಯ ಕೈಬಿಟ್ಟ ದೆಹಲಿ ವಿವಿ
ಯಾವುದೇ ಯೋಜನೆಯನ್ನು ಪ್ರಕಟಿಸಿದ ಮಾರನೇಯ ದಿನವೇ ಕೊಡಲು ಸಾಧ್ಯವಿಲ್ಲ. ಐದು ಭರವಸೆಗಳನ್ನು ಈಡೇರಿಸಲು ಮೊದಲು ಫಲಾನುಭವಿಗಳನ್ನು ಗುರುತಿಸಬೇಕಿದೆ. ಯೋಜನೆ ಜಾರಿ ಮಾಡುವಾಗ ಷರತ್ತುಗಳು ಅನ್ವಯವಾಗುತ್ತವೆ. ಆದಾಯ ತೆರಿಗೆ ಪಾವತಿಸುವವರಿಗೆ, ಸಾವಿರ-ಐದುನೂರು ಕೋಟಿ ಒಡೆಯರಿಗೂ ಉಚಿತವಾಗಿ ವಿದ್ಯುತ್ ಕೊಡಬೇಕಾ. ಹಾಗಾದಾಗ ನಿಜವಾದ ಬಡವನಿಗೆ ಅನ್ಯಾಯವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಅಕ್ಕಿ ಕೊಡುವುದು ಹೊಸ ಯೋಜನೆಯಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಂತಃಕರಣದ ಯೋಜನೆ ಅದು. ಅದನ್ನು ಬಡವರಿಗಾಗಿ ಜಾರಿಗೆ ತಂದೇ ತರುತ್ತೇವೆ ಎಂದು ಹೇಳಿದರು.
#BSSuresh, #FreeElectricity,